ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.17: ವರ್ಲ್ಡ್ ಸಸ್ಟೇನಬಲಿಟಿ ಕಾಂಗ್ರೆಸ್ನವರು ನೀಡುವ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿರುತ್ತದೆ.
ಇಂದು ಸಿಂಗಾಪೂರದಲ್ಲಿ ವರ್ಲ್ಡ್ ಸಸ್ಟೇನಬಲಿಟಿ ಕಾಂಗ್ರೆಸ್ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ಯಾಂಡ್ ಪ್ರಶಸ್ತಿಯನ್ನು ವಿಲ್ಟರ್ ಎನ್.ಜಿ. ಕಂಟ್ರಿ ಮ್ಯಾನೇಜರ್, ಅಸೋಸಿಯೇಷನ್ ಆಫ್ ಇಂಟರ್ ನ್ಯಾಷನಲ್ ಸರ್ಟಿಫೈಡ್ ಪ್ರೊಫೇಷನಲ್ ಅಕೌಂಟೆಂಟ್ಸ್ ಹಾಗೂ ಅಟಾರ್ನಿ ಕರೀನ ಲೆನೋರ್, ಎಸ್.ಬಯೋನ್, ಚೀಫ್ ಎನ್ವೈರ್ಮೆಂಟ್, ಸೋಷಿಯಲ್ ಮತ್ತು ಗೌರ್ನನ್ಸ್ ಅಫೀಸರ್, ಕಂಪ್ಲಯನ್ಸ್ ಮತ್ತು ಡಾಟಾ ಪ್ರೈವೇಸಿ ಅಧಿಕಾರಿ, ಅವರು ನೀಡಿದ ಪ್ರಶಸ್ತಿಯನ್ನು ನಿಗಮದ ಪರವಾಗಿ ಮಂಜುಳ ನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ಹಾಗೂ ಡಾ. ಲತಾ ಟಿ.ಎಸ್. ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಸ್ವೀಕರಿಸಿದರು ಎಂದು ಪ್ರಕಟಣೆ ತಿಳಿಸಿದೆ.