ಸುದ್ದಿಮೂಲ ವಾರ್ತೆ ಸಿಂಧನೂರು, ಜ.05:
ನಗರದ ಬಸ್ ನಿಲ್ದಾಾಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಕೆಆರ್ಡಿಬಿಯಿಂದ ಮಂಜೂರಾಗಿ ಬಂದಿದ್ದ 14 ಬಸ್ಗಳ ಉದ್ಘಾಾಟನೆ ಹಾಗೂ ಶಾಸಕರೊಂದಿಗೆ ವಿದ್ಯಾಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರಿಗೆ ಮಾತನಾಡಲು ಅವಕಾಶ ನೀಡದೇ ಅಪಮಾನ ಮಾಡಿದ್ದನ್ನು ವಿರೋಧಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಸರಕಾರಿ ಕಾರ್ಯಕ್ರಮದಲ್ಲಿ ಶಿಷ್ಠಾಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಾಪಕರ ವಿರುದ್ದ ಘೋಷಣೆಗಳನ್ನು ಕೂಗಿದರು. ಮೊದಲು ಡಿಪೋ ಗೇಟ್ಗಳನ್ನು ಬಂದು ಮಾಡಿ ಆಕ್ರೋೋಶ ವ್ಯಕ್ತಪಡಿಸಿದರು. ನಂತರ ಬಸ್ ನಿಲ್ದಾಾಣದ ಗೇಟ್ಗೆ ಬಸನಗೌಡ ಬಾದರ್ಲಿ ಹಿಂಬಾಲಕರು ಬಸ್ಗಳು ಹೊರಬರದಂತೆ ಪ್ರತಿಭಟನೆ ನಡೆಸಿದರು. ಘಟಕ ವ್ಯವಸ್ಥಾಾಪಕ ಹೊನ್ನಪ್ಪ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಪಟ್ಟು ಹಿಡಿದದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಹಾಗೂ ಬಸನಗೌಡ ಬಾದರ್ಲಿ ಬೆಂಗಲಿಗರ ನಡುವೆ ವಾಕ್ಸಮರ ನಡೆಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಪೊಲೀಸರು ಬೆಂಗಲಿಗರನ್ನು ಬಂಧಿಸಿದರು. ನಂತರ ಕೆಲವೇ ನಿಮಿಷಗಳಲ್ಲಿ ಬಿಡುಗಡೆ ಮಾಡಲಾಯಿತು.
ಕ್ಷಮೆ ಕೇಳಿದ ವ್ಯವಸ್ಥಾಾಪಕ:
ಕೆಕೆಆರ್ಡಿಬಿಯಿಂದ ಬಿಡುಗಡೆಯಾಗಿದ್ದ ವಿದ್ಯಾಾರ್ಥಿಗಳ ಬಸ್ಗಳನ್ನು ಮುಖ್ಯಮಂತ್ರಿಿಗಳು ಹಾಗೂ ಸಾರಿಗೆ ಸಚಿವರು ಉದ್ಘಾಾಟನೆ ಮಾಡಿದ್ದರು. ಆದರೆ ಇಂದು ಶಾಸಕ ಹಂಪನಗೌಡ ಬಾದರ್ಲಿ ಅವರು ವಿದ್ಯಾಾರ್ಥಿಗಳೊಂದಿಗೆ ಸಂವಾದ ಮಾಡಲು ಉದ್ದೇಶಿಸಿದ ಹಿನ್ನೆೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆೆ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರನ್ನು ಆಹ್ವಾಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡದೇ ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಘಟಕ ವ್ಯವಸ್ಥಾಾಪಕ ಹೊನ್ನಪ್ಪ ಅವರು ಬಸನಗೌಡ ಬಾದರ್ಲಿ ಹಿಂಬಾಲಕರಲ್ಲಿ ಕ್ಷಮೆ ಕೇಳಿದ್ದರಿಂದ ಪರಿಸ್ಥಿಿತಿ ತಿಳಿಯಾಯಿತು.
ಬೀದಿಗೆ ಬಂತು ಬಾದರ್ಲಿ ಕಲಹ:
ಕಳೆದ ವಿಧಾನಸಭಾ ಚುನಾವಣೆಯಿಂದ ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ಬಾದರ್ಲಿ ಮುಸುಕಿನ ಗುದ್ದಾಾಟ ನಿರಂತರವಾಗಿಯೇ ನಡೆದಿತ್ತು. ಆದರೆ ಇಂದು ಈರ್ವರ ನಡುವಿನ ಮನಸ್ತಾಾಪ, ವಿರೋಧ ಭಾವನೆ ಹೊರ ಬಿದ್ದಿದೆ. ಇದು ಸಹಜವಾಗಿ ಕಾಂಗ್ರೆೆಸ್ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಅಸೂಯೆ ಮೂಡಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಇದು ವಿಪಕ್ಷಗಳಿಗೆ ಆಹಾರವಾಗಲಿದೆ.
ಬೀದಿಗೆ ಬಂದ ಬಾದರ್ಲಿ – ಬಾದರ್ಲಿ ಕಲಹ ವಿದ್ಯಾಾರ್ಥಿ ರಥ ಬಸ್ಗಳ ಉದ್ಘಾಾಟನೆ ಕಾರ್ಯಕ್ರಮ ವಿಧಾನ ಪರಿಷತ್ ಶಾಸಕರಿಗೆ ಅಪಮಾನ ಬಸನಗೌಡ ಬಾದರ್ಲಿ ಬೆಂಬಲಿಗರಿಂದ ಪ್ರತಿಭಟನೆ: ಬಂಧನ-ಬಿಡುಗಡೆ

