ಬಸವಣ್ಣನ ತತ್ವಗಳು ಇಂದಿನ ಕಾಲಕ್ಕೆ ಅತ್ಯಗತ್ಯವಾಗಿದೆ:ಡಾ. ನೀಲಾಂಬಿಕಾ
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಿಗೆ ಸನ್ಮಾನಿಸಲಾಯಿತು.
ಜೇವರ್ಗಿ : ೧೨ನೇ ಶತಮಾನದ ವಿಶ್ವಗುರು ಬಸವಣ್ಣನ ತತ್ವಗಳು ಇಂದಿನ ಕಾಲಕ್ಕೆ ಅತ್ಯಗತ್ಯವಾಗಿದೆ. ಅವುಗಳನ್ನು ನಾವೆಲ್ಲರೂ ಪಾಲಿಸಬೇಕು. ನಮ್ಮ ಕಷ್ಟಕ್ಕೆಲ್ಲ ಪರಿಹಾರ ಬಸವಣ್ಣ ಎಂದು ಶರಣ ಸಾಹಿತಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅಭಿಮತ ಪಟ್ಟರು.
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಸವಕೇಂದ್ರ ಮಹಿಳಾ ಘಟಕದ ಮೂರನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು.
ಕಾರ್ಯಕ್ರಮವನ್ನುದ್ದೆಶಿಸಿ ಡಾ. ನೀಲಾಂಬಿಕಾ ಮಾತನಾಡಿ ಸಮಾನತೆಯ ಹರಿಕಾರ ಬಸವಣ್ಣ ಈ ಭೂಮಿ ಮೇಲೆ ಜನಿಸದೇ ಇದ್ದರೇ ಮಹಿಳೆಯರ ಪರಿಸ್ಥಿತಿ ತುಂಬಾ ಕಷ್ಟಕರವಾಗುತ್ತಿತ್ತು. ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಕಡಿಮೆ ಇರಲು ಬಸವ ಸಂಸ್ಕೃತಿ ಕಾರಣ. ಬಸವಣ್ಣನ ತತ್ವಗಳು ಇಂದಿನ ಕಾಲಕ್ಕೆ ಅತ್ಯಗತ್ಯವಾಗಿದೆ. ಅವುಗಳನ್ನು ನಾವೆಲ್ಲರೂ ಪಾಲಿಸಬೇಕು. ವಿಶ್ವಗುರು ಬಸವಣ್ಣ ಕೇವಲ ವ್ಯಕ್ತಿಯಷ್ಟೇ ಅಲ್ಲ, ಅವರೊಂದು ದೊಡ್ಡ ಶಕ್ತಿ, ಸಮಸ್ಯೆಗಳ ನಿವಾರಕ ನಮ್ಮ ಕಷ್ಟಕ್ಕೆಲ್ಲ ಪರಿಹಾರ ಬಸವಣ್ಣ. ಬಸವಣ್ಣನ ತತ್ವಾದರ್ಶದ ಮೇಲೆ ಈ ನಾಡಿನ ಅನೇಕ ಮಠಗಳು ಕಾರ್ಯನಿರ್ವಹಿಸುತ್ತಿವೆ.
ಮಹಿಳಾ ಘಟಕದ ಅದ್ಯಕ್ಷೆ ರಾಜೇಶ್ವರಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೇಮಾ ನರಿಬೋಳ ಸ್ವಾಗತಿಸಿದರು, ಸುಧಾ ಬೆಣ್ಣೂರ ನಿರೂಪಿಸಿ ವಂದಿಸಿದರು.
ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ಅದ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕಿ ಮಹಾದೇವಿ ಶಿವಸಿಂಪಿ, ಕಲಬುರಗಿ ಜಯನಗರದ ನೀಲಮ್ಮನ ಬಳಗದ ಅದ್ಯಕ್ಷೆ ಜಯಶ್ರೀ ಚಟ್ನಳ್ಳಿ, ಸಾವಿತ್ರಿ ಭೀಮಾಶಂಕರ ಹಳ್ಳಿ, ಲಕ್ಷ್ಮಿ ಹರವಾಳ, ಶ್ರೀಮಂತ ಭಂಟನೂರ, ಜಯಶ್ರೀ ಮಡಿವಾಳಪ್ಪ ಚನ್ನೂರ, ಬಸವಕೇಂದ್ರದ ಅದ್ಯಕ್ಷ ಶರಣಬಸವ ಕಲ್ಲಾ, ಗೌರವಾದ್ಯಕ್ಷ ಶಿವಣ್ಣಗೌಡ ಪಾಟೀಲ ಕಲ್ಲಹಂಗರಗಾ, ಷಣ್ಮುಖಪ್ಪಗೌಡ ಹಿರೇಗೌಡ, ರಾಜಶೇಖರಗೌಡ ಜೈನಾಪೂರ, ನೀಲಕಂಠ ಹಳಿಮನಿ, ಸಿದ್ದಣ್ಣ ಯರಗಲ್, ಲಕ್ಷ್ಮಿಕಾಂತ್ ನಾಗರವತ್, ಸದಾನಂದ ಪಾಟೀಲ, ಭಗವಂತ್ರಾಯ ಬೆಣ್ಣೂರ, ಬಸವರಾಜ ಅರಳಗುಂಡಗಿ, ಅಶೋಕ ಸನಗುಂದಿ, ಈರಣ್ಣ ಭೂತಪೂರ, ಸುನೀಲ ಹಳ್ಳಿ, ಮಲ್ಲಿಕಾರ್ಜುನ ಬಿರಾದಾರ, ವಿಜಯಕುಮಾರ ಪಾಟೀಲ, ಅಖಂಡೆಪ್ಪ ಕಲ್ಲಾ, ಗುರುಗೌಡ ಮಾಲಿಪಾಟೀಲ, ಮಲ್ಕಣಗೌಡ ಹೆಗ್ಗಿನಾಳ, ದಯಾನಂದ ಡೂಗನಕರ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಮಹಿಳಾ ಘಟಕದ ಅದ್ಯಕ್ಷೆ ರಾಜೇಶ್ವರಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೇಮಾ ನರಿಬೋಳ ಸ್ವಾಗತಿಸಿದರು, ಸುಧಾ ಬೆಣ್ಣೂರ ನಿರೂಪಿಸಿ ವಂದಿಸಿದರು.
“ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಅದ್ಯಕ್ಷ ರಾಜಶೇಖರ ಸೀರಿ, ಜಾಗತಿಕ ಲಿಂಗಾಯತ ಮಹಾಸಭಾ ಅದ್ಯಕ್ಷ ನೀಲಕಂಠ ಅವಂಟಿ, ವೈಜ್ಞಾನಿಕ ಸಂಶೋಧನಾ ಪರಿಷತ್ ಅದ್ಯಕ್ಷ ಶಿವಕುಮಾರ ಕಲ್ಲಾ, ನಿಂಗಣ್ಣ ಹಳಿಮನಿ, ರಾಮಣ್ಣ ತೊನ್ಸಳ್ಳಿಕರ್ ಅವರನ್ನು ಮಹಿಳಾ ಘಟಕದ ವತಿಯಿಂದ ಸತ್ಕರಿಸಲಾಯಿತು.”