ಸುದ್ದಿಮೂಲ ವಾರ್ತೆ ಸಿರವಾರ, ಡಿ.29:
ರಾಜ್ಯ ಸರ್ಕಾರದ ಪಂಚ್ಯಗ್ಯಾಾರೆಂಟಿ ಯೋಜನೆಯಿಂದ ಯಾವುದೇ ಹಣದ ಕೊರತೆ ಇಲ್ಲ ಎಂದು ವಿಜ್ಞಾನ ತಂತ್ರಜ್ಞಾನ ಹಾಗೂ ಸಣ್ಣನೀರಾವರಿ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದರು.
ಅವರು ಸೋಮವಾರ ಪಟ್ಟಣದಲ್ಲಿ ಪ್ರಜಾಸೌಧ, ಕ್ರೀೆಡಾಂಗಣ, ಅಗ್ನಿಿಶಾಮಕ ಠಾಣೆ, ಗ್ರಂಥಾಲಯ, ವಸತಿ ನಿಲಯ, ಮುಖ್ಯ ರಸ್ತೆೆಯ ವಿಭಜಕ, ದೀಪಾ ಸೇರಿದಂತೆ 7ಕಾಮಗಾರಿಗೆ ಒಟ್ಟು 30ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿಿ ಕಾಮಗಾರಿಗಳಿಗೆ ವಿಜ್ಞಾನ ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು, ಹಾಗೂ ಮಾನ್ವಿಿ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ ಸೋಮವಾರ ಭೂಮಿ ಪೂಜೆಯ ಮೂಲಕ ಚಾಲನೆ ನೀಡಿದರು.
ನಂತರ ನಡೆದ ವೇದಿಕೆಯ ಕಾರ್ಯಕ್ರಮ ಸಸಿಗೆ ನೀರು ಹಾಕುವ ಮೂಲಕ ಉದ್ಘಾಾಟಿಸಿ ಮಾತನಾಡಿ ತಾಲೂಕಿನ ಕಚೇರಿಗಳು ಸಾರ್ವಜನಿಕ ಅನುಕೂಲವಾಗಲು ಅಭಿವೃದ್ಧಿಿಗೆ ಆದ್ಯತೆ ನೀಡಲಾಗಿದೆ. ಸಿರವಾರ ಪಟ್ಟಣದಲ್ಲಿ 6ಅಂಗನವಾಡಿ ಕೇಂದ್ರ 90ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ಸೌರಶಕ್ತಿಿ, 78ಲಕ್ಷ ರೂಪಾಯಿ ವೆಚ್ಚದಲ್ಲಿ, ಸಿರವಾರ ತಾಲೂಕಿನ 58ಕೋಟಿ ರೂಪಾಯಿ ಕಾಮಗಾರಿ ಮಾಡಲಾಗಿದೆ. ಕೋರ್ಟ್ ನಿರ್ಮಾಣಕ್ಕೆೆ ನಿವೇಶನದ ತಯಾರಿ ನಡೆದಿದೆ, ವಿವಿಧ ಸಮಾಜದ ಸಮುದಾಯ ಭವನ, ಅಭಿವೃದ್ಧಿಿ ಕಾರ್ಯಕ್ಕೆೆ ಅನುದಾನ ನೀಡಲಾಗುತ್ತದೆ, ಪಂಚ ಗ್ಯಾಾರೆಂಟಿ ಯೋಜನೆ ಎಲ್ಲಾ ಜನರಿಗೆ ತಲುಪಿದ ಬಗ್ಗೆೆ ಗ್ರಾಾ.ಪಂ.ಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲು ತಿಳಿಸಿದರು.
ಆಸ್ಪತ್ರೆೆಗಳು ಮೇಲ್ದರ್ಜೆಗೆ, ಶಾಲಾ ಕಟ್ಟಡಗಳು, ರಸ್ತೆೆಯ ಕಾಮಗಾರಿ ಅಭಿವೃದ್ಧಿಿಗೆ ಯಾವುದೇ ಹಣದ ಕೊರತೆ ಇಲ್ಲ, ವಿರೋಧ ಪಕ್ಷದವರ ಹಾಗೂ ಮಾಧ್ಯಮದ, ಸಾಮಾಜಿಕ ಜಾಲತಾಣದ ಸುಳ್ಳು ಮಾತಿಗೆ ಕಿವಿಗೊಡಬೇಡ ಎಂದು ಸಚಿವರು ಮಾನ್ವಿಿ-ಸಿರವಾರದಲ್ಲಿ ಕೈಗೊಂಡ ಕಾರ್ಯಗಳ ಪಟ್ಟಿಿ ಸಾರ್ವಜನಿಕರ ಮುಂದೆ ವಿವರಿಸಿದರು.
