ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.08:
ಈ ಜಗತ್ತಿಿಗೆ ಸಂಸ್ಕೃತಿಯನ್ನು ಕೊಟ್ಟ ದೇಶ ಅದು ಭಾರತ, ಸಂಸ್ಕಾಾರವನ್ನು ನೀಡಿದ ಧರ್ಮ ಹಿಂದೂ ಧರ್ಮ. ಹೀಗಾಗಿ ಇಡೀ ಜಗತ್ತಿಿಗೆ ಗುರುವಾರ ದೇಶ ಮುಂದಿನ ಜಗತ್ತಿಿಗೆ ಆಶಾ ಕಿರಣ ನಮ್ಮ ಭಾರತ ದೇಶವಾಗಬೇಕು ಎಂದು ದೇವಾಲಯ ಸಂವರ್ಧನ ಸಮಿತಿ ಸಂಯೋಜಕ ಹಿಂದೂ ಮುಖಂಡ ಮನೋಹರ್ ಮಠದ ಹೇಳಿದರು.
ನಗರದ ಹಳೇಬಸ್ ನಿಲ್ದಾಾಣದ ಆವರಣದಲ್ಲಿ ಹಮ್ಮಿಿಕೊಂಡಿದ್ದ ಹಿಂದೂ ಸಮ್ಮೇಳನ ಕಾರ್ಯಕ್ರಮದ ಆಹ್ವಾಾನಿತರಾಗಿ ಹಿಂದೂ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು. ಧರ್ಮದ ಉಳಿವು ಜಗತ್ತಿಿನ ಕ್ಷೇಮದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಹಿಂದುತ್ವ ಈ ನೆಲದ ಮೂಲ ಮಂತ್ರ. ನೋವನ್ನು ಮೆಟ್ಟಿಿ ತ್ಯಾಾಗವನ್ನು ಮೆರೆದ ದೇಶ ಭಾರತ. ಆದ್ದರಿಂದ ಭಾರತೀಯರು ಧರ್ಮವನ್ನು ಗಟ್ಟಿಿಯಾಗಿ ನೆಲೆಗೊಳಿಸಬೇಕು. ಈ ನೆಲದ ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ತಲುಪಿಸಬೇಕು ಆದ್ದರಿಂದ ಹಿಂದೂಗಳೆಲ್ಲರೂ ಸ್ವಯಂಜಾಗೃತಿಯಾಗಬೇಕು ಎಂದರು.
ನಮಗೆ ಅರಿವೇ ಇಲ್ಲದೇ ಸಮಾಜವನ್ನು ಒಡೆಯುವ, ಸಂಸ್ಕೃತಿಯನ್ನು ಹಾಳುಮಾಡುವ ಪ್ರಯತ್ನ ನಡೆದಿದೆ. ಇಂತಹ ಸಮಾಜ ಘಾತುಕ ಶಕ್ತಿಿಗಳನ್ನು ಎದುರಿಸಲು ಹಿಂದೂ ಸಮಾಜ ಸಂಘಟಿತವಾಗಬೇಕಿದೆ. ಜಾತಿ.ಮತ ಪಂಥ ಪಕ್ಷ ರಹಿತವಾಗಿ ಹಿಂದೂಗಳು ಎಲ್ಲರೂ ಒಂದಾಗುವ ಕಾಲ ಬಂದಿದೆ ಎಂದರು.
ತೆಗ್ಗಿಿನ ಮಠದ ಶ್ರೀ ವರಸದ್ದೋಜಾತ ಶ್ರೀಗಳು ಮಾತನಾಡಿ ನಮ್ಮದೇಶದ ಸಂಸ್ಕೃತಿ ಬಗ್ಗೆೆ ಜಾಗೃತರಾಗದಿದ್ದರೆ ಧರ್ಮ ಉಳಿಸಲು ಕಷ್ಟ. ನಾವು ಜಾಗೃತರಾಗಬೇಕು. ನಮ್ಮ ಸಂಸ್ಕೃತಿ, ಧರ್ಮದ ಬಗ್ಗೆೆ ಚಿಂತನೆ ಮಾಡಬೇಕು ಎಂದರು.
ಕಾರ್ಯಕ್ರಮಕ್ಕೂ ಮುಂಚೆ ಕೊಟ್ಟೂರು ಸರ್ಕಲ್ ನ ಬಸವೇಶ್ವರ ವೃತ್ತದಿಂದ ಹಿಂದೂ ಸಮಾಜದ ಭವ್ಯ ಮೆರವಣಿಗೆ ನಡೆಯಿತು.
ಹಿಂದೂ ಸಮ್ಮೇಳನದ ಅಧ್ಯಕ್ಷ ಪಿ. ರಾಮನಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ಕೆ.ಸಿ.ಗಂಗಾಧರ, ಕಾರ್ಯದರ್ಶಿ ಎಚ್.ಎ. ಸುರೇಂದ್ರ ