ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಅ.20 : ಒಕ್ಕಲಿಗ ಸಮಾಜದ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಭಗವಾನ್ರವರ ವರ್ತನೆ ಖಂಡನೀಯ ಜಾತಿ ಜಾತಿಗಳ ಮಧ್ಯೆ ಧರ್ಮ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ. ಬಿ.ಕೆ.ವಿನೋದಕುಮಾರಗೌಡ ಒತ್ತಾಯಿಸಿದ್ದಾರೆ.
ಹಸಿದ ಹೊಟ್ಟೆಗೆ ಅನ್ನ ನೀಡುವ ಕೆಲಸ ಮಾಡುವ ಒಕ್ಕಲಿಗರು ಭೂತಾಯಿಯನ್ನು ನಂಬಿ ಬದುಕು ಕಟ್ಟಿಕೊಂಡವರು ಒಕ್ಕಲಿಗ ಒಕ್ಕಲುತನ ಮಾಡದೇ ಇದ್ದರೆ ಆಹಾರ ಉತ್ಪಾದನೆಯ ಅಭಾವ ಉಂಟಾಗಿ ಹಸಿವಿನ ಬಿಸಿ ತಟ್ಟಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು, ಸಮಾಜದಲ್ಲಿನ ಸಾಮರಸ್ಯ ಹಾಳು ಮಾಡಲು ಭಗವಾನ್ ಹೊರಟಿದ್ದಾರೆ. ನಮ್ಮ ಕುವೆಂಪುರವರು ಸರ್ವಜನಾಂಗದ ಶಾಂತಿಯ ತೋಟ ಎಂದು ನಮ್ಮ ನಾಡನ್ನು ಕರೆಯುವ ಮೂಲಕ ಬಹುದೊಡ್ಡ ಸಂದೇಶ ನೀಡಿದ್ದಾರೆ. ಇಂತಹ ಹೇಳಿಕೆಯನ್ನು ತಿರುಚಿ ಹೇಳುವಂತಹುದು ಆತನ ಕೀಳು ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಅವರನ್ನು ಯಾವುದಾದರೂ ಮಾನಸಿಕ ಆಸ್ಪತ್ರೆಗೆ ದಾಖಲಿಸಿದರೆ ಒಳಿತು ಇವರ ಅಸಂಬದ್ದ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ.
ಇಡೀ ಸಮುದಾಯದ ಮನಸ್ಸುಗಳಿಗೆ ಘಾಸಿ ಉಂಟು ಮಾಡಿ ನೊವಿನ ಗಾಯವಾಗಿದೆ ಇಂತಹ ವ್ಯಕ್ತಿಗಳನ್ನು ಸರ್ಕಾರ ಗಡಿಪಾರು ಮಾಡಬೇಕು ಅಥವಾ ಜಾತಿನಿಂದನೆಯ ಕೇಸ್ ದಾಖಲಿಸಿ ನ್ಯಾಯಾಂಗಕ್ಕೆ ಒಪ್ಪಿಸಿ ಶಿಕ್ಷಗೆ ಒಳಪಡಿಸಬೇಕು ಎಂದು ನಾವು ಆಗ್ರಹಿಸುತ್ತೆವೆ.