ಸುದ್ದಿಮೂಲ ವಾರ್ತೆ ಬೀದರ, ಜ.01:
ಅಕ್ಟೋೋಬರ್ 29, 2023 ರಂದು ಪ್ರಾಾರಂಭಗೊಂಡಿದ್ದ, ಬೀದರ, ಹುಮನಾಬಾದ, ಕಲಬುರ್ಗಿ ಮಾರ್ಗವಾಗಿ ಬೆಂಗಳೂರು (ಸರ್.ಎಮ್.ವಿಶ್ವೇಶ್ವರಯ್ಯ ಟರ್ಮಿನಲ್) ವಿಶೇಷ ರೈಲಿನ ಸೇವೆಯೂ ಜನರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಇದೇ ಮಾರ್ಗವಾಗಿ ಚಲಿಸಲು ಮುಂದಿನ 2 ತಿಂಗಳುಗಳ ಕಾಲ ವಿಸ್ತರಿಸಿ ರೈಲ್ವೆೆ ಇಲಾಖೆ ಆದೇಶ ಹೊರಡಿಸಿದೆ, ಈ ವಿಶೇಷ ರೈಲಿನ ಸದೂಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
2017ರಲ್ಲಿ ಬೀದರ- ಕಲಬುರಗಿ ರೈಲ್ವೆೆ ಲೈನ್ ಪ್ರಾಾರಂಭಗೊಂಡ ಮೇಲೆ ಈ ಮಾರ್ಗವಾಗಿ ಬೆಂಗಳೂರಿಗೆ ರೈಲುಗಳು ಚಲಿಸಬೇಕೆನ್ನುವುದು ಜನರ ಆಸೆಯಾಗಿತ್ತು, ಅದರಂತೆ ನಿರಂತರ ಪ್ರಯತ್ನದಿಂದ 2023ರಲ್ಲಿ ಹುಮನಾಬಾದ, ಕಲಬುರಗಿ ಮಾರ್ಗವಾಗಿ ಹೊಸ ರೈಲು ಸೇವೆ ಆರಂಭಿಸಿದ್ದೆ, ನಂತರ ಬದಲಾದ ಸನ್ನಿಿವೇಶದಲ್ಲಿ ಕೆಲವು ತಿಂಗಳು ಈ ವಿಶೇಷ ರೈಲಿನ ಸೇವೆ ಬಂದ ಆಗಿತ್ತು, ಇವಾಗ ಪ್ರಾಾರಂಭವಾಗಿದ್ದು, ಜನೆವರಿ ಮತ್ತು ೆಬ್ರುವರಿ ತಿಂಗಳಲ್ಲಿ ಒಟ್ಟು 34 ಬಾರಿ ಈ ರೈಲು ಚಲಿಸಲಿದೆ ಎಂದು ಪತ್ರಿಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್- ಬೆಂಗಳೂರು ಮಾರ್ಗ : ವಿಶೇಷ ರೈಲಿನ ಸೇವೆ ಇನ್ನೆರಡು ತಿಂಗಳು ವಿಸ್ತರಣೆ

