ಯಲಬುರ್ಗಾ,ಮೇ.19: ರಂಗಭೂಮಿಯಲ್ಲೇ ನಿಜವಾದ ಮತ್ತು ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ ಹೇಳಿದರು.
ಯಲಬುರ್ಗಾ ಪಟ್ಟಣದ ಮಂಡಲಗಿರಿ ನಾಟಕ ಕಂಪನಿಯವರು ಹಮ್ಮಿಕೊಂಡ ಎಲ್ಲಿ ಅದೀ ಮಲ್ಯ ಎಂಬ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.ಚಲನಚಿತ್ರದಲ್ಲಿ ದೃಶ್ಯ ಮತ್ತು ನಟನೆಯಲ್ಲಿ ಏನಾದರೂ ಲೋಪದೋಷಗಳಾದರೆ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆ ರಂಗಭೂಮಿ ಪ್ರದರ್ಶನದಲ್ಲಿ ತಿದ್ದುಪಡಿಗೆ ಹಾಗೂ ತಿರುಚಲು ಯಾವುದೇ ಅವಕಾಶ ಇರುವುದಿಲ್ಲ ಎಂದರು.ರಂಗಭೂಮಿಯಲ್ಲಿ ನಟನೆ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ.
ರಂಗಕಲೆಯನ್ನು ಕರಗತ ಮಾಡಿಕೊಂಡರೆ ಉತ್ತಮ ನಾಟಕಗಳನ್ನು ಹೊರತರಬಹುದು ಎಂಬುದಕ್ಕೆ ಇಡೀ ರಾಜ್ಯದಲ್ಲೇ ಅತ್ಯುತ್ತಮ ನಾಟಕ ಕಂಪನಿ ಅದು ನಮ್ಮ ತಾಲೂಕಿನ ಮಂಡಲಗಿರಿ ಕಂಪನಿ ಕಲಾವಿದರೆ ಪ್ರಮುಖ ಉದಾಹರಣೆಯಾಗಿದ್ದಾರೆ. ಒಂದು ಕಾಲದಲ್ಲಿ ರಂಗಭೂಮಿಯೂ ಕೆಲವರ ಸ್ವತ್ತಾಗಿತ್ತು.
ವಿವಿಧ ಕ್ಷೇತ್ರದ ರಂಗಾಸಕ್ತರಿಂದ ರಂಗಭೂಮಿ ಪ್ರಯೋಗಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ವಿನೂತನ ಪರಂಪರೆ ಮುಂದುವರಿಯಬೇಕಿದೆ ಎಂದರು.ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯತೆಯನ್ನು ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ.
ರಂಗಭೂಮಿ ಕಲೆಯನ್ನು ಕಲಾವಿದರು ಮತ್ತು ಕಲಾಸಕ್ತರು ಹೆಚ್ಚೆಚ್ಚು ಪ್ರೋತ್ಸಾಹಿಸುವ ಮೂಲಕ ಅದನ್ನು ಉಳಿಸಿ, ಬೆಳೆಸಬೇಕು ಎಂದರು. ರಾಜ್ಯ ಸರ್ಕಾರ ನಾಟಕ ಕಂಪನಿ ಅವರಿಗೆ. ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇಂಥವರನ್ನು ಗುರುತಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಈರಣ್ಣ ಹುಬ್ಬಳ್ಳಿ ಪ್ರಸ್ತಾಪವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ಅಂಬರೀಶ್ ಹುಬ್ಬಳ್ಳಿ. ಕಳಕಪ್ಪ ತಳವಾರ್. ನಟರಾಜ್ ಬಿದರಿ. ಸಂಗಣ್ಣ ತೆಂಗಿನಕಾಯಿ. ಪಟ್ಟಣದ ಗಣ್ಯ ವ್ಯಕ್ತಿಗಳು ಇದ್ದರು