ಎಚ್.ಎಂ. ಮಹೇಂದ್ರ ಕುಮಾರ್ ಬಳ್ಳಾರಿ, ಜ.07:
ಬಳ್ಳಾಾರಿಯ ಬ್ಯಾಾನರ್ ಗಲಾಟೆಯ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಿಸಲು ಪೂರಕವಾದ ಎಲ್ಲಾಾ ಸಿದ್ಧತೆಗಳನ್ನು ಗೃಹ ಇಲಾಖೆ ನಡೆಸಿದೆ. ಇಡೀ ಪ್ರಕರಣದ ಸಾಕ್ಷಿಗಳನ್ನು ಸಂಗ್ರಹಿಸಿ ದಾಖಲೆಗಳನ್ನು ಸಿದ್ದಪಡಿಸಿದ ನಂತರ ತನಿಖಾ ಏಜೆನ್ಸಿಿಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಘೋಷಣೆ ಮಾಡುತ್ತಾಾರೆ ಎಂದು ಮೂಲಗಳು ತಿಳಿಸುತ್ತಿಿವೆ.
ಆದರೆ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಜಿ. ಜನಾರ್ಧನರೆಡ್ಡಿಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಾಮಿ, ಕೇಂದ್ರ ಸಚಿವ ವಿ. ಸೋಮಣ್ಣ, ಮುಖಂಡ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿಿ ಅವರು, ಪ್ರಕರಣವನ್ನು ‘ಸಿಬಿಐ ಅಥವಾ ಹೈಕೋರ್ಟ್ ನ್ಯಾಾಯಾಧೀಶ’ರಿಂದ ತನಿಖೆಗೆ ಒಳಪಡಿಸಲು ಆಗ್ರಹಿಸಿದ್ದಾಾರೆ. ಇಲ್ಲವಾದಲ್ಲಿ ಬಿಜೆಪಿಯ ಬೆಂಬಲ ಪಡೆದು ‘ಬಳ್ಳಾಾರಿ ಟು ಬೆಂಗಳೂರು ಪಾದಯಾತ್ರೆೆ’ ನಡೆಸುವುದಾಗಿ ಬಿ. ಶ್ರೀರಾಮುಲು ಘೋಷಣೆ ಮಾಡಿದ್ದಾಾರೆ.
ಪೊಲೀಸ್ ಮೂಲಗಳ ಪ್ರಕಾರ, ಜ. 1 ಸಂಜೆ ಆರಂಭವಾದ ಘಟನೆಯಲ್ಲಿ ಶಾಸಕರ ಆಪ್ತ ಸತೀಶ್ ರೆಡ್ಡಿಿ ಅವರನ್ನು ಥಳಿಸಿದ ನಂತರ, ಅವರು ಬಳ್ಳಾಾರಿ ಹೃದಯಾಲಯಕ್ಕೆೆ ಹೋಗಿ ಚಿಕಿತ್ಸೆೆ ಪಡೆಯುತ್ತಿಿದ್ದಾಾಗ, ಹೊಸಪೇಟೆಯಿಂದ ಶಾಸಕ ನಾರಾ ಭರತರೆಡ್ಡಿಿ ಅವರು ಸ್ಥಳಕ್ಕೆೆ ಬಂದಿದ್ದಾಾರೆ. ನಂತರ, ಗಲಭೆ ತೀವ್ರವಾಗಿ ಪಿಸ್ತೂಲ್ ಮತ್ತು ರೈಲ್ ಮೂಲಕ ಗುಂಡುಗಳು ಸಿಡಿದಿವೆ. ಯುವ ಕಾಂಗ್ರೆೆಸ್ಸಿಿಗ ರಾಜಶೇಖರ್ ರೆಡ್ಡಿಿ ಹತರಾಗಿದ್ದಾಾರೆ.
