ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.13:
ರಾಜ್ಯದಲ್ಲಿ ಖಾಲಿ ಇರುವ ವಿವಿಧ ಇಲಾಖೆ ಸರ್ಕಾರಿ ಹುದ್ದೆಗಳ ಭರ್ತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಾಯಿಸಿ ಡಿ.21 ರಂದು ಬೆಂಗಳೂರು ಚಲೋ ಹೊರಾಟ ಹಮ್ಮಿಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗಿರಿಯಪ್ಪ ಪೂಜಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ನಿರುದ್ಯೋೋಗ ಪ್ರಮಾಣ ಹೆಚ್ಚಾಾಗಿದ್ದು ಗುಳೆಹೋಗುವ ಸ್ಥಿಿತಿ ಬಂದಿದೆ. ರಾಜ್ಯ ಸರ್ಕಾರ ಜನರ ಸಮಸ್ಯೆೆ ಕೇಳದೆ ಅಧಿಕಾರಕ್ಕಾಾಗಿ ಕಚ್ಚಾಾಟ ನಡೆಸಿದೆ. ಇದರಿಂದ ರಾಜ್ಯದ ರೈತರು, ಕೂಲಿಕಾರರು, ಬಡವರು, ನಿರುದ್ಯೋೋಗಿ ಯುವಕರು ಸಂಕಷ್ಟ ಅನುಭವಿಸುವಂತಾಗಿದೆ.
ನರೇಗಾ ಯೋಜನೆ ಸಮರ್ಪಕ ಅನುಷ್ಠಾಾನ ಮಾಡಬೇಕು. ಬಗರ್ಹುಕುಂ ಸಾಗುವಳಿದಾರರಿಗೆ ಪಟ್ಟಾಾ ಕೊಡಬೇಕು. ರೈತರ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು. ಕಾರ್ಮಿಕರ ನಾಲ್ಕು ಸಂಹಿತೆ ಕೈಬಿಡಬೇಕು. ಎನ್ಆರ್ಬಿಸಿ ಟೇಲೆಂಡ್ ಭಾಗಕ್ಕೆೆ ಸರಿಯಾಗಿ ನೀರು ಹರಿಸಬೇಕು. ಗ್ರಾಾಮೀಣ ಭಾಗಕ್ಕೆೆ ಬಸ್ ಸೌಲಭ್ಯ, ಎಲ್ಲ ಸರ್ಕಾರಿ ಪ್ರಾಾಥಮಿಕ, ಪ್ರೌೌಢಶಾಲೆಗಳಿಗೆ ತಕ್ಷಣ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಡಿಕೆ ಈಡೇರಿಕೆಗಾಗಿ ಡಿ.21ರಂದು ಬೆಂಗಳೂರು ಚಲೋ

