ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ರಾಯಚೂರು ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿಯಾದ ವೆಂಕಟೇಶ ಬೇವಿನಬೆಂಚಿ ಅವರು ಇಂದು ಕಾರ್ಯಕ್ರಮ ಮುಖ್ಯಸ್ಥರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಪ್ರಸಾರ ಭಾರತಿ,ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ದೆಹಲಿಯ ಮಹಾನಿರ್ದೇಶಕರು ಅನುಮೋದನೆ ನೀಡಿದ ಬಳಿಕ ಅಧಿಕಾರ ಸ್ವೀಕರಿಸಿದರು. ಆಕಾಶವಾಣಿ ರಾಯಚೂರಿನಲ್ಲಿ 18 ವರ್ಷಗಳ ಕಾಲ ಕಾರ್ಯಕ್ರಮ ವಿಭಾಗದಲ್ಲಿ ಅನೇಕ ಉತ್ಕೃಷ್ಟ ಕಾರ್ಯಕ್ರಮಗಳನ್ನು ಮಾಡುತ್ತ ಜನಮನ ಗೆದ್ದಿದ್ದಾರೆ.
ಯುವವಾಣಿ, ಆರೋಗ್ಯ ಭಾಗ್ಯ, ಮಕ್ಕಳ,ಮಹಿಳೆಯ ಕಾರ್ಯಕ್ರಮಗಳು, ಸಾಹಿತ್ಯ ಕಾರ್ಯಕ್ರಮಗಳನ್ನ ವಿನೂತನ ಮತ್ತು ವಿಶಿಷ್ಟವಾಗಿ ಮಾಡುವುದರ ಮೂಲಕ ಆಕಾಶವಾಣಿಯನ್ನು ಜನವಾಣಿಯನ್ನಾಾಗಿಸಿದ್ದಾರೆ. ಕೇಳುಗರನ್ನು ಸೆಳೆಯುವಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಕೇಳುಗರ ಮನಸು ಗೆದ್ದಿದ್ದಾರೆ.
ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾಗಿ ಬೇವಿನಬೆಂಚಿ ಅಧಿಕಾರ ಸ್ವೀಕಾರ