ನಂತರ ಶಾಸಕ ಹಂಪಯ್ಯ ನಾಯಕ ಮಾತನಾಡಿ ಕಾಡು ಕಲ್ಲನ್ನು ಕಡಿದು ನನ್ನನ್ನು ಶಿಲ್ಪಿಿಯಾಗಿ ಮಾಡಿದ್ದು, ಮಾನ್ವಿಿ, ಸಿರವಾರ ತಾಲೂಕಿನ ಅಭಿವೃದ್ಧಿಿ ಕಾರ್ಯಕ್ಕೆೆ, ನನ್ನ ರಾಜಕೀಯ ಗುರು, ಸಚಿವ ಎನ್. ಎಸ್.ಭೋಸರಾಜು ಅವರ ಮಾರ್ಗದಲ್ಲಿ 3ಬಾರಿ ಶಾಸಕನಾಗಿದ್ದು ಎಂದು ಹೊಗಳಿದರು.
ತಹಶಿಲ್ದಾಾರ ಅಶೋಕ ಪವಾರ ಪ್ರಾಾಸ್ತಾಾವಿಕ ನುಡಿದರು.
ವೇದಿಕೆಯ ಮೇಲೆ ಎನ್.ಗಿರಿಜಾಶಂಕರ, ಚುಕ್ಕಿಿ ಸೂಗಪ್ಪ ಸಾಹುಕಾರ್, ಪಂಚ ಗ್ಯಾಾರೆಂಟಿ ಯೋಜನೆ ಅನುಷ್ಠಾಾನ ಸಮಿತಿಯ ಅಧ್ಯಕ್ಷ ಬ್ರಿಿಜೇಶ್ ಪಾಟೀಲ, ಅಬ್ದುಲ್ ಗೂರ್ ಸಾಬ್ ಮಾನ್ವಿಿ, ಕೆ.ಶರಣಪ್ಪ ನಾಯಕ ಗುಡದಿನ್ನಿಿ, ಪ.ಪಂ.ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷ ಲಕ್ಷ್ಮಿಿ ಆದೆಪ್ಪ, ಇ.ಓ ಶಶಿಧರಸ್ವಾಾಮಿ, ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ, ಅಮರೇಶಪ್ಪಗೌಡ ಬಲ್ಲಟಿಗಿ, ಎನ್.ಉದಯಕುಮಾರ್ ಸಾಹುಕಾರ್, ದಾನನಗೌಡ, ಬ್ಲಾಾಕ್ ಅಧ್ಯಕ್ಷ ಚುಕ್ಕಿಿ ಶಿವಕುಮಾರ್, ಜಿಲ್ಲಾ ಕಾಂಗ್ರೆೆಸ್ ಮಹಿಳಾ ಅಧ್ಯಕ್ಷ ನಿರ್ಮಲಾ ಬೆಣ್ಣೆೆ, ಅರಕೇರಿ ಶಿವಶರಣ ಸಾಹುಕಾರ್, ಬ್ಲಾಾಕ್ ಮಹಿಳಾ ಘಟಕ ಅಧ್ಯಕ್ಷೆ ಎನ್.ರೇಣುಕಾ, ಬಿಸಿಎಂ. ಇಲಾಯ ಜಿಲ್ಲಾ ಪಟ್ಟಣದ ಜಿಲ್ಲಾಧಿಕಾರಿ ಸುನೀತಾ, ಕ್ರೀೆಡಾ ಇಲಾಖೆ ವೀರೇಶ ನಾಯಕ, ಕೆಆರ್ ಐಡಿಎಲ್ ಎಇಇ ಹನುಮಂತಪ್ಪ, ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಮಾನ್ವಿಿ,ಸಿರವಾರ ತಾಲ್ಲೂಕು ಕಾಂಗ್ರೆೆಸ್ ಕಾರ್ಯಕರ್ತರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಿರವಾರ: ಪ್ರಜಾಸೌಧ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ರಾಜ್ಯದ ಅಭಿವೃದ್ಧಿಿಗೆ ಹಣದ ಕೊರತೆ ಇಲ್ಲ – ಭೋಸರಾಜು

