ಕಲೆಯನ್ನೇ ನಂಬಿದ ಭೀಮರಾಯ ಕಾಶಿಪತಿ!
ಕಟ್ಟಿಗೆ ತುಂಡಿನಲ್ಲಿ ವಿವಿಧ ಕಲೆಯನ್ನು ಕೆತ್ತಿದ ಕಲೆಗಾರ ಬೇಲೂರಿನ ಯುವ ಪ್ರತಿಭೆ ಭೀಮರಾಯ ಕಾಶಿಪತಿ!!
ಕಲೆಗಾರರನ್ನು ಗುರುತಿಸುವ ಕೆಲಸ ಸರ್ಕಾರ ಮಾಡಲಿ : ವಿಶ್ವಕರ್ಮ
ಸಂಪೂರ್ಣ ತೆರಬಂಡಿಯನ್ನು ಸಾಗವಾನಿ ಕಟ್ಟಿಗೆಯಿಂದ ತಯಾರಿಸಿದ ಶ್ರೀ ಭೀಮರಾಯ ಕಾಶಿಪತಿ, ಬಡಿಗೇರ್
ವರದಿ:-ಶರಣಪ್ಪ.ಎನ್. ನೀರಡಗಿ
ಜೇವರ್ಗಿ: ವಿಶ್ವವನ್ನೇ ನಿರ್ಮಾಣ ಮಾಡುವ ಶಕ್ತಿ ಹೊಂದಿದ ವಿಶ್ವಕರ್ಮನ ಕಲೆಯಲ್ಲಿ ಜಗತ್ ಅಡಗಿದೆ ಎನ್ನುವುದನ್ನು ಸಾಬೀತು ಮಾಡಲು ಹೊರಟಿರುವ ಯುವ ಕಲಾವಿದ ಭೀಮರಾಯ ಅವರು ತಮ್ಮ ಕಲೆಯಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಂಟಿರೆಂಟಿ ಕೋರಿಗೆ ದಿಂಡು ಕೃಷಿ ಸಾಮಗ್ರಿಗಳು ಆಧುನಿಕ ತಂತ್ರಜ್ಞಾನದಲ್ಲಿಯೂ ಕೂಡ ಜೀವಂತವಾಗಿ ಇರಿಸಿಕೊಂಡು ತಮ್ಮ ಕಸವನ್ನು ಮುಂದುವರಿಸುತ್ತಿರುವ ಕಲಾವಿದ ಭೀಮರಾಯ ಕಾಶಿಪತಿ ವಿಶ್ವಕರ್ಮ ಇಂದಿನ ಆಧುನಿಕ ಯುಗದಲ್ಲಿ ಕಲೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲವಾದರೆ ಮುಂದಿನ ಪೀಳಿಗೆಗೆ ಕುಲಕಸುಬು ಮಾಯವಾಗುತ್ತವೆ. ಅದಕ್ಕಾಗಿ ಸರ್ಕಾರ ಕಲೆ ಕಲೆಗಾರರನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲೆಗಳು ಉಳಿಯುತ್ತವೆ ಕಲೆಗಾರರು ಜೀವಂತವಾಗಿರುತ್ತಾರೆ ಎನ್ನುವುದು ನನ್ನ ಅಭಿಪ್ರಾಯ.
ತಾಲೂಕಿನ ಬೇಲೂರು ಗ್ರಾಮದ ಶ್ರೀ ಭೀಮರಾಯ ಕಾಶಿಪತಿ, ಬಡಿಗೇರ್ ಇವರು ತಮ್ಮ ವಿಶ್ವಕರ್ಮ ಸಮಾಜದ ವೃತ್ತಿಯನ್ನು ಮಾಡುತ್ತಿದ್ದು ಇವರು ಬೇಲೂರು ಗ್ರಾಮದಲ್ಲಿ ಸುಮಾರು 20 ವರ್ಷದಿಂದ ಬಡಿಗೆತನ ಮಾಡುತ್ತಾ ಬಂದಿದ್ದಾರೆ ತಂದೆಯವರ ಮೂಲಕ ವೃತ್ತಿಯನ್ನು ಕರಗತ ಮಾಡಿಕೊಂಡಿದ್ದಾರೆ.
