ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ. 20 : ಒಕ್ಕಲುತನ ಮಾಡಿ ದೇಶಕ್ಕೆ ಅನ್ನ ಕೊಡುವಂತ ಅನ್ನದಾತರು ಅಂತಹ ಒಕ್ಕಲಿಗರನ್ನು ಸಂಸ್ಕೃತಿ ಹೀನರು ವಿವಾದಾತ್ಮಕ ಹೇಳಿಕೆ ನೀಡಿರುವ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ರವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಶಿಡ್ಲಘಟ್ಟ – ಚಿಂತಾಮಣಿ ಮುಖ್ಯ ರಸ್ತೆ ಟೋಲ್ ಗೇಟ್ ಬಳಿ 23 ನೇ ವಾರ್ಡಿನಲ್ಲಿರುವ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷರಾದ ನಾರಾಯಣಸ್ವಾಮಿ, ಒಕ್ಕಲಿಗರು ಎಂದರೆ ಒಂದು ಜಾತಿ ವರ್ಗದವರಲ್ಲ, ಒಕ್ಕಲುತನ ಮಾಡಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವ ಕೊಡುಗೈ ದಾನಿಗಳು ಹೇಳಿಕೆಯಿಂದ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಭಗವಾನ್ ರವರಿಂದ ಇಂಥಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಆದರೂ, ಈ ಹೇಳಿಕೆ ಅಸಂಖ್ಯಾತ ಮನಸ್ಸುಗಳನ್ನು ಘಾಸಿಗೊಳಿಸಿದೆ ಅವರನ್ನು ಗಡಿಪಾರು ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟದಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಗರ ಘಟಕ ಸಂಘದ ಕಾರ್ಯದರ್ಶಿ ಪ್ರಕಾಶ್, ಜಂಗಮಕೋಟೆ ಅಧ್ಯಕ್ಷ ಕೃಷ್ಣಪ್ಪ ,ಮುರಳಿ ಹೇಮಾರ್ಲಹಳ್ಳಿ , ವೆಂಕಟೇಶ ಮೂರ್ತಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮುನಿರಾಜು, ಜೆ.ವಿ.ಸುರೇಶ್,ಯುವ ಮುಖಂಡ ಎನ್.ವಿಜಯ್ ಎಂ, ಕೆಂಪಣ್ಣ,ಗೋಪಾಲ್, ಮೇಲೂರು ಚಂದ್ರಕಾಂತ್, ಆನೂರು ದೇವರಾಜ್, ಕೊತ್ತನೂರು ನವೀನ್ ಕುಮಾರ್ ಇನ್ನು ಮುಂತಾದವರು ಹಾಜರಿದ್ದರು.