ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.07:
ಬಳ್ಳಾರಿಯ ಬ್ಯಾಾನರ್ ಗಲಭೆಯ ನಂತರ ಬಳ್ಳಾರಿ ಜಿಲ್ಲಾ ಕೇಂದ್ರ ಪೊಲೀಸ್ ಅಧಿಕಾರಿಗಳ ಬದಲಾವಣೆ ಪರ್ವ ಪ್ರಾರಂಭವಾಗಿದೆ.
ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಾಸುಗಳಲ್ಲಿ ಪವನ್ ನೆಜ್ಜಾಾರ್ ಅವರು ಕರ್ತವ್ಯಲೋಪದ ಕಾರಣ ಸೇವೆಯಿಂದ ಅಮಾನತು ಆದ ನಂತರ, ಈ ಹುದ್ದೆಗೆ ಡಾ. ಸುಮನ್ ಡಿ. ಪೆನ್ನೇಕರ್ ಅವರನ್ನು ವರ್ಗಾವಣೆ ಮಾಡಿದೆ.
ಬೆಳಗಾವಿ ಜಿಲ್ಲೆೆಯ ಬೀಡಿ ಗ್ರಾಾಮದ ನಿವಾಸಿ. ಬಿಎಎಂಎಸ್ ವೈದ್ಯರಾಗಿದ್ದ ಡಾ. ಸುಮನ್ ಡಿ. ಪೆನ್ನೇಕರ್ ಅವರು 2013 ರ ಬ್ಯಾಾಚ್ನ ಐಪಿಎಸ್ ಅಧಿಕಾರಿ. ಉತ್ತರ ಕನ್ನಡ, ಗದಗ್ ಜಿಲ್ಲಾಾ ಎಸ್ಪಿಯಾಗಿ, ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸಿದ ಅನುಭವಿ.
ಬಳ್ಳಾರಿ ವಲಯ ಐಜಿಪಿ ಆಗಿದ್ದ ವರ್ತಿಕಾ ಕಟಿಯಾರ್ ಅವರು ನಾಗರಿಕ ಹಕ್ಕು ವಿಭಾಗಕ್ಕೆ ವರ್ಗಾವಣೆ ಆಗಿದ್ದು, ಈ ಹುದ್ದೆಗೆ ಡಾ. ಪಿ.ಎಸ್. ಹರ್ಷ ಅವರನ್ನು ವರ್ಗಾವಣೆ ಮಾಡಿದೆ. ಡಾ. ಪಿ.ಎಸ್. ಹರ್ಷ ಅವರು 2004 ಬ್ಯಾಚ್ನ ಅಧಿಕಾರಿ. ಕರ್ನಾಟಕದ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬರು. ಪೊಲೀಸ್, ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವಿಗಳಾಗಿದ್ದಾರೆ.