ಇವರು ತಮ್ಮ ತಂದೆಯವರಾದ ಕಾಶಿಪತಿ ಭೀಮಣ್ಣ ಬಡಿಗೇರ್ ಇವರ ಮೂಲಕ ಈ ಕೆಲಸವನ್ನು ಕಲಿತಿರುತ್ತಾರೆ. ಇವರು ರೈತರ ಕೃಷಿ ಕೆಲಸದಲ್ಲಿ ಬಳಸಲಾಗುವ ಕೃಷಿ ಸಾಮಗ್ರಿಗಳಾದ ಕುಂಟಿ ಕೂರಗಿ ಎತ್ತಿನ ಬಂಡಿ ಮತ್ತು ಇನ್ನುಳಿದ ಸಾಮಗ್ರಿಗಳನ್ನು ತಯಾರಿಸುತ್ತಾರೆ.
ಇವರ ವಿಶೇಷ ಕೌಶಲ್ಯ ಏನೆಂದರೆ: ಗಾಜಿನ ಬಾಟಲಿಯಲ್ಲಿ ರಾಘೋಲ್ ದಿಂಡನ್ನು ಕೆತ್ತನೆ ಮಾಡಿರುತ್ತಾರೆ ಹಾಗೇನೆ ಒಂದೇ ಕಟ್ಟಿಗೆಯಲ್ಲಿ ಸರಪಳಿಯನ್ನು ಎರಡೂವರೆ ಪೂಟ್ ಉದ್ದವಿರುವ ಸರಪಳಿಯನ್ನು ಕೆತ್ತನೆ ಮಾಡಿರುತ್ತಾರೆ ಇತ್ತೀಚಿಗೆ ಢವಳಗಿ ಗ್ರಾಮದ ಮಡಿವಾಳೇಶ್ವರ ಮಠದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದ ಸಲುವಾಗಿ ತೆರಬಂಡಿ ಸ್ಪರ್ಧೆಗಳು ನಡೆಯುತ್ತದೆ ಈ ಸ್ಪರ್ಧೆಯಲ್ಲಿ ವಿವಿಧ ಗ್ರಾಮದ ರೈತರು ಭಾಗವಹಿಸುತ್ತಾರೆ ಈ ವರ್ಷದ ಜಾತ್ರೆಯಲ್ಲಿ ಶ್ರೀ ಭೀಮರಾಯ ಕಾಶಿಪತಿ, ಬಡಿಗೇರ್ ಇವರು ತಮ್ಮ ಕೈಚಳಕದಿಂದ ತೆರಬಂಡಿಯನ್ನು ತಯಾರಿಸಿರುತ್ತಾರೆ . ಸಂಪೂರ್ಣ ತೆರಬಂಡಿಯನ್ನು ಸಾಗವಾನಿ ಕಟ್ಟಿಗೆಯಿಂದ ತಯಾರಿಸಲಾಗಿದೆ. ಈ ಬಂಡಿಯನ್ನು ನೋಡಿದ ವಿವಿಧ ಗ್ರಾಮದ ರೈತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಶ್ರೀ ಘನಮಠೇಶ್ವರ ಪೂಜ್ಯರು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ. ಸಕಲ ವಿಶ್ವಕರ್ಮ ಸಮಾಜದ ಹಾಗೂ ಬೇಲೂರು ಮತ್ತು ಡವಳಗಿ ಗ್ರಾಮದ ಗುರುಹಿರಿಯರ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.
ಸರಕಾರ ಕಲೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನ ಮಾಡಲಿ ಎಂದು ಭೀಮರಾಯ ಅಭಿಪ್ರಾಯ ಪಟ್ಟರು. ಕಲೆಗಾರರಿಗೆ ಯಾವುದೇ ಪ್ರೋತ್ಸಾಹ ಧನ ನೀಡುತ್ತಿಲ್ಲ ಕೊನೆಗೆ ಅವರ ಕಲೆಗೆ ತಾಲೂಕ ಆಡಳಿತ ಕಲೆಯನ್ನು ಗುರುತಿಸಿ ಗೌರವಿಸುವ ಕೆಲಸವಾದರೂ ಮಾಡಲಿ ಎಂದು ಹೇಳಿದರು.