ಸುದ್ದಿಮೂಲ ವಾರ್ತೆ ಮುದಗಲ್, ಡಿ.24:
ಮಕ್ಕಳು ಸ್ಪರ್ಧಾತ್ಮಕ ಕ್ರೀೆಡೆಯಲ್ಲಿ ಸೋಲುಗಳಿಗೆ ಎದೆಗುಂದದೇ ಮುಂದಿನ ಗೆಲುವಿನ ಮೆಟ್ಟಿಿಲುಗಳಾಗಿ ಮಾಡಿಕೊಳ್ಳಬೇಕು ಎಂದು ಲಿಂಗಸುಗೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಪಾಟೀಲ್ ಹುನೂರು ಸೋಮವಾರ ಹೇಳಿದರು.
ಪಟ್ಟಣದ ಆರ್ಸಿ ಮಿಷನ್ ಶಾಲೆಯಲ್ಲಿ ಹಮ್ಮಿಿಕೊಂಡಿದ್ದ ಪ್ರಾಾಥಮಿಕ, ಕ್ರಿಿಸ್ತಜ್ಯೋೋತಿ ಪ್ರೌೌಢಶಾಲೆಯ ವಾರ್ಷಿಕೋತ್ಸವ ಹಾಗೂ ಕ್ರಿಿಸ್ಮಸ್ ಹಬ್ಬದ ಆಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು ಮಕ್ಕಳು ಸ್ಪರ್ಧಾತ್ಮಕ ವಿಷಯಗಳಿಗೆ ಹಿಂಜರಿಯಬಾರದು. ಸೋಲನ್ನು ಗೆಲುವಿನ ಮೆಟ್ಟಿಿಲಾಗಿಸಿಕೊಳ್ಳಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಹೊರಹೊಮ್ಮುವಂತ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ರಿಿಸ್ತಜ್ಯೋೋತಿ ಪ್ರೌೌಢಶಾಲೆ ಮುಖ್ಯಶಿಕ್ಷಕಿ, ಆರ್ ಸಿ ಮಿಷನ್ ಶಾಲೆ ಸಂಚಾಲಕಿ ಸಿಸ್ಟರ್ ಮರಿಯಮ್ಮ ಪನ್ನೂರು ಮಾತನಾಡಿದರು.
ಮುದಗಲ್ ಪವಿತ್ರ ಹೃದಯ ದೇವಾಲಯದ ಾದರ್ ಪೊನ್ನುಸ್ವಾಾಮಿ, ಸಿರವಾರ ತಾಪಂ ಸಹಾಯಕ ನಿರ್ದೇಶಕ ಮಂಜುನಾಥ ಜಾವೂರು, ಹಿರಿಯ ಪತ್ರಕರ್ತ ರಾಘವೇಂದ್ರ ಗುಮಾಸ್ತೆೆ, ನಾಗರಾಳ ಗ್ರಾಾಪಂ ಅಭಿವೃದ್ಧಿಿ ಅಧಿಕಾರಿ ಪ್ರವೀಣ ಪಾಟೀಲ್ ಕಾರ್ಯಕ್ರಮ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ 2024-25 ಸಾಲಿನಲ್ಲಿ ಎಸ್ಎಸ್ಎಲ್ಸಿಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಮಕ್ಕಳಿಗೆ ಸನ್ಮಾಾನ ಮತ್ತು ಜಿಲ್ಲಾ ಮಟ್ಟದ ಥ್ರೋೋಬಾಲ್ ಸ್ಪರ್ಧೆಯಲ್ಲಿ ಆಯ್ಕೆೆಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದ ನಿರೂಪಣೆ ಶಿಕ್ಷಕರಾದ ಕನಕಪ್ಪ, ಕಲ್ಪನಾ, ಅಲ್ತಾ್ಾ ಹುಸೇನ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಪವಿತ್ರ ಹಬ್ಬವಾದ ಕ್ರಿಿಸ್ಮಸ್ ಶುಭಾಶಯ ತಿಳಿಸಿದರು.
ಸೆಕ್ರಡ್ ಹಾರ್ಟ್ ಶಾಲೆ ವ್ಯವಸ್ಥಾಾಪಕ ಾದರ್ ವಿಜಯಕುಮಾರ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಮಾರ್ಟಿನ್ ಅಮಲ್ ರಾಜ್, ಸಿಸ್ಟರ್ ಅಣ್ಣಮ್ಮ ಮೇರಿ, ಪ್ರಭಾರಿ ಮುಖ್ಯಶಿಕ್ಷಕ ವೆಂಕಟೇಶ, ತಾಲೂಕು ಅನುದಾನಿತ ಪ್ರಾಾಥಮಿಕ ಸಂಘದ ಅಧ್ಯಕ್ಷ ಶಿವರಾಜ ಸ.ಶಿ, ರಾಘವೇಂದ್ರ ಮಸ್ಕಿಿ, ಮುದಗಲ್ ಪತ್ರಕರ್ತರ ಸಂಘದ ಅಧ್ಯಕ್ಷ ದೇವಪ್ಪ ರಾಠೋಡ, ಡಾ. ವಿನೋದ ಕುಮಾರ, ದೈಹಿಕ ಶಿಕ್ಷಕ ರಮೇಶ ದೀಕ್ಷೀತ್, ಸಿದ್ಧನಗೌಡ ಹಾಗೂ ಶಿಕ್ಷಕ ವೃಂದ, ವಿದ್ಯಾಾರ್ಥಿಗಳು ಇದ್ದರು.
ಸೋಲು ಗೆಲುವಿನ ಮೆಟ್ಟಿಲಾಗಲಿ – ಬಿಇಒ ಸುಜಾತಾ ಪಾಟೀಲ್

