ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.11:
ಮೀಸಲಾತಿ ವರ್ಗೀಕರಣ ಜಾರಿಯಿಂದ 64ಜಾತಿಗಳಿಗೆ ಸಿ ಗ್ರೂಪ್ ನೇಮಕಾತಿಯಲ್ಲಿ ಅನ್ಯಾಾಯವಾಗುತ್ತಿಿದೆ ಮತ್ತೊೊಮ್ಮೆೆ ಪರಿಶೀಲಿಸಿ ಜಾರಿ ಮಾಡುವಂತೆ ಡಿಸೆಂಬರ್ 17ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಬಂಜಾರ ಸಮಾಜದ ಮುಖಂಡ ಲಾಲಪ್ಪ ರಾಠೋಡ ತಿಳಿಸಿದರು.
ಪಟ್ಟಣದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡುತ್ತ ಮೀಸಲಾತಿ ವರ್ಗೀಕರಣದಿಂದ ಲಂಬಾಣಿ, ಕೊರಮ, ಕೊರಚ ಸೇರಿ ನಾನಾ ಜಾತಿಗಳಿಗೆ ಸಿ ದರ್ಜೆ ನೇಮಕಾತಿ ಸೇರಿ ಇನ್ನುಳಿದೆಡೆ ಅನ್ಯಾಾಯವಾಗುತ್ತಿಿದೆ. ಸರಕಾರ ಮತ್ತೊೊಮ್ಮೆೆ ಪುನಃ ಪರಿಶೀಲಿಸಿ ಜಾರಿ ಮಾಡಬೇಕೆಂದು ಒತ್ತಾಾಯ ಮಾಡಲಾಗುವುದು ಹಾಗೂ ಡಿ,14ರಂದು ಬೆಳಿಗ್ಗೆೆ ಲಿಂಗಸಗೂರು ತಾಲೂಕಾ ಬಂಜಾರ ಸಮಾಜದ ನೂತನ ತಾಲೂಕಾಧ್ಯಕ್ಷರ ಆಯ್ಕೆೆ ಕೂಡಾ ನಡೆಯಲಿದೆ ಎಂದರು. ಈ ವೇಳೆ ದೇವಪ್ಪ ರಾಠೋಡ್, ವೆಂಕಟೇಶ ರಾಠೋಡ, ಲಕ್ಷ್ಮಣ ಚಲುವಾಂತ ಜಾಧವ, ಪಾಂಡುರಂಗ ಸೇರಿ ಇತರರಿದ್ದರು.
ಮೀಸಲಾತಿ ವರ್ಗೀಕರಣ ವಿರೋಧಿಸಿ 17ರಂದು ಬೆಳಗಾವಿ ಚಲೊ : ಲಾಲಪ್ಪ ರಾಠೋಡ

