ಸುದ್ದಿಮೂಲ ವಾರ್ತೆ ಸಿರವಾರ, ಡಿ.21:
ಪೋಲಿಯೊ ರೋಗ ಮುಕ್ತ ದೇಶವಾಗಿದೆ, ನೆರೆಯ ದೇಶದಲ್ಲಿ ಪೋಲಿಯೊ ರೋಗ ಇದೆ, ಭಾರತಕ್ಕೆೆ ಬಾರದಂತೆ ತಡೆಯಲು ಪಲ್ಸ್ ಪೋಲಿಯೊ ಹನಿ ಜನನದಿಂದ 5ವರ್ಷದ ಎಲ್ಲ ಮಕ್ಕಳಿಗೆ ತಪ್ಪದೆ ಹಾಕಿಸುವ ಮೂಲಕ ಸಹಕರಿಸಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ವೈ.ಭೂಪನಗೌಡ ಹೇಳಿದರು.
ಅವರು ರವಿವಾರ ಪಟ್ಟಣದ ಸರಕಾರಿ ಹಿರಿಯ ಪ್ರಾಾಥಮಿಕ ಮಾದರಿ ಶಾಲೆಯಲ್ಲಿ ಮಗುವಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಂತರ ಡಾ.ಸುನೀಲ್ ಸರೋದೆ ಮಾತನಾಡಿ ಪಟ್ಟಣದಲ್ಲಿ 9,241ಸಾವಿರ ಮಕ್ಕಳು ಇದ್ದು, 81 ಪೋಲಿಯೊ ಹನಿ ಹಾಕುವ ಭೂತ್ ಮಾಡಲಾಗಿದೆ. ಡಿ.21,22ರಂದು ಮನೆ ಮನೆಗೆ ಭೇಟಿನೀಡಿ ಉಳಿದ ಮಕ್ಕಳಿಗೆ ಪಲ್ಸ್ ಪೊಲೀಯೊ ಹಾಕಲಾಗುತ್ತದೆ, 15,155 ಮನೆಗಳ ಭೇಟಿ ನೀಡಲಿದ್ದು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಿಯವಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ.ಪಂ.ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಪ.ಪಂ.ಸದಸ್ಯ ಹಾಜಿ ಚೌದ್ರಿಿ, ಡಾ.ಅಭಿಷೇಕ ಪಾಟೀಲ್, ಜಿಲ್ಲಾ ನೋಡಲ್ ಅಧಿಕಾರಿ ಜ್ಯೋೋತಿ, ಆರೋಗ್ಯ ಶಿಕ್ಷಣ ಸಂಯೋಜಕಿ ಶ್ರೀದೇವಿ, ಸಿಬ್ಬಂದಿ ಯಲ್ಲಾಲಿಂಗ, ನಿರ್ಮಲಾ, ಪ್ರೇೇಮಾ, ಮು.ಗು.ರಮಾದೇವಿ ಸೇರಿದಂತೆ ಅನೇಕರು ಇದ್ದರು.
ಪೋಲಿಯೊ ರೋಗ ತಡೆಯಲು ಸಹಕರಿಸಿ – ಭೂಪನಗೌಡ

