ಕೊಪ್ಪಳ ಮೇ 21:ಇಂದಿನ ಒತ್ತಡದ ಬದುಕಿನ ಮಧ್ಯೆ 100 ವರ್ಷ ಬದುಕೋದು ಎಂದರೆ ಅಪರೂಪ ಆದರೆ ಭಾನಾಪುರದ ಸುಂದರ ತೋಟವೊಂದರಲ್ಲಿ ಆಪ್ತೇಷ್ಟ ನೆಂಟರಿಸ್ಟರು ಸೇರಿ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ವೃದ್ಧೆಯೊಬ್ಬರ ೧೦೦ ನೇ ವರ್ಷದ ಬರ್ತಡೆಯನ್ನು ಆಚರಿಸಿ ಆ ಹಿರಿಯ ವೃದ್ಧೆಯ ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಮರಿಮೊಮ್ಮಗಳ ನಾರಿದಟ್ಟಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮ ಹಳೆಬೇರು, ಹೊಸ ಚಿಗುರು ಎಂಬುದಕ್ಕೆ ಸಾಕ್ಷಿಯಂತಿತ್ತು.
ಕುಕನೂರು ತಾಲೂಕಿನ ಭಾನಾಪುರದಲ್ಲಿ ಅಜ್ಜಿಯೊಂದಿಗೆ ಪುಟ್ಟ ಬಾಲಕಿ ಕುಳ್ಳರಿಸಿ ಸಮಾರಂಭ ಏರ್ಪಡಿಸಿದ್ದರು. ಇಡೀ ಕಾರ್ಯಕ್ರಮದಲ್ಲಿ ಅಜ್ಜಿ ಹಾಗೂ ಈ ಮರಿಮೊಮ್ಮಗಳು ಕೇಂದ್ರ ಬಿಂದುವಾಗಿದ್ದರು. ಅಂದಹಾಗೆ ಇದೊಂದು ಹಳೆಬೇರು, ಹೊಸಚಿಗುರು ಎಂಬುದಕ್ಕೆ ಸಾಕ್ಷಿಯಾದ ಕಾರ್ಯಕ್ರಮವಾಗಿತ್ತು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ಹಿರೇಗೌಡರ ಕುಟುಂಬ ತಮ್ಮ ಮನೆಯ ಹಿರಿಯ ಸದಸ್ಯೆ ಗೌರಮ್ಮ ನೀಲನಗೌಡ್ರ ಹಿರೇಗೌಡ್ರ ಅವರ ನೂರನೇ ವರ್ಷದ ಬರ್ತಡೆಯನ್ನು ಅತ್ಯಂತ ಸಡಗರದಿಂದ ಆಚರಿಸಿದರು. ತಮ್ಮ ತೋಟದಲ್ಲಿ ಅಜ್ಜಿ ಗೌರಮ್ಮ ಅವರ ೧೦೦ ನೇ ವರ್ಷದ ಬರ್ತಡೆಯ ಜೊತೆಗೆ ಗೌರಮ್ಮ ಅವರ ಮರಿಮೊಮ್ಮಗಳಾದ ಕೃಷಿಯ ನಾರಿದಟ್ಟಿ ಕಾರ್ಯಕ್ರಮವನ್ನು ಒಟ್ಟೊಟ್ಟಿಗೆ ಮಾಡುವ ಮೂಲಕ ಸಂಭ್ರಮಿಸಿದರು. ೧೦೦ ನೇ ವರ್ಷದ ಬರ್ತಡೆ ಆಚರಿಸಿಕೊಂಡ ಗೌರಮ್ಮ ಅವರಿಗೆ ೬ ಜನ ಮಕ್ಕಳು, ೨೦ ಜನ ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳನ್ನು ಕಂಡಿದ್ದಾರೆ. ಅವರೆಲ್ಲಾ ಸೇರಿ ಅಜ್ಜಿಯ ಬರ್ತಡೆಯನ್ನು ಬಂಧು ಆಪ್ತರೊಂದಿಗೆ ತೋಟದಲ್ಲಿ ಆಚರಿಸಿ ಸಂಭ್ರಮಿಸಿದರು.
ಇನ್ನು ಅಜ್ಜಿಯ ೧೦೦ ವರ್ಷವಾದರೂ ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಈಗಿನ ಕಾಲದಲ್ಲಿ ೪೦ ವರ್ಷ ದಾಟಿದರೆ ಸಾಕು ಮುದುಕರ ರೀತಿ ಕಾಣುತ್ತಾರೆ. ಆದರೆ ಅಜ್ಜಿಯ ರೂಡಿಸಿಕೊಂಡಿರುವ ಆಹಾರ ಪದ್ದತಿಯಿಂದ ಆರೋಗ್ಯ ಕಾಯ್ದುಕೊಂಡಿದ್ದಾರೆ. ಹೀಗಾಗಿ ಅಜ್ಜಿ ನಮಗೆ ಮಾದರಿ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅಜ್ಜಿಯ ಮೊಮ್ಮಗ ಶಂಕರಗೌಡ.
ಕಾರ್ಯಕ್ರಮಕ್ಕೆ ಬಂದವರು ಅಜ್ಜಿಯ ಆಶೀರ್ವಾದ ಪಡೆದುಕೊಂಡು ಶುಭಕೋರಿದರು. ಒಟ್ನಲ್ಲಿ ಅಜ್ಜಿಯ ಬರ್ತಡೆ ಹಿನ್ನೆಲೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಒಂದೆಡೆ ಸೇರಿ ಜೇನಿನಗೂಡು ಹೋಲುವಂತಿತ್ತು..