ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ಶತಮಾನಗಳ ಸಿಟ್ಟನ್ನು ಸಿಡಿಮದ್ದಾಗಿಸಿಕೊಂಡು ಸಿದ್ದು ನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವ್ ಯುದ್ಧ ವೀರರನ್ನು ನೆನೆಯುವ ಹಿನ್ನೆೆಲೆಯಲ್ಲಿ ಜ.1ರಂದು ರಾಯಚೂರಿನಲ್ಲಿ ಜಾಥಾ ಹಮ್ಮಿಿಕೊಳ್ಳಲಾಗಿದೆ ಎಂದು ಭೀಮಾ ಕೋರೆಗಾಂವ್ ಸಮಿತಿಯ ಯುವ ಮುಖಂಡ ಪರಶುರಾಮ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಆಸ್ಪೃಶ್ಯತೆಯ ವಿರುದ್ಧ ಮಹರರು ನಡೆಸಿದ ಐತಿಹಾಸಿಕ ಹೋರಾಟ ಹಾಗೂ ಪೇಶ್ವೆೆಗಳ ವಿರುದ್ಧ ಸಾಧಿಸಿದ ವಿಜಯವನ್ನು ಸ್ಮರಿಸುವ ಉದ್ದೇಶದಿಂದ ನಗರದಲ್ಲಿ ಭೀಮಾ ಕೋರೆಗಾಂವ್ 208 ನೇ ವಿಜಯೋತ್ಸವ ಜಾಥಾ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಂಖ್ಯೆೆಯಲ್ಲಿ ಕಡಿಮೆ ಇದ್ದರೂ ಮಹರರು ಧೈರ್ಯ, ಶೌರ್ಯದಿಂದ ಯುದ್ಧ ನಡೆಸಿ ಜಯ ಗಳಿಸಿದ್ದು ಸಮಾನತೆ, ಸ್ವಾಾಭಿಮಾನ ಹಾಗೂ ಸಾಮಾಜಿಕ ನ್ಯಾಾಯದ ಸಂಕೇತವಾಗಿದೆ ಹೀಗಾಗಿ, ಅಂದು ಸಂಜೆ 5 ಗಂಟೆಗೆ ನಗರದ ನೇತಾಜಿ ವೃತ್ತದಿಂದ ಆರಂಭವಾಗಿ ಪ್ರಮುಖ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಸಮಾಪ್ತಿಿಗೊಳ್ಳಲಿದೆ ಎಂದರು.
ಮೆರವಣಿಗೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ ಅನುಯಾಯಿಗಳು, ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಲಿದ್ದಾರೆ. ವಿಜಯೋತ್ಸವ ಕಾರ್ಯಕ್ರಮ ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಿಯಲ್ಲಿ ಉಮೇಶ , ಸತೀಶ್ , ಸಣ್ಣ ಈರಣ್ಣ , ಸುಭಾಷ್ ಇತರರಿದ್ದರು.

