ಸುದ್ದಿಮೂಲ ವಾರ್ತೆ
ರಾಯಚೂರು, ಏ.19: ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಬಸನಗೌಡ ದದ್ದಲ್ ರಾಹುಕಾಲ ಹಿನ್ನೆಲೆಯಲ್ಲಿ ತಹಶೀಲ್ ಕಚೇರಿ ಬಳಿ ಅರ್ಧ ಗಂಟೆ ಕಾದು ತಡವಾಗಿ ಒಳಗೆ ತೆರಳಿದರು.
ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿಯವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಆಗಮಿಸಿದ ಬಸನಗೌಡ ದದ್ದಲ್ ಕಚೇರಿ ಆವರಣದೊಳಕ್ಕೆ ಬರುವುದರೊಳಗೆ 1:15 ನಿಮಿಷವಾಗಿದ್ದ ಕಾರಣ ಸ್ವಾಮೀಯೊಬ್ಬ ರಿಂದ ಪಂಚಾಂಗ ಕೇಳಿದ್ದರಿಂದ 1 ಗಂ 39 ನಿಮಿಷದ ವರೆಗೆ ರಾಹುಕಾಲ ಇರೋದರಿಂದ ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ. ತಮ್ಮೊಟ್ಟಿಗೆ ಬಂದಿದ್ದ ಮುಖಂಡರ ಜೊತೆ ಮಾತುಕತೆ ನಡೆಸಿ ರಾಹುಕಾಲ ಹೋದ ಮೇಲೆ ನಂತರ ಕಚೇರಿ ಒಳಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ವಸಂತ ಕುಮಾರ, ಕೆ.ಶಾಂತಪ್ಪ, ಶರಣಪ್ಪ ಕಲಮಲಾ, ಪಂಪಾಪತಿ, ಬಸನಗೌಡ ಪಾಟೀಲ, ಶಿವಪ್ಪ ನಾಯಕ ಸೇರಿ ಅನೇಕ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು