ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಸೆ. 21 : ಬಿದಲೂರು ಸಹಕಾರ ಸಂಘವು ರೈತರಿಗೆ ಜೀವನಾಡಿಯಾಗಿದ್ದು, ಸರ್ಕಾರದಿಂದ ರೈತರಿಗೆ ಬಡ್ಡಿ ರಹಿತವಾಗಿ ಬೆಳೆ ಸಾಲ ವಿತರಿಸಲಾಗುತ್ತಿದೆ. ಇದರ ಜೊತೆಗೆ ಸಾಲ ಸೌಲಭ್ಯ ಸಿಗುತ್ತದೆ. ರೈತರು ಸಾಲ ಪಡೆದು ಅಭಿವೃದ್ದಿಯಾದರೆ ಸಂಘಕ್ಕೆ ಸಾಲ ಮರುಪಾವತಿ ಮಾಡಿದರೆ ಸಂಘವು ಅಭಿವೃದ್ದಿಯಾಗುತ್ತದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಸಿ.ರಾಮಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬಿದಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಬಿದಲೂರು ಸಂಘವು ರಾಜ್ಯದಲ್ಲಿ ಎರಡನೇಯ ಉತ್ತಮ ಸಂಘ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನವರು ಪ್ರಶಸ್ತಿ ನೀಡಿದ್ದು ನಮ್ಮ ಸಂಘವು ಮತ್ತಷ್ಟು ಅಭಿವೃದ್ಧಿ ಸಾಧಿಸಲಿ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಸಹಕಾರ ನೀಡಿದರೆ ನಮ್ಮ ಸಂಘವು ರಾಜ್ಯದಲ್ಲಿ ಮೊದಲನೆಯ ಉತ್ತಮ ಸಂಘ ಎಂದು ಪ್ರಶಸ್ತಿ ಪಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವರ್ಷದಲ್ಲಿ ನಮ್ಮ ಸಂಘದ ಸದಸ್ಯರಿಗೆ ನೀಡುವ ಸಾಲದ ಬಡ್ಡಿಯನ್ನು ಕಡಿಮೆ ಮಾಡಲಾಗಿದ್ದು ಸಾರ್ವಜನಿಕ ಸೇವೆಗಾಗಿ ಅಂಬ್ಯುಲೇನ್ಸ್ ಸೇವೆ ಹಾಗೂ ನೂತನ ಕಟ್ಟಡದಲ್ಲಿ 4 ಹಾಸಿಗೆಗಳ ಆಸ್ಪತ್ರೆಗೆ ಚಾಲನೆ ನೀಡಲಾಗುವುದು. ರೈತರಿಗೆ ಕೆ.ಸಿ.ಸಿ. ಸಾಲವನ್ನು 2 ಲಕ್ಷ ದಿಂದ 5 ಲಕ್ಷ ರೂಪಾಯಿವರೆಗೂ ಸಾಲ ನೀಡಲಾಗುವುದು ನಮ್ಮ ಸಂಘದ ಸದಸ್ಯರಿಗೆ ವಿಶೇಷವಾಗಿ ಈ ವರ್ಷದಿಂದ 500 ರೂಪಾಯಿ ವಾರ್ಷಿಕ ವಿಮೆ ಸೌಲಭ್ಯವನ್ನು ನೀಡಲಾಗುತ್ತಿದ್ದು ಈ ವಿಮೆ ಪಡೆದ ಸದಸ್ಯರು ಯಾವುದೇ ರೀತಿಯ ಸಾವು ಸಂಭವಿಸಿದಲ್ಲಿ ಅವರ ಮನೆಯ ಬಾಗಿಲಿಗೆ 1 ಲಕ್ಷ ರೂಪಾಯಿ ನೀಡಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವೆಂಕಟೇಶ್ ಸಹಕಾರ ಸಂಘವು 2022-23 ನೇ ವರ್ಷದಲ್ಲಿ 33 ಲಕ್ಷ ರೂಪಾಯಿ ನಿವ್ವಳ ಲಾಭಗಳಿಸಿದೆ ಬಿದಲೂರು ವಿಎಸ್ಎಸ್ಎನ್ ಯಾವುದೇ ನ್ಯೂನ್ಯತೆಗಳಿಲ್ಲದೆ ಉತ್ತಮ ಕಾರ್ಯನಿರ್ವಹಿಸಲಾಗುತ್ತಿದ್ದು ಪ್ರಸ್ತುತ ಸಾಲಿನಲ್ಲಿ 3273639 ಲಕ್ಷ ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಪಡೆದಿದೆ, ಸುಮಾರು ಹತ್ತು ಕೋಟಿ ಬಂಗಾರದ ಮೇಲೆ ಸಾಲ ನೀಡಲಾಗಿದೆ, ಸ್ವಸಹಾಯ ಗುಂಪುಗಳಿಗೆ 3 ಕೋಟಿ ರೂ ಸಾಲ ನೀಡಲಾಗಿದೆ ವಾಣಿಜ್ಯ ಮಳಿಗೆ ನಿರ್ಮಿಸಲು ಜಾಗವಿದ್ದು ನಬಾರ್ಢ್ನಿಂದ 1 ರೂ ಬಡ್ಡಿ ದರದಲ್ಲಿ ಸಾಲ ನೀಡಲು ಅನುಮೋದನೆ ದೊರೆತಿರುವುದು ಸಹ ಸಂಘದ ಪ್ರಗತಿಯ ಪ್ರತೀಕವಾಗಿದೆ ಎಂದರು.
ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತ್ತು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಎನ್.ಸೊಣ್ಣಪ್ಪ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಸಿ.ಇ.ಓ ವೆಂಕಟೇಶ್, ವಿ.ಎಸ್.ಎಸ್.ಎನ್. ಅಧ್ಯಕ್ಷ ರಾಮಸ್ವಾಮಿ, ಉಪಾಧ್ಯಕ್ಷ ಮುನಿಕೃಷ್ಣಪ್ಪ, ನಿರ್ದೇಶಕರುಗಳಾದ,ಕೆ. ಮಹೇಶ್ ಎ.ಅಶ್ವತ್ಥನಾರಾಯಣ ಯಂಬ್ರಹಳ್ಳಿ ರವಿ.ಎನ್, ರಾಮಮೂರ್ತಿ, ತಿಮ್ಮಯ್ಯ ಆರ್, ಲಕ್ಷ್ಮೀ ನಾರಾಯಣ ಎಂ, ಶಿವಕುಮಾರ್ ಎಂ. ಭಾರತಿ, ಮುನಿಕೃಷ್ಣಮ್ಮ , ಸಿ.ಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.