ಸುದ್ದಿಮೂಲ ವಾರ್ತೆ ಬೀದರ್, ಡಿ.30:
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಬೀದರ ಜಿಲ್ಲಾ ಪೊಲೀಸ್ ಅಕ್ಕ ಪಡೆ ಈಗಾಗಲೇ ರಾಜ್ಯಕ್ಕೆೆ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆೆ ಹೇಳಿದರು.
ಮಂಗಳವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಅಕ್ಕ ಪಡೆಗೆ ನಿಯೋಜಿಸಲಾದ ವಾಹನಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಅಕ್ಕ ಪಡೆಯ ರಾಜ್ಯ ಸಲಹೆಗಾರರಾದ ಶೈನಿ ಪ್ರದೀಪ್ ಗುಂಟಿ ಮಾತನಾಡಿ, ಹೆಣ್ಣುಮಕ್ಕಳಿಗೆ ಸಾರ್ವಜನಿಕ ಸ್ಥಳದಲ್ಲಿ ಯಾರಾದ್ರೂ ತೊಂದರೆ ಕೊಟ್ಟರೆ ಅವರನ್ನು ರಕ್ಷಿಸುವ ಕೆಲಸ ಮಾಡಲಾಗಿದೆ, ಮುಂದೆಯೂ ಮಾಡಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿದರು, ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿಿ ಚಂದ್ರಕಾಂತ್ ಪೂಜಾರಿ, ಡಿವೈಎಸ್ಪಿಿ ಎನ್. ಡಿ ಸನ್ನಿಿಧಿ, ಸಿಪಿಐಗಳಾದ ವಿಜಯಕುಮಾರ್ ಬಾವಗೆ, ಾಲಾಕ್ಷಯ್ಯ ಹಿರೇಮಠ್, ಕೆ. ಎಂ ಬಿರಾದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ, ಮಕ್ಕಳ ಅಭಿವೃದ್ಧಿಿ ಅಧಿಕಾರಿ ಶಾರದಾ ಕಲ್ಮಕರ್, ಕರ್ನಾಟಕ ಅಲ್ಪಸಂಖ್ಯಾಾತರ ಕಮಿಟಿಯ ಸದಸ್ಯ ನಂದೀಪ್ ಕೌರ್, ಗುರುನಾನಕ್ ಶಿಕ್ಷಣ ಸಂಸ್ಥೆೆ ಮುಖ್ಯಸ್ಥೆೆ ರೇಷ್ಮಾಾ ಕೌರ್, ವೆಟರ್ನರಿ ಕಾಲೇಜಿನ ಡಿನ್ ಡಾ. ತಾಂದಳೆ, ಶಾಹಿನ್ ಶಿಕ್ಷಣ ಸಂಸ್ಥೆೆಯ ಮುಖ್ಯಸ್ಥ ಅಬ್ದುಲ್ ಖದಿರ್, ವಿಸ್ಡಮ್ ಕಾಲೇಜಿನ ಮುಖ್ಯಸ್ಥ ಸಲಾಹುದ್ದಿನ್, ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಧನಲಕ್ಷ್ಮಿಿ ಪಾಟೀಲ್, ಶಾಹಿನ್ ಪದವಿ ಕಾಲೇಜಿನ ಪ್ರಾಾಂಶುಪಾಲ ಅ್ರಾ ಬೇಗಮ್, ಮನ್ನಳ್ಳಿಿ ಪೊಲೀಸ್ ಠಾಣೆಯ ಪಿಎಸ್ಐ ನಂದಿನಿ ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.

