ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.08:
ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕೊಟ್ಟಿಿರುವ ಭರವಸೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಡಿಸೆಂಬರ್ 10 ರಂದು ‘ಬೆಳಗಾವಿ ಚಲೋ’ವನ್ನು ಹಮ್ಮಿಿಕೊಂಡಿದೆ.
ಈ ಕುರಿತು ಸಂಘಟನೆಯ ರಾಜ್ಯಾಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಅವರು, ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಪ್ರೋೋತ್ಸಾಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಸೇರಿ ಮಾಸಿಕ ರೂ.15,000 ಗೌರವಧನ ಪಾವತಿಸಬೇಕು. ರಾಜ್ಯ ಸರ್ಕಾರ ಮಾತುಕೊಟ್ಟಂತೆ, ಏಪ್ರಿಿಲ್ ತಿಂಗಳಿನಿಂದ ಮಾಸಿಕ ರೂ.10,000 ಗ್ಯಾಾರಂಟಿ ಮತ್ತು ಅಂಗನವಾಡಿ, ಬಿಸಿ ಊಟ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಿರುವಂತೆ ಆಶಾ ಕಾರ್ಯಕರ್ತೆಯರಿಗೂ ಸಹ ಭರವಸೆ ಕೊಟ್ಟಂತೆ ರೂ.1,000 ಇದೇ ಏಪ್ರಿಿಲ್ ನಿಂದಲೇ ಅನ್ವಯಿಸಿ ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರ ಹೆಚ್ಚಿಿಸಿರುವ ರೂ.1,500 ಪ್ರೋೋತ್ಸಾಾಹ ಧನ ಈ ಕೂಡಲೇ ಬಿಡುಗಡೆ ಮಾಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. ಆಶಾ ಸುಗಮಕಾರರಿಗೆ ಕಳೆದ ವರ್ಷ ಹೆಚ್ಚಳ ಆದ ಗೌರವಧನ ಒಂದು ವರ್ಷದ ಬಾಕಿ ಮಾಸಿಕ ರೂ.1500 ರಂತೆ ಎಲ್ಲಾಾ ಸುಗಮಕಾರರಿಗೆ ನೀಡಿ. (ಆರ್ಒಪಿ: 2025-26 ರಂತೆ ರೂ.7500) ಪಾವತಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಿಮ ಬಂಗಾಳ ಮಾದರಿಯಲ್ಲಿ ಇಡಗಂಟು ನೀಡಬೇಕು. ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಿಸಬೇಕು ಎಂದು ಅವರು ಆಗ್ರಹಿಸಿದರು.
ಬೆಳಗಾವಿ ಚಲೋ, ಬೃಹತ್ ಹೋರಾಟದ ಕುರಿತು ಪೋಸ್ಟರ್ ಅನ್ನು ಕರ್ನಾಟಕರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ.ನಾಗಲಕ್ಷ್ಮಿಿ ಅವರು ಬಿಡುಗಡೆ ಮಾಡಿದರು. ಸಂಘದ ಜಿಲ್ಲಾಾ ಗೌರವಾಧ್ಯಕ್ಷರಾದ ಎ.ಶಾಂತಾ, ಬಳ್ಳಾಾರಿ ನಗರದ ಅಧ್ಯಕ್ಷೆೆ ರೇಷ್ಮಾಾ, ಮುಖಂಡರುಗಳಾದ ಖೈರೂನ್ ಬೀ, ಶಿವಕುಮಾರಿ, ರೇಣುಕಾ, ಶ್ರೀದೇವಿ ಇನ್ನಿಿತರರು ಈ ಸಂದರ್ಭದಲ್ಲಿದ್ದರು.

