ಸುದ್ದಿಮೂಲ ವಾರ್ತೆ ಮುದಗಲ್, ಡಿ.13:
ಮಕ್ಕಳಿಗೆ ಉತ್ತಮ ಶಿಕ್ಷಣದ ಜ್ಞಾನಾಭಿವೃದ್ಧಿಿ ಜತೆಗೆ ಸಂಸ್ಕಾಾರ ಕಲಿಸಬೇಕೆಂದು ಮುಪ್ಪಿಿನ ಬಸವಲಿಂಗ ಸ್ವಾಾಮೀಜಿ ಹೇಳಿದರು.
ಸಮೀಪದ ರಾಮತ್ನಾಾಳ ಗ್ರಾಾಮದ ಅನ್ನದಾನೇಶ್ವರ ಜಾತ್ರಾಾ ಮಹೋತ್ಸವ ಅಂಗವಾಗಿ ಜರುಗಿದ ಧಾರ್ಮಿಕ ಸಭೆ ಉದ್ಘಾಾಟಿಸಿ ಮಾತನಾಡಿದ ಅವರು ಅಧುನಿಕ ಯುಗದಲ್ಲಿ ಮಕ್ಕಳಿಗೆ ಜ್ಞಾನ ಇದ್ದರು, ಸಂಸ್ಕಾಾರ ಇರುವುದಿಲ್ಲ. ಇದರಿಂದಾಗಿ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾಾರಕ್ಕೆೆ ಆದ್ಯತೆ ನೀಡಿಬೇಕು. ಗ್ರಾಾಮದ ಜನರು ಜಾತಿ-ಭೇದವಿಲ್ಲದೆ ಜಾತ್ರೆೆಯಂತ ಕಾರ್ಯಕ್ರಮದಲ್ಲಿ ಪಾಲ್ಗೊೊಳ್ಳುವುದರಿಂದ ಬಾಂಧವ್ಯ ವೃದ್ಧಿಿಯಾಗುತ್ತದೆ ಎಂದು ಹೇಳಿದರು.
ಬೆಳಿಗ್ಗೆೆ ಅನ್ನದಾನೇಶ್ವರ ಶಿವಯೋಗಿಗಳ ಕರ್ತೃ ಗದ್ದಗೆಗೆ ರುದ್ರಾಾಭಿಷೇಕ, ಬಿಲ್ವಾಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಗಳು ನಡೆಸಲಾಯಿತು. ಅಪ್ಪುು ಮೇಲೋಡಿಸ್, ಅಗೋಲಿ ಯವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ಶಿವಲಿಂಗ ಸ್ವಾಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಪಾಟೀಲ್, ಪಿಎಲ್ಡಿ ಬ್ಯಾಾಂಕ್ ಮಾಜಿ ಅಧ್ಯಕ್ಷ ನಾಗನಗೌಡ ತುರಡಗಿ, ಕರುನಾಡ ವಿಜಯ ಸೇನೆ ಅಧ್ಯಕ್ಷ ಹನುಮಂತ ಬಡಿಗೇರ, ಪುರಸಭೆ ಮಾಜಿ ಸದಸ್ಯ ಎಸ್ ಆರ್ ರಸೂಲಸಾಬ, ಗ್ರಾಾಮ ಪಂಚಾಯಿತಿ ಸದಸ್ಯ ವೀರಭದ್ರಗೌಡ ತುರಡಗಿ, ಶ್ರೀನಿವಾಸಗೌಡ, ಎಎಸ್ಎ ರಾಮಪ್ಪ ಹಾಗೂ ರಾಮತ್ನಾಾಳ ಗ್ರಾಾಮಸ್ಥರಿದ್ದರು.
ಮಕ್ಕಳಿಗೆ ಜ್ಞಾನದ ಜತೆಗೆ ಸಂಸ್ಕಾರ ಕಲಿಸಿ : ಬಸವಲಿಂಗ ಸ್ವಾಮೀಜಿ

