ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.10:
ಹಮಾಲಿ ಕಾರ್ಮಿಕರಿಗೆ ಮಹಾರಾಷ್ಟ್ರ, ಕೇರಳ ಮಾದರಿಯಲ್ಲಿ ಉದ್ಯೋೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಕಲ್ಯಾಾಣ ಮಂಡಳಿ ರಚಿಸಬೇಕೆಂದು ಬಜಾರ್ ಹಮಾಲಿ ಕಾರ್ಮಿಕರ ಸಂಘ ತಾಲೂಕ ಸಮಿತಿಯ ಪದಾಧಿಕಾರಿಗಳು ಒತ್ತಾಾಯಿಸಿದರು.
ಬುದುವಾರ ಅಜರ್ ಜೈಹಿದುದ್ದೀನ್ ಪಾಶಾ ವೃತ್ ದಿಂದ ಮಿನಿ ವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾಾರರಿಗೆ ಮನವಿ ಪತ್ರ ಸಲ್ಲಿಸಿ, ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ ಶ್ರಮಜೀವಿಗಳಾದ, ಎಪಿಎಂಸಿ. ಮಿಲ್-ಗೋಡಾನ್, ವೇರ್ಹೌಸ್, ನಗರ, ಪಟ್ಟಣದ ಬಜಾರ್, ಬಸ್ಸ್ ನಿಲ್ದಾಾಣ, ರೈಲ್ವೆೆ ಸ್ಟೇಷನ್ ಸೇರಿದಂತೆ ವಿವಿಧ ಕಡೆ ಲೋಡಿಂಗ್, ಅನ್ ಲೋಡಿಂಗ್ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರ ಬದುಕಿನ ಪ್ರಮುಖ ಪ್ರಶ್ನೆೆಗಳಿಗಾಗಿ, ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಾಯಿಸಿದರು.
ಬಜಾರ್ ಹಮಾಲಿ ಕಾರ್ಮಿಕರ ಸಂಘದಿಂದ ಏಳು ಬೇಡಿಕೆಗಳ ಮನವಿ ಪತ್ರವನ್ನು ಸರಕಾರಕ್ಕೆೆ ಸಲ್ಲಿಸಿದರು. ಈ ಸಂದಭದಲ್ಲಿ ಕೆಪಿಆರ್ಎಸ್ ಜಿಲ್ಲಾಾ ಕಾರ್ಯದರ್ಶಿ ನರಸಣ್ಣ ನಾಯಕ, ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿಿ, ಶಕುಂತಲಾ ದೇಸಾಯಿ, ಸಿಡಬ್ಲ್ಯೂ, ಎ್.ಐ. ಜಿಲ್ಲಾಾ ಉಪಾಧ್ಯಕ್ಷ ಯುಸ್ೂ ಗ್ವಾಾಡಿಕಾರ ಮಾತನಾಡಿದರೆ, ತಾಲೂಕ ಸಮಿತಿಯ ಅಧ್ಯಕ್ಷ ಮೊಹಮ್ಮದ ಯೂಸ್ೂ, ಹನಮಯ್ಯ ನಾಯಕ, ಹನುಮಂತ್ರಾಾಯ ಗಾಲಿ ಸೇರಿದಂತೆ ಅನೇಕರಿದ್ದರು.
ಉದ್ಯೋಗ ಭದ್ರತೆಗೆ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಬಜಾರ್ ಹಮಾಲಿಗಳ ಆಗ್ರಹ

