ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.27: ಕೊಪ್ಪಳ ತಾಲೂಕಿನ ಎಂಎಸ್ ಪಿಎಲ್ ಕಾರ್ಖಾನೆಯವರು ಅಕ್ರಮವಾಗಿ ಬಳಕೆ ಮಾಡಿಕೊಳ್ಳಲು ತಂತಿ ಬೇಲಿ ಹಾಕಿಕೊಳ್ಳಲು ಮುಂದಾಗಿದ್ದಾರೆ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಡಿ ಎಚ್ ಪೂಜಾರ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಬಸಾಪುರ ಕೆರೆಯನ್ನು ಅತಿಕ್ರಮಿಸಿ ಇಲ್ಲಿಯ ಜನ ಜಾನುವಾರುಗಳಿಗೆ ಕುಡಿವ ನೀರು ಒದಗಿಸಬೇಕು. ಆದರೆ ರೈತರ ದನಗಳು ಇಳಿಯಲು ಆಗದಂತೆ ಆಳವಾಗಿ ತೆಗೆದಿದ್ದಾರೆ. ಇಲ್ಲಿ ಅಧಿಕಾರಿಗಳ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಎಂಎಸ್ ಪಿಎಲ್ ಕಾರ್ಖಾನೆಯವರು ಕೇವಲ 1035 ಎಕರೆ ಹೊರತು ಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಬಿಡಲು ಆದೇಶಿಸಿದೆ. ಆದರೆ ಕಾರ್ಖಾನೆಯವರು ಅಂತಿಮ ಆದೇಶ ಬರುವವರಿಗೆ ಫೆನ್ಸಿಂಗ್ ಹಾಕಬಾರದು. ಆದರೆ ರಾತ್ರೋರಾತ್ರಿ ಕಾರ್ಖಾನೆಯವರು ಕಟ್ಟುತ್ತಿದ್ದಾರೆ. ರಾತ್ರೋರಾತ್ರಿ ಕಂಪೌಂಡ ಕಟ್ಟುತ್ತಿದ್ದರೂ ಸುಮ್ಮನೆ ಇರುವುದು ಅಧಿಕಾರಗಳ ನಡೆ ಅನುಮಾನ ಮೂಡಿಸುತ್ತಿದೆ ಎಂದರು.
ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸ್ಪಷ್ಠವಾಗಿದೆ. ಜನಪ್ರತಿನಿಧಿಗಳ ಜನರ ಪರವಾಗಿ ನಿಲ್ಲಬೇಕೆಂದು ಆಗ್ರಹಿಸಿದರು. ಎಂಎಸ್ ಪಿಎಲ್ ಕಾರ್ಖಾನೆಯ ವಿರುದ್ದ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆ ಬಿ ಗೋನಾಳ, ಅಲ್ಲಮಪ್ರಭು ಬೆಟದೂರು. ಬಸವರಾಜ ಶೀಲವಂತರಮೂಕಪ್ಪ ಮೇಸ್ತ್ರಿ