ಸುರೇಶ ಹೀರಾ ಸಿರವಾರ, ಜ.07:
ಸುಸಜ್ಜಿಿತ ಕೊಠಡಿ, ಕಪ್ಪುು ಹಲಗೆ ನೋಡಲು ಮಾತ್ರ ಎನ್ನುವಂತಿದ್ದು ಆ ಹಲಗೆ ಮೇಲೆ ಬರೆಯಲೂ 1ರಿಂದ 5ನೇ ತರಗತಿ ಮಕ್ಕಳಿಗೆ ಬರೆದು ತೋರಿಸಲು ಬಳಪವೇ ಇಲ್ಲಘಿ, ಬಳಪ ತರಬೇಕಾದ ಸರ್ಕಾರಿ ಶಿಕ್ಷಕರೇ ಈ ಶಾಲೆಗೆ ದಿಕ್ಕಿಿಲ್ಲ ಇದು ತಾಲೂಕಿನ ಲಕ್ಕಂದಿನ್ನಿಿ ಸರ್ಕಾರಿ ಶಾಲೆ ಮಕ್ಕಳ ವ್ಯಥೆ.
ಶಾಲೆಯ ಸೌಲಭ್ಯ ಹಾಗೂ ಮಕ್ಕಳ ಕಲಿಕೆಯ ಬಗ್ಗೆೆ ಪ್ರಶ್ನೆೆ ಮಾಡುವ ಹಕ್ಕು ಇಲ್ಲ ಎನ್ನುವ ಮಾನ್ವಿಿ ಕ್ಷೇತ್ರದ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿಯವರೇ ಮಾನ್ವಿಿ-ಸಿರವಾರ ತಾಲೂಕಿನ ಲಕ್ಕಂದಿನ್ನಿಿಯ ಮುಖ್ಯ ರಸ್ತೆೆಗೆ ಹೊಂದಿಕೊಂಡಿರುವ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಗೆ ಒಮ್ಮೆೆ ಬಂದು ಭೇಟಿ ನೀಡಿ, ಕಣ್ಣು ಬಿಟ್ಟು ನೋಡಿ, ನಿಮ್ಮ ಹಾಗೂ ನಿಮ್ಮ ಶಿಕ್ಷಕರ ಸಾಮರ್ಥ್ಯ ಎಂತದ್ದು ಎಂಬುದು ಬಯಲಾಗಲಿದೆ.
ಮಾನ್ವಿಿ ಕಚೇರಿ, ರಾಯಚೂರು ನಗರಕ್ಕೆೆ ಸುತ್ತುವುದು ಬಿಟ್ಟು ಒಮ್ಮೆೆ ಕುಗ್ರಾಾಮಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಿ, ನಿಮ್ಮ ಶಿಕ್ಷಕರು ಏನು ಕಲಿಸುತ್ತಿಿದ್ದಾಾರೆ. ಈ ಶಾಲೆಗೆ ಖಾಯಂ ಶಿಕ್ಷಕರೆಲ್ಲಿದ್ದಾಾರೆ. ಒಂದೊಮ್ಮೆೆ ಅನಾರೋಗ್ಯವಾಗಿದ್ದರೆ ಆ ಶಾಲೆಗೆ ಯಾರಿಗೆ ಪ್ರಭಾರ ವಹಿಸಿದ್ದಾಾರೆ ಎಂಬುದರ ಮಾಹಿತಿ ಮುಚ್ಚಿಿಟ್ಟಿಿದ್ದು ಯಾಕೆ ಎಂಬ ಇತರ ಸಾಲುಸಾಲು ಪ್ರಶ್ನೆೆಗಳಿಗೆ ನಿಮ್ಮ ಉತ್ತರವೇನು? ಇನ್ನೂ ಬಸ್ ಇಲ್ಲದ, ಕುಗ್ರಾಾಮಗಳ ಶಾಲೆಯ ಗತಿ ಏನೆಂಬುದನ್ನು ಊಹಿಸಿಕೊಳ್ಳಲೂ ಭಯವಾದೀತು.
