ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ. 30 : ದಿ ಟೌನ್ ಕೋ-ಆಪರೇಟಿವ್ ಬ್ಯಾಂಕ್ ವಾರ್ಷಿಕ ಮಹಾ ಸಭೆ ನಡೆಯಿತು.
ಬ್ಯಾಂಕ್ ಅಧ್ಯಕ್ಷರಾದ ಎ.ಅಪ್ಸರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಬ್ಯಾಂಕ್ ಸ್ಥಾಪನೆಯಾಗಿ 110 ವರ್ಷಗಳು ಕಳೆದಿವೆ. ಬ್ಯಾಂಕಿನಲ್ಲಿ ಷೇರುದಾರರಿಗೆ ಸಮಾಜ ಮುಖಿಯಾದ ಕೆಲಸ ಕಾರ್ಯಗಳನ್ನು ಮತ್ತು ಷೇರುದಾರರ ಶೈಕ್ಷಣಿಕ ಸೌಲಭ್ಯಗಳನ್ನು ನೀಡುತ್ತಿದೆ. ಪ್ರಸ್ತುತ ಸುಮಾರು 4.5 ಕೋಟಿ ರೂ. ಲಾಭದಲ್ಲಿ ಬ್ಯಾಂಕ್ ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದೆ. ಇದರಿಂದ ಷೇರುದಾರರಿಗೆ ಈ ಬಾರಿ ಡಿವಿಡೆಂಟ್ ಸಹ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ನಾಗರಾಜ್, ಮಾಜಿ ಅಧ್ಯಕ್ ಬಾಲಚಂದ್ರನ್, ಪಿ.ಕೃಷ್ಣಪ್ಪ, ಸಿ.ನವೀನ್, ಜೀನತ್ಉಲ್ಲಾ, ಹಾಗೂ ನಿರ್ದೇಶಕ ವೆಂಕಟಲಕ್ಷ್ಮಿ, ಕಿರಣ್ಕುಮಾರ್, ರಾಜಶೇಖರ್, ಜಿ.ಟಿ.ಮೋಹನ್, ಎಚ್.ಬಿ. ನಾಗರಾಜ್, ಎಂ.ಅಂಬರೀಶ್, ಎಂ.ಚಂದ್ರಶೇಖರ್, ವ್ಯವಸ್ಥಾಪ ಆಂಜಿನಪ್ಪ, ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.