ಸುದ್ದಿಮೂಲ ವಾರ್ತೆ ಯಲಬುರ್ಗಾ, .18:
ಕಾಂಗ್ರೆಸ್ನಲ್ಲಿ ಇಷ್ಟು ದಿನ ಬದಿಗೆ ಸರಿದಿದ್ದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾದಲ್ಲಿ ಶನಿವಾರ ಕಾಂಗ್ರೆಸ್ನ ಇಬ್ಬರು ಶಾಸಕರು ಸಿದ್ದರಾಮಯ್ಯ ಪರ ಬ್ಯಾಾಟಿಂಗ್ ಮಾಡಿ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಯಲಬುರ್ಗಾದಲ್ಲಿ ಶನಿವಾರ ನಡೆದ ಕ್ರಾಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಾಳ ಮತ್ತು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು ಎಂದು ವೇದಿಕೆಯಲ್ಲಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆ ಯ ಚರ್ಚೆ ಜೋರಾಗಿತ್ತು. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬೆಂಬಲಿಗರು ವೇದಿಕೆಗಳಲ್ಲಿ ತಮ್ಮ ತಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದರು. ಇದು ನಾಯಕರ ಮಧ್ಯೆ ಇರು ಸು-ಮುರುಸಿಗೂ ಕಾರ ಣವಾಗಿತ್ತು. ಬಳಿಕ ಪಕ್ಷದ ಹೈಕಮಾಂಡ್ ಇಬ್ಬ ರನ್ನೂ ಕರೆದು ಪಕ್ಷವನ್ನು ಮೊದಲು ಅಧಿಕಾರಕ್ಕೆ ತನ್ನಿ. ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆಗಳಿಗೆ ಕಡಿವಾಣ ಹಾಕಿ ಎಂದು ತಾಕೀತು ಮಾಡಿ ಕಳುಹಿಸಿದ್ದರು.
ಮತ್ತೆ ಶಾಸಕರ ಬ್ಯಾಟಿಂಗ್
ಇದರಿಂದ ಕೆಲದಿನಗಳ ವರೆಗೆ ಮೌನವಾಗಿದ್ದ ಶಾಸಕರು ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ತಮ್ಮ ನಾಯಕರ ಪರ ಬ್ಯಾಟಿಂಗ್ ಆರಂಬಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಮುಂದಿನ ಮುಖ್ಯಮಂತ್ರಿಯನ್ನಾಗಿ ಸಿದ್ದರಾಮಯ್ಯ ಅವರನ್ನು ಮಾಡಬೇಕು. ಮುಖ್ಯಮಂತ್ರಿ ಯಾರು ಎಂದು ಯಾರನ್ನು ಕೇಳಿದರೂ ಸಿದ್ದರಾಮಯ್ಯ ಎನ್ನುತ್ತಾರೆ. ಭಾಗ್ಯಗಳನ್ನು ನೀಡಿರುವ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಹೆಬ್ಬಾಳ ಶಾಸಕ ಭೈರತಿ ಸುರೇಶ್, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು. ಈ ಕ್ಷೇತ್ರದಲ್ಲಿ ಬಸವರಾಜ ರಾಯರಡ್ಡಿ ಆಯ್ಕೆಯಾದರೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಈ ಕ್ಷೇತ್ರದ ಶಾಸಕರು ಏನಾದರೂ ಕೆಲಸ ಮಾಡಿದ್ದಾರಾ?, ಎಂದು ಪ್ರಶ್ನಿಸಿದರು.
ನನ್ನನ್ನು ಮುಗಿಸುವುದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ?
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಮಂತ್ರಿ ಮಂಡ್ಯದಲ್ಲಿ ಮಾತನಾಡುತ್ತಾಾ ಟಿಪ್ಪುನಂತೆ ಸಿದ್ದರಾಮಯ್ಯನ ಮುಗಿಸಿ ಎಂದಿದ್ದಾನೆ. ಇದಕ್ಕೆ ಜನರ ಒಪ್ಪಿಗೆ ಇದೇಯೇ? ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ಜನರ ಅಭಿವೃದ್ದಿಯ ಬಗ್ಗೆ ಮಾತನಾಡಬೇಕು. ಸಿದ್ದರಾಮಯ್ಯ ಮುಗಿಸಿ ಎನ್ನುವುದು ಚರ್ಚೆ ವಿಷಯನಾ? ಮನುಷ್ಯ ಮನುಷ್ಯನನ್ನು ದ್ವೇಷಿಸುವವರು ರಾಕ್ಷಸರು ಎಂದು ಹೇಳಿದರು.
ಮುಗಿಸುವುದಕ್ಕೆ ನಿಮ್ಮ ಒಪ್ಪಿಗೆ ಇದೆಯೇ?