ಲಕ್ಕಂದಿನ್ನಿಿ ಗ್ರಾಾಮದ ಡಾ.ಬಿ.ಆರ್.ಅಂಬೇಡ್ಕರ ನಗರ ಕಾಲೋನಿಯಲ್ಲಿ ಹೆಚ್ಚಿಿರುವ ಕೂಲಿಕಾರರು, ಹಿಂದುಳಿದ ಜಾತಿಯ ಜನಾಂಗದ ಬಡವರ ಮಕ್ಕಳೆ ಈ ಶಾಲೆಯಲ್ಲಿ ಹೆಚ್ಚಿಿನ ಸಂಖ್ಯೆೆಯಲ್ಲಿದ್ದಾರೆ. ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿ ವರೆಗೆ ಇದೆ.
1ನೇ ತರಗತಿಯಲ್ಲಿ 9 ದಾಖಲಾತಿ, 5 ಹಾಜರಾತಿ, 2ನೇ ತರಗತಿಯಲ್ಲಿ 6 ವಿದ್ಯಾಾಥಿಗಳು, 3ನೇ ತರಗತಿಯಲ್ಲಿ 8, 4ನೇ ತರಗತಿಯಲ್ಲಿ 9 ಹಾಜರಿ 4 ಗೈರು. 5ನೇ ತರಗತಿಯಲ್ಲಿ 8 ಹಾಜರಿ, 4 ಗೈರು ಒಟ್ಟು 40 ವಿದ್ಯಾಾರ್ಥಿಗಳಲ್ಲಿ ನಮ್ಮ ಪ್ರತಿನಿಧಿ ಭೇಟಿ ಇತ್ತಾಾಗ ಶಾಲೆಯಲ್ಲಿದ್ದದ್ದು ಕೇವಲ 24 ವಿದ್ಯಾಾರ್ಥಿಗಳು ಮಾತ್ರಘಿ.
ಎರಡು ಉತ್ತಮ ಕೊಠಡಿ ಅದರಲ್ಲಿ ಬಿಸಿಯೂಟದ ಸಾಮಗ್ರಿಿಗಳು, ನಾಲ್ಕು, ಐದನೇಯ ವಿದ್ಯಾಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ, ಇನ್ನೂ 1, 2, 3 ತರಗತಿಯ ವಿದ್ಯಾಾರ್ಥಿಗಳು, ನಲಿ-ಕಲಿ, ಚಟುವಟಿಕೆಗಳು ಇವೆ. ಹೊಸದೊಂದು ಬಿಸಿಯೂಟದ ಕಟ್ಟಡ ಇದ್ದರೂ ಉಪಯೋಗ ಮಾಡಲು ಅವಕಾಶವಿಲ್ಲ.
ಖಾಯಂ ಶಿಕ್ಷಕರು ಇಲ್ಲ, ಗ್ರಾಾಮದ ಒಬ್ಬರೇ ಅತಿಥಿ ಶಿಕ್ಷಕಿ ಕಳೆದ ಹಲವಾರು ತಿಂಗಳಿಂದ ಪಾಠ ಮಾಡುವ ಅನಿವಾರ್ಯಕ್ಕೆೆ ಸಿಲುಕಿದ್ದಾಾರೆ. ಖಾಯಂ ಶಿಕ್ಷಕರಿಲ್ಲದ ಕಾರಣ ಅತಿಥಿ ಶಿಕ್ಷಕಿಯೇ ಶಾಲೆಯ ಒಟ್ಟು ಜವಾಬ್ದಾಾರಿ ಹೊತ್ತಿಿದ್ದು, ಅವರೇನಾದರೂ ಶಾಲೆಗೆ ತುರ್ತು ಕೆಲಸದ ನಿಮಿತ್ತ ರಜೆ ಹಾಕಿದರೆ ಆ ದಿನ ಶಾಲೆ ಬಂದ್ ಹೀಗಾಗಿ ಸದ್ಯ ಆ ಶಾಲೆಗೆ ಅತಿಥಿ ಶಿಕ್ಷಕಿಯೇ ದೈವ ದಿಕ್ಕುಘಿ.
