ಸುದ್ದಿಮೂಲ ವಾರ್ತೆ ಭಾಲ್ಕಿಿ, ಜ.12
ಶತಾಯುಷಿ, ಮಾಜಿ ಸಚಿವ ಹಾಗೂ ಲಿಂಗಾಯತ ಸಮಾಜದ ಹಿರಿಯ ಮುಖಂಡ ಭೀಮಣ್ಣ ಖಂಡ್ರೆೆ ಆರೋಗ್ಯ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ.
ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬೀದರ್ ನಗರದ ಖಾಸಗಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದ ಭೀಮಣ್ಣ ಖಂಡ್ರೆೆ ಅವರನ್ನು ಸೋಮವಾರ ಬೆಳಿಗ್ಗೆೆನೇ ಭಾಲ್ಕಿಿ ಪಟ್ಟಣದ ಸ್ವಗೃಹಕ್ಕೆೆ ಸ್ಥಳಾಂತರಿಸಲಾಗಿದೆ.
ಈ ಹಿನ್ನಲೆ ಸಾಮಾಜಿಕ ತಾಣಗಳಲ್ಲಿ ನಿಧನ ವದಂತಿಗಳು ಹರಿದಾಡುತ್ತಿಿದ್ದು, ಈ ಬಗ್ಗೆೆ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ ಮಾಧ್ಯಮಗಳೊಂದಿಗೆ ಮಾತನಾಡಿ, ವದಂತಿಗಳಿಗೆ ಕಿವಿಗೂಡದಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಖಂಡ್ರೆೆ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿಿದೆ. ಗುಣಮುಖರಾಗುವ ವಿಶ್ವಾಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಭೀಮಣ್ಣ ಖಂಡ್ರೆೆ ಅನಾರೋಗ್ಯ ಹಿನ್ನಲೆ ಪುತ್ರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಜಿಲ್ಲೆಯಲ್ಲೇ ಠಿಕಾಣಿ ಹೂಡಿದ್ದು, ತೀವ್ರ ನಿಗಾವಹಿಸಿದ್ದಾರೆ.
ಆದರೆ, ಖಂಡ್ರೆೆ ಕುಟುಂಬದ ಅಭಿಮಾನಿಗಳು, ಕಾಂಗ್ರೆೆಸ್ ಕಾರ್ಯಕರ್ತರು ಭಾಲ್ಕಿಿ ಕಡೆಗೆ ತೆರಳುತ್ತಿಿದ್ದು, ಪೊಲೀಸರು ಬಿಗಿ ಭದ್ರತೆ ಏರ್ಪಡಿಸುತ್ತಿಿದ್ದಾರೆ.

