ಸುದ್ದಿಮೂಲ ವಾರ್ತೆ ಬೀದರ್, ಜ.22:
ವಿಧಾನಮಂಡಲದ ಜಂಟಿ ಅಧಿವೇಶನದ ಮುಂಚೆ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ, ರಾಜ್ಯಪಾಲರು ತಮ್ಮ ಭಾಷಣ ಮುಗಿಸಿ ಬರುವಾಗ ಕಾಂಗ್ರೆೆಸ್ ಪಕ್ಷದ ಶಾಸಕರುಗಳು ಅವಮಾನಿಸಿರುವುದು ಖಂಡನೀಯ, ಸ್ಪೀಕರ್ ಈ ಅಧಿವೇಶನ ಮುಗಿಯುವವರೆಗೂ ಸಂಬಂಧಿಸಿದ ಎಲ್ಲಾ ಶಾಸಕರನ್ನು ಅಮಾನತ್ತಿಿನಲ್ಲಿಡಬೇಕೆಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂವಿಧಾನದ ಆರ್ಟಿಕಲ್ಗಳು ಉಲ್ಲೇಖಿಸಿ, ರಾಜ್ಯಪಾಲರು ತಪ್ಪುು ಮಾಡಿದ್ದಾರೆ ಎಂದೆಲ್ಲಾ ಆರೋಪಿಸುತ್ತಿಿರುವುದು, ಒಬ್ಬ ಮುಖ್ಯಮಂತ್ರಿಿಯಾಗಿ ಅವರ ಈ ನಡೆ ಅವರಿಗೆ ಶೋಭೆ ತರದು. ಕಾಂಗ್ರೆೆಸ್ ಪಕ್ಷ, ಅದರ ಮಿತ್ರ ಪಕ್ಷಗಳು ಮತ್ತು ರಾಜ್ಯದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರ ಸಂವಿಧಾನಿಕ ಹುದ್ದೆ ಮೇಲೆ ಇರುವ ರಾಜ್ಯಪಾಲರುಗಳನ್ನು ದೇಶದೆಲ್ಲೆಡೆ ಸರಿಯಾಗಿ ನಡೆಸಿಕೊಳ್ಳದೆ ಅವಮಾನಿಸುವ ಕೆಲಸ ಮಾಡುತ್ತಿಿದೆ. ಇದು ಖಂಡನೀಯ.
ರಾಜ್ಯಪಾಲರಿಗೂ ಗೊತ್ತಿಿದೆ, ಯಾವ ಯೋಜನೆ ಎಷ್ಟು ಪರಿಣಾಮಕಾರಿ, ಎಷ್ಟು ಭ್ರಷ್ಟ ಯೋಜನೆ ಎಂಬುದು. ಆದ್ದರಿಂದ ರಾಜ್ಯಪಾಲರು, ರಾಜ್ಯದ ಜನರ ಹಿತದೃಷ್ಟಿಿಯನ್ನು ಗಮನದಲ್ಲಿಟ್ಟುಕೊಂಡು, ಎಷ್ಟು ಭಾಷಣ ಮಾಡಬೇಕೋ ಅಷ್ಟೆೆ ಮಾಡಿದ್ದಾರೆ. ರಾಜಕಾರಣ ಮಾಡುವ ಉದ್ದೇಶ ಮತ್ತು ಭ್ರಷ್ಟಾಾಚಾರಕ್ಕೆೆ ದಾರಿ ಮಾಡಿಕೊಡುವ ಉದ್ದೇಶದಿಂದ ಸಿದ್ದರಾಮಯ್ಯನವರ ಸರ್ಕಾರ ಮತ್ತು ಕಾಂಗ್ರೆೆಸ್ ಪಕ್ಷ ವಿಬಿ-ಜಿರಾಮ್ಜೀ ಯೋಜನೆಗೆ ವಿರೋಧ ಮಾಡುತ್ತಿಿವೆ.
ಒಳ್ಳೆೆಯ ಯೋಜನೆ ಬಗ್ಗೆೆ ರಾಜ್ಯಪಾಲರಿಂದ ತಪ್ಪಾಾಗಿ ಹೇಳಿಸುವ ಯತ್ನ ಕಾಂಗ್ರೆೆಸ್ ಸರ್ಕಾರ ಮಾಡುತ್ತಿಿದೆ. ಕಾಂಗ್ರೆೆಸ್ನವರು ಅಧಿಕಾರದಲ್ಲಿದ್ದಾರೆ ಎನ್ನುವ ಕಾರಣಕ್ಕೆೆ ಸಂವಿಧಾನದ ದುರುಪಯೋಗ ಪಡಿಸಿಕೊಂಡು ಮನಸ್ಸಿಿಗೆ ಬಂದಿದ್ದೆಲ್ಲಾ ಭಾಷಣ ಮಾಡಲು ಕೊಟ್ಟರೆ ರಾಜ್ಯಪಾಲರು ಯಾಕೆ ಭಾಷಣ ಮಾಡುತ್ತಾಾರೆ ಎಂದು ಖೂಬಾ ಪ್ರಶ್ನೆೆ ಮಾಡಿದ್ದಾರೆ.
ಮೋದಿಯವರ ಮೇಲೆ, ಕೇಂದ್ರ ಸರ್ಕಾರದ ವಿರುದ್ದ ಮುಗಿಬೀಳುವುದೇ ಸಿದ್ದರಾಮಯ್ಯನವರು ಕಾಯಕ ಮಾಡಿಕೊಂಡಿದ್ದಾರೆ ಎಂದು ಪತ್ರಿಿಕಾ ಪ್ರಕಟಣೆ ಮೂಲಕ ಖೂಬಾ ಹರಿಹಾಯ್ದಿಿದ್ದಾರೆ.
ಬೀದರ್ : ರಾಜ್ಯಪಾಲರನ್ನು ಅವಮಾನಿಸಿರುವ ಶಾಸಕರನ್ನು ಅಮಾನತಗೊಳಿಸಿ -ಭಗವಂತ ಖೂಬಾ