ಯಾರೂ ದ್ವೇಷವನ್ನು ಇಟ್ಟಿಕೊಳ್ಳಬಾರದು. ಶಿವರಾತ್ರಿಯಂದು ಉಪವಾಸ ಮಾಡಿದರೆ ಮಾತ್ರ ದೇವರ ಒಲಿಸಿಕೊಳ್ಳುವುದಲ್ಲ. ಉಪವಾಸ ಮಾಡದಿದ್ದರೂ ದೇವರ ಒಲಿಸಿಕೊಳ್ಳಬಹುದು. ದೇವನೊಬ್ಬ ನಾಮ ಹಲವು. ಎಲ್ಲರಿಗೂ ಒಳ್ಳೆಯದು ಬಯಸಿದರೆ ಅದೇ ಸ್ವರ್ಗ ಎಂದರು.
ರಾಜ್ಯದ ಜನರ ಆಸ್ತಿ, ಪಾಸ್ತಿ, ಮಾನವನ್ನು ಕಾಪಾಡಲು ಸರಕಾರವಿದೆ. ಇದನ್ನು ಪ್ರತಿಯೊಬ್ಬರು ವಿಚಾರ ಮಾಡಬೇಕು. ಯಾರು ಒಳ್ಳೆಯದನ್ನು ಮಾಡುತ್ತಾರೊ ಅವರೊಂದಿಗೆ ಇರಿ. ನಾನು ಕೆಟ್ಟದ್ದು ಮಾಡಿದರೆ ನನ್ನೊೊಂದಿಗೆ ಬೇಡ. ಒಳ್ಳೆಯದನ್ನು ಮಾಡಿದರೆ ನನ್ನೊೊಂದಿಗೆ ಇರಿ. ಸತ್ಯ ಹೇಳಿದರೆ ಯಾರು ಕೋಪಿಸಿಕೊಳ್ಳಬಾರದು. ದೇವೇಗೌಡ, ಎಸ್.ಎಂ.ಕೃಷ್ಣಾಾ ಕೆಂಪೇಗೌಡ ಜಯಂತಿ ಮಾಡಲಿಲ್ಲ. ಬೊಮ್ಮಾಾಯಿ ಚನ್ನಮ್ಮ ಜಯಂತಿ ಮಾಡಿದರಾ? ಮಾಡಿದವರನ್ನು ನೆನಪಿಸಿಕೊಳ್ಳಬೇಕು. ನನ್ನನ್ನು ಯಾರು ಕೊಲ್ಲುತ್ತಾಾರೆ ಎಂದು ಹೇಳಿದರೆ ಕೊಲ್ಲಲು ಒಪ್ಪಿಗೆ ಇದೆಯೇ? ಎಂದು ಪ್ರಶ್ನಿಸಿದರು.
ಅನ್ನಭಾಗ್ಯದಲ್ಲಿ ಅಕ್ಕಿ ನೀಡಿದ್ದನ್ನು ಹೇಳಿದರೆ ಯಾಕೆ ಹೊಟ್ಟೆ ಉರಿ. ನಿಮ್ಮ ಪರವಾಗಿ ತೀರ್ಮಾನ ತೆಗೆದುಕೊಳ್ಳುವವರ ಬಗ್ಗೆ ನೀವು ತೀರ್ಮಾನಿಸಿ ಎಂದರು.
ವೇದಿಕೆಯಲ್ಲಿ ಆಕ್ಷೇಪ :
ವೇದಿಕೆಯಲ್ಲಿ ಯಲಬುರ್ಗಾ ಶಾಸಕರು ಏನು ಮಾಡಿದ್ದಾರೆ ಎಂದು ಶಾಸಕ ಸುರೇಶ ಭೈರತಿ ಪ್ರಶ್ನಿಸಿದ್ದಕ್ಕೆ, ಕಳಕಪ್ಪ ಕಂಬಳಿ ಎನ್ನುವವರು ವೇದಿಕೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯಕ್ರಮ ಸಮಾಜದ ಕಾರ್ಯಕ್ರಮ. ಸಿದ್ದರಾಮಯ್ಯ ಪರವಾಗಿ ಮಾತನಾಡುವವರು ವೇದಿಕೆಯಿಂದ ಹೊರಹೋ ಗಬಹುದು. ಇಲ್ಲಿ ರಾಜಕೀಯ ಮಾತನಾಡಕೂಡದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಗ ವೇದಿಕೆಯತ್ತ ಬಂದ ಬಸವರಾಜ ರಾಯರಡ್ಡಿ, ಭೈರತಿ ಸುರೇಶ್ ಅವರು ಅಭಿಮಾನಕ್ಕಾಗಿ ಸಿದ್ದರಾಮಯ್ಯ ಸಿಎಂ ಆಗಲಿ ಎಂದಿದ್ದಾರೆ. ಇದರಲ್ಲಿ ಅನ್ಯತಾ ಭಾವಿಸಬಾರದು. ಸಿದ್ದರಾಮಯ್ಯನವರ ಕಾಳಜಿಯಿಂದ ಯಲಬುರ್ಗಾದಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳ್ಳಲು ಕಾರಣವಾಗಿದೆ. ದಾರ್ಶನಿಕರ ಆದರ್ಶಗಳನ್ನು ಪಾಲಿಸಬೇಕು, ಎಂದು ಹೇಳಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು.