ಸುದ್ದಿಮೂಲ ವಾರ್ತೆ
ಕುಷ್ಟಗಿ, ಆ.10:ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ವಿಜಯ ಮಹಾಂತೇಶ ಕುಷ್ಟಗಿ ಹಾಗೂ ಕಾರ್ಯದರ್ಶಿಯಾಗಿ ಬಸವರಾಜ ಲಿಂಗಸುಗೂರು ಅವರು ಚುನಾಯಿತರಾಗಿದ್ದಾರೆ.
ಕುಷ್ಟಗಿ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ವಕೀಲರ ಸಂಘದ ಕಚೇರಿಯಲ್ಲಿ ಒಟ್ಟು 203 ವಕೀಲ ಸದಸ್ಯರ ಬಲ ಹೊಂದಿರುವ ಸಂಘಕ್ಕೆ ಗುರುವಾರ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು.
3 ಮತಗಳು ಅಸಿಂಧು ಆಗಿದ್ದು, ಉಳಿದ ಒಟ್ಟು 200 ವಕೀಲ ಸದಸ್ಯರು ಮತ ಹಕ್ಕು ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ವಿಜಯ ಮಹಾಂತೇಶ ಕುಷ್ಟಗಿ ಹಾಗೂ ನಾಗರಾಜ ಕೆ. ಅವರ ಪೈಕಿ ವಿಜಯ ಮಹಾಂತೇಶ ಕುಷ್ಟಗಿ ಅವರು 54 ಹೆಚ್ಚು ಮತಗಳನ್ನು ಆಯ್ಕೆಯಾದರು.
ಅದೇರೀತಿ ಕಾರ್ಯದರ್ಶಿ ಸ್ಥಾನಕ್ಕೆ ಬಾಲನಗೌಡ ಗೌಡರ ಹಾಗೂ ಬಸವರಾಜ ಲಿಂಗಸುಗೂರು ಇವರ ನಡುವೆ ನಡೆದ ಪೈಪೋಟಿಯಲ್ಲಿ ಬಸವರಾಜ ಲಿಂಗಸುಗೂರು ಅವರು 9 ಮತಗಳನ್ನು ಹೆಚ್ಚು ಪಡೆದು ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ದೊಡ್ಡಮನಿ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮೈನುದ್ದೀನ್ ಮುಲ್ಲಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸ್.ಎನ್. ನಾಯಕ, ರಮೇಶ ಪಿ., ಟಿ.ಎಚ್. ಆಡಿನ, ಎಸ್.ಎಂ.ಶೆಟ್ಟರ್ ಘೋಷಿಸಿದರು.
ವಿಜಯೋತ್ಸವ: ವಕೀಲರ ಸಂಘದ ನೂತನ ಅಧ್ಯಕ್ಷ ಹಾಗೂ ಇತರೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ನೂತನ ಪದಾಧಿಕಾರಿಗಳಿಗೆ ವಕೀಲರು ಪುಷ್ಪ ಅರ್ಪಿಸಿ ಹಾಗೂ ಸಿಹಿ ತಿನ್ನಿಸಿ ಗೌರವಿಸಿ ಸಂಭ್ರಮಿಸಿದರು.
ಈ ವೇಳೆ ಹಿರಿಯ ವಕೀಲ ನಾಗಪ್ಪ ಸೂಡಿ, ಫಕೀರಪ್ಪ ಚಳಗೇರಾ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಗೋಡಿ, ಸಿ.ಪಿ.ಪಾಟೀಲ್, ಮಧುಸೂದನ್ ಬಿ., ವೆಂಕಟೇಶ್ ಇಳಗೇರ, ಶಂಕರಗೌಡ ಪಾಟೀಲ್, ಎಸ್.ವೈ.ಬುಕನಟ್ಟಿ, ಆರ್.ಎಸ್.ಗುರುಮಠ, ಉಮೇಂದ್ರ ಮಾರನಾಳ, ಬಸವರಾಜ ಇದ್ಲಾಪುರ, ಚಂದ್ರಶೇಖರ್ ಉಪ್ಪಿನ, ಪಿ.ಎನ್ ಸೂಡಿ, ಮಲ್ಲಿಕಾರ್ಜುನ ಕೊನಸಾಗರ, ಆರ್.ವೈ. ಮುಲಿನಮನಿ, ಎಸ್.ಈ.ಚಿನಿವಾಲರ್, ಎಚ್.ಎಸ್.ಬಂಡಿ, ಬಿ.ಆರ್.ಪಾಟೀಲ್, ಎಂ.ಪಿ ಪಾಟೀಲ್, ಮರಿಗೌಡ ಬಾದರದಿನ್ನಿ, ಆರ್.ಎಸ್.ಕಂದಗಲ್ ಇತರರು ಉಪಸ್ಥಿತರಿದ್ದರು.