ಘಟನೆಯ ನಂತರ, ಬಿಜೆಪಿಯು ಮಾಧ್ಯಮಗಳಲ್ಲಿ ಗಲಭೆಯನ್ನು ಜೀವಂತವಾಗಿರಿಸಿತು. ಕಾಂಗ್ರೆೆಸ್ ಶಾಕ್ನಿಂದ ಹೊರಬರಲಿಲ್ಲ. ಶಾಸಕ ನಾರಾ ಭರತರೆಡ್ಡಿಿ ಅಕ್ಷರಶಃ ಒಬ್ಬಂಟಿಗರಾದರು. ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಜಿಂದಾಲ್ ಏರ್ಸ್ಟ್ರಿಿಪ್ನಲ್ಲಿ ಶಾಸಕ ನಾರಾ ಭರತರೆಡ್ಡಿಿ ಅವರ ಜೊತೆ ಮಾತನಾಡಿದ ಮೇಲೆ ನಿರಾಳರಾಗಿ, ಮಾನಸಿಕ ಆತ್ಮಸ್ಥೆೆರ್ಯವನ್ನು ಪಡೆದರು. ಜಿಲ್ಲಾಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಮತ್ತು ಉಪಮುಖ್ಯ ಮಂತ್ರಿಿ ಡಿ.ಕೆ. ಶಿವಕುಮಾರ್ ಶಾಸಕರಿಗೆ ಧೈರ್ಯ ತುಂಬಿದರು. ಆಗ, ಪಕ್ಷದ ಎಲ್ಲಾಾ ಶಾಸಕರು, ಮುಖಂಡರು, ಸಂಸದರು, ಕಾರ್ಯಕರ್ತರು – ವಿಭಿನ್ನ ಮನಸ್ಥಿಿತಿಯಲ್ಲಿಯೇ ಶಾಸಕರ ಜೊತೆ ಗುರುತಿಸಿಕೊಂಡು ಧೈರ್ಯ ತುಂಬಿದರು.
ಪೊಲೀಸ್ ಉನ್ನತ ಮೂಲಗಳ ಪ್ರಕಾರ, ‘ಸಿಓಡಿ ಅಧಿಕಾರಿಗಳ ತಂಡ ಬಳ್ಳಾಾರಿಯಲ್ಲಿದ್ದು ಇಡೀ ಪ್ರಕರಣವನ್ನು ಗಮನಿಸುತ್ತಿಿದೆ. ಪೊಲೀಸ್ ಇಲಾಖೆ ಮತ್ತು ತನಿಖಾ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ’ ಎಂದು ಹೇಳಲಾಗಿದೆ.
ಈ ಮಧ್ಯೆೆ ಮೃತ ಯುವಕ ರಾಜಶೇಖರ ರೆಡ್ಡಿಿಯ ದೇಹ ಸುಟ್ಟಿಿರುವುದನ್ನು ಬಿ. ಶ್ರೀರಾಮುಲು ಪ್ರಶ್ನಿಿಸಿದ್ದಾಾರೆ.
ಪ್ರಕರಣದ ತನಿಖೆಯು ಪದೇ ಪದೇ ಗೃಹ ಇಲಾಖೆಯಲ್ಲಿಯೇ ಗೊಂದಲಗಳನ್ನು ಮೂಡಿಸುತ್ತಿಿದೆ. ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಪರ – ವಿರುದ್ಧ ಚರ್ಚೆಗಳು ನಡೆಯುತ್ತಿಿದೆ. ಈ ಮಧ್ಯೆೆ, ಪ್ರಕರಣದ ತನಿಖೆಗೆ ಪೂರಕವಾಗಿ ಪರ – ವಿರುದ್ಧದ ವೀಡಿಯೋ ತುಣುಕುಗಳನ್ನು ಜಿ. ಜನಾರ್ಧನರೆಡ್ಡಿಿ ಖುದ್ದಾಾಗಿ ಮತ್ತು ಶಾಸಕ ನಾರಾ ಭರತರೆಡ್ಡಿಿ ಬೆಂಬಲಿತ
ತಂಡವು ಒಂದೊಂದಾಗಿ ಬಿಡುಗಡೆ ಮಾಡುತ್ತಿಿದೆ. ಪ್ರಕರಣದ ತನಿಖಾ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಪರಿಶೀಲನೆ ನಡೆಸುತ್ತ, ಮೇಲಧಿಕಾರಿಗಳಿಗೆ ಮಾತ್ರವೇ ವರದಿ ಮಾಡುತ್ತಿಿದ್ದಾಾರೆ. ಗಲಭೆಯಲ್ಲಿ ಪಾಲ್ಗೊೊಂಡಿದ್ದ ಎರೆಡೂ ಗುಂಪಿನವರಲ್ಲಿ ‘ಬಂಧನ’ದ ಸಹಜವಾದ ಆತಂಕ ಮೂಡಿದ್ದು ಕೇಸ್ – ಕೌಂಟರ್ ಕೇಸುಗಳ ಸಂಖ್ಯೆೆ ಹೆಚ್ಚುತ್ತಲೇ ಇದೆ. ಘಟನೆ ಕುರಿತು ಬಿ. ಶ್ರೀರಾಮುಲು ಅವರು ಡಿ.ಕೆ. ಶಿವಕುಮಾರ್ ಸೇರಿ ಕಾಂಗ್ರೆೆಸ್ನ ವಿವಿಧ ಮುಖಂಡರ ಜೊತೆಯಲ್ಲಿ ಸಂಪರ್ಕದಲ್ಲಿದ್ದಾಾರೆ.
ಬಿ. ಶ್ರೀರಾಮುಲು ಅವರು ನಡೆಸಲು ಉದ್ದೇಶಿರುವ ‘ಬಳ್ಳಾಾರಿ ಟು ಬೆಂಗಳೂರು’ ಪಾದಾಯಾತ್ರೆೆಗೆ ಬಿಜೆಪಿ ಒಪ್ಪಿಿಗೆ ನೀಡಲಿದೆಯೇ? ಸ್ಥಳೀಯ ಸಂಸ್ಥೆೆಗಳ ಚುನಾವಣೆ ಮತ್ತು ಪಕ್ಷದ ಸಂಘಟನೆಯ ಹಿನ್ನಲೆಯಲ್ಲಿ ಈ ಪಾದಯಾತ್ರೆೆಯು ಪಕ್ಷಕ್ಕೆೆ ಅವಶ್ಯಕವೇ? ಎನ್ನುವುದು ಬಿಜೆಪಿ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ.
ಸಿದ್ದರಾಮಯ್ಯ ಅವರು ಗಣಿ ಹಗರಣದ ವಿರುದ್ಧ ‘ಬೆಂಗಳೂರು ಟು ಬಳ್ಳಾಾರಿ’ಗೆ ಪಾದಯಾತ್ರೆೆ ನಡೆಸಿದ್ದು ಸಾರ್ವಜನಿಕ ವಿಷಯ. ಬ್ಯಾಾನರ್ ಗಲಭೆ ವ್ಯಕ್ತಿಿ ಪ್ರತಿಷ್ಠೆೆ ಕೇಂದ್ರಿಿತ. ಕಾರಣ ಹಂಸಕ್ಷೀರದಂತೆ ಸಮಗ್ರ ಚಿಂತನೆ ನಡೆಸಿ ಪಕ್ಷ ಸೂಕ್ತ ಹೆಜ್ಜೆೆ ಇರಿಸಬೇಕು ಎಂದು ಬಿಜೆಪಿಯ ಉನ್ನತ ಮುಖಂಡರು ವರಿಷ್ಠರಿಗೆ ಸಲಹೆ ನೀಡಿದ್ದಾಾರೆ ಎನ್ನಲಾಗಿದೆ.

