ಸುದ್ದಿಮೂಲ ವಾರ್ತೆ ರಾಯಚೂರು, ಡಿ.24:
ಬಸವಣ್ಣನವರ ಸಿದ್ಧಾಾಂತಗಳು ಇಂದು ಜಗತ್ತಿಿಗೂ ಅತ್ಯವಶ್ಯಕವಾಗಿದ್ದು ಅವರು ಜಗತ್ತಿಿಗೆ ಗುರುವಾಗಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ್ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ 12ನೇ ಶತಮಾನ ಶಿವಶರಣೆಯರ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರಂತ ದಾಶರ್ನಿಕ ಪುರುಷ ಇನ್ನೂವರೆಗೂ ಬಂದಿಲ್ಲವೆಂದು ಹೇಳಿದರು. ಬಸವ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಶ್ಲಾಾಘಿಸಿದರು. ಯುವಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಪಾಲ್ಗೊೊಂಡು ಬಸವಣ್ಣನವರ ಆದರ್ಶಗಳನ್ನು ಪಾಲಿಸಿದರೆ ರಾಷ್ಟ್ರ ಬಲಿಷ್ಠವಾಗುತ್ತದೆ ಎಂದ ಅವರು ಬಸವ ಕೇಂದ್ರದ ಅಭಿವೃದ್ಧಿಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗಂಗಾಮತಸ್ಥ ಸಮಾಜದ ಜಿಲ್ಲಾಾಧ್ಯಕ್ಷ ಕೆ. ಶಾಂತಪ್ಪ, ಮಾತನಾಡಿ ನಗರದ ಬಸವ ಕೇಂದ್ರದಲ್ಲಿ ಎಲ್ಲ ಜಾತಿಯವರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಅನುಭವ ಮಂಟಪದ ತತ್ವ ಅಳವಡಿಸಿಕೊಂಡಿದೆ ಎಂದು ಶ್ಲಾಾಘಿಸಿದರು.
ಬಸವ ತತ್ವ ಪ್ರಚಾರಕ್ಕಾಾಗಿ ಶಾಲಾ ಕಾಲೇಜುಗಳಿಗೆ, ಸಂಘ ಸಂಸ್ಥೆೆಗಳಿಗೆ, ಅಷ್ಟೇ ಅಲ್ಲದೆ ಸ್ಲಂ ಏರಿಯಗಳಲ್ಲಿಯೂ ಕೂಡ ಮಹಾಮನೆಯನ್ನು ಹಾಗೂ ವ್ಯಕ್ತಿಿ ವಿಕಸನ ಶಿಬಿರಗಳನ್ನು ಏರ್ಪಡಿಸತ್ತ ಜನಮಾನಸದಲ್ಲಿ ಬಸವಪ್ರಜ್ಞೆ ಮೂಡಿಸುವ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಬಸವ ಕೇಂದ್ರದ ಕಟ್ಟಡಕ್ಕೆೆ 1 ಲ 25 ಸಾವಿರ ದೇಣಿಗೆ ನೀಡಿದ ವನಜಾಕ್ಷಿಿ ಗಿರಿಜಾ ಶಂಕರ ಅವರನ್ನು ಸನ್ಮಾಾನಿಸಿ ಗೌರವಿಸಲಾಯಿತು.
ಅಕ್ಕನ ಬಳಗದ ಶರಣೀಯರಾದ ಜಗದೇವಿ ಚೆನ್ನಬಸವ, ಪಾರ್ವತಿ ಪಾಟೀಲ್, ಪೂರ್ಣಿಮಾ ಪಾಟೀಲ್,ಡಾ: ಪ್ರಿಿಯಾಂಕಾ ಗದ್ವಾಾಲ್, ಸುಪ್ರಿಿಯಾ ಪಾಟೀಲ್ ಇವರೆಲ್ಲ ಮಹಾಂತ ಜೋಳಿಗೆಯ ಮಹತ್ವವನ್ನು ಸಾರುವ ಹಾಸ್ಯ ಮಿಶ್ರಿತ ರೂಪಕವನ್ನು ಯಶಸ್ವಿಿಯಾಗಿ ನಡೆಸಿಕೊಟ್ಟು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ಗೌರವಾಧ್ಯಕ್ಷ ಹರವಿ ನಾಗನಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಿರಿಜಾ ಶಂಕರ, ವಿಜಯಕುಮಾರ ಸಜ್ಜನ್, ಚನ್ನಬಸವ ಇಂಜಿನಿಯರ, ಸರೋಜಾ ಮಾಲಿಪಾಟೀಲ್ ಉಪಸ್ಥಿಿತರಿದ್ದರು.
ಬಸವಣ್ಣ ಜಗತ್ತಿಗೆ ಗುರುವಾಗಿದ್ದಾರೆ – ವಸಂತಕುಮಾರ

