ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.25:ರೈತರು ಖಾಸಗಿ ಬ್ಯಾಂಕುಗಳಲ್ಲಿ ವ್ಯವಹರಿಸುವ ಬದಲು ನಮ್ಮ ಸಹಕಾರಿ ಸಂಘದಲ್ಲಿ ವ್ಯವಹರಿಸಿ ಸಂಘದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಬೊಮ್ಮವಾರ ವಿಎಸ್ಎಸ್ಎನ್ ಸಂಘದ ಅಧ್ಯಕ್ಷ ಕೆ.ನಾಗೇಶ್ ತಿಳಿಸಿದರು.
ಬೊಮ್ಮವಾರ ವಿಎಸ್ಎಸ್ಎನ್ ಸಂಘದ ಆವರಣದಲ್ಲಿ 2022-23 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಮಾಡನಾಡಿದರು. ಇಲ್ಲಿನ ಎಲ್ಲಾ ರೈತರು ವ್ಯವಹಾರ ಠೇವಣಿ ಹಾಗೂ ಕೆ.ಸಿ.ಸಿ.ಸಾಲಗಳನ್ನು ನಮ್ಮ ಬ್ಯಾಂಕ್ ನಲ್ಲಿಯೆ ವ್ಯವಹಾರ ಮಾಡಬೇಕು ವ್ಯವಹಾರ ಮಾಡಿದಲ್ಲಿ ಮಾತ್ರ ನಮ್ಮ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಇಲ್ಲಿಯವರೆಗೂ ನಮ್ಮ ಬ್ಯಾಂಕುಗಳು ಸಹಕಾರಿ ಬ್ಯಾಂಕ್ ಗಳಾಗಿದ್ದವು. ಇನ್ನೂ ಮುಂದೆ ನಮ್ಮ ಬ್ಯಾಂಕ್ ಗಳೂ ಸಹ ಕೆನರಾ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್ ತರಹದ ಆನ್ಲೈನ್ ವ್ಯವಹಾರ ಮಾಡುವ ಬ್ಯಾಂಕ್ ಆಗಿರುತ್ತದೆ. ನಿಮ್ಮ ವ್ಯವಹಾರದಲ್ಲಿ ಯಾವುದೇ ರೀತಿಯ ಅವ್ಯವಹಾರ ನೆಡೆಯುವುದಿಲ್ಲ ಎಂದರು.
ಜಿಲ್ಲಾ ಬ್ಯಾಂಕ್ ವೃತ್ತಿಪರ ನೀರ್ದೇಶಕ ಕಾಮೇನಹಳ್ಳಿ ರಮೇಶ್ ಮಾತನಾಡಿ, ಈ ವರೆಗೂ ನಮ್ಮ ತಾಲ್ಲೂಕಿನಾದ್ಯಂತ. 15 ಸಹಕಾರಿ ಸಂಘಗಳಿದ್ದು ಇಂದಿಗೆ ಎಲ್ಲಾ ವಾರ್ಷಿಕ ಸಭೆಗಳು ಪೂರ್ಣಗೊಂಡಿದೆ. ಕೃಷಿ ಸಾಲವನ್ನು ಸರ್ಕಾರ ಈ ವರೆಗೂ 3 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದು, ಅದನ್ನು 5 ಲಕ್ಷಕೆ ಏರಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ವೇಳೆ ಉಪಾಧ್ಯಕ್ಷ ಮುನಿಕೃಷ್ಣ, ಮಾಜಿ ಅಧ್ಯಕ್ಷರಾದ ಕೋಡಿಮಂಚೇನಹಳ್ಳಿ ಎಸ್. ನಾಗೇಶ್, ಬೊಮ್ಮವಾರ ರಾಮಮೂರ್ತಿ, ಹೊಸಹಳ್ಳಿ ಟ.ರವಿ, ನಿರ್ದೇಶಕರುಗಳಾದ ನಾರಾಯಣ ಸ್ವಾಮಿ, ರಾಮಾಂಜಿನಪ್ಪ ,ಮುನಿಯಪ್ಪ, ರಮೇಶ್, ನವೀನ್ ಕುಮಾರ್,ಅಂಬಿಕಾ, ಪುಷ್ಪ, ಸಿ.ಇ.ಓ. ಗುಮಾಸ್ತ ಚಂದ್ರ, ಎನ್.ಸುರೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.