ಬಳಪವಿಲ್ಲ ಎಂಬುದು ಕೇಳಿದಾಗ ಅಚ್ಚರಿಯಾಯಿತು. ಬಳಪ ಖರೀದಿಸುವ ಅಧಿಕಾರ ಅತಿಥಿ ಶಿಕ್ಷಕರಿಗಿಲ್ಲಘಿ. ಖಾಯಂ ಶಿಕ್ಷಕಿ ಅನಾರೋಗ್ಯದ ಕಾರಣಕ್ಕೆೆ ಕೆಲ ದಿನಗಳಿಂದ ರಜೆಯಲ್ಲಿದ್ದಾಾರೆ. ಹೋಗಲಿ ಮಕ್ಕಳಿಗೆ ಏನಾದರೂ ಪಾಠ ಹೇಳಿದ್ದಾಾರೆಯೇ, ಪುಸ್ತಕದಲ್ಲಿನ ಅಕ್ಷರವನ್ನಾಾದರೂ ಓದಬಲ್ಲರೇ ಎಂಬ ಕುತೂಹಲದಿಂದ 5ನೇ ತರಗತಿಯ ಮಕ್ಕಳನ್ನು ಮಾತನಾಡಿಸಿದಾಗ ಪಾಠ ಸರಿಯಾಗಿ ಕಲಿಸಿಲ್ಲ, ಮರೆತು ಹೋಗಿದೆ, ಕನ್ನಡದ ಸರಳ ಪದಗಳು ಬರೆಯಲು ಸಾಧ್ಯವಾಗುತ್ತಿಿಲ್ಲ ಎಂದು ಬಹುತೇಕರು ಹೇಳಿದರೆ, ಇಬ್ಬರು ವಿದ್ಯಾಾರ್ಥಿನಿಯರು ಸರಿಯಾಗಿ ಓದಿದರು, ಉತ್ತರ ನೀಡಿದರು.
ಪ್ರಾಾಥಮಿಕ ಶಾಲೆಯ ಹಂತದಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ ಹಿರಿಯ ಪ್ರಾಾಥಮಿಕ ಹಾಗೂ ಪ್ರೌೌಢ ಹಂತದಲ್ಲಿ ಮಕ್ಕಳಿಗೆ ಕಲಿಕೆಯ ಮಟ್ಟ ಸುಧಾರಣೆ ಕಾಣುತ್ತದೆ ಎಂದು ಪ್ರೌೌಢಶಾಲೆಯ ಶಿಕ್ಷಕರ ಮಾತು. ಪ್ರಾಾಥಮಿಕ ಹಂತದಲ್ಲಿ ಶಿಕ್ಷಕರು ಇಲ್ಲವಾದರೆ ಮಕ್ಕಳ ಕಲಿಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆೆ ಸಹಜವಾಗಿ ಮೂಡುತ್ತದೆ, ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುತ್ತಿಿಲ್ಲ, ಜಾತ್ರೆೆ, ಹಬ್ಬದ ನಿಮಿತ್ತ ಬಂದಿಲ್ಲ ಎಂಬ ಕಾರಣ ಶಿಕ್ಷಕರದ್ದು.
ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಗ್ರಾಾಮೀಣ ಪ್ರದೇಶದ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಸ್ಥಿಿತಿ ಗತಿ, ಅಲ್ಲಿನ ಸಮಸ್ಯೆೆ ಆಲಿಸದೆ ಕಚೇರಿಯಲ್ಲಿಘಿ, ಡಿಸಿ, ಸಿಇಓ ಸಭೆ ಹೆಸರಲ್ಲಿ ಕಾಲ ತಳ್ಳುತ್ತಿಿದ್ದರೆ, ಇತ್ತ ಬಿಇಓ ಚಂದ್ರಶೇಖರ ದೊಡ್ಡಮನಿ ತಮ್ಮ ವೈಲ್ಯ ಮುಚ್ಚಿಿಕೊಂಡು ಶಿಕ್ಷಕರ ವಿಶ್ವಾಾಸ ಗಳಿಸಲು ಓಡಾಡುತ್ತಿಿರುವುದು ಹಾಸ್ಯಾಾಸ್ಪದವಾಗಿದೆ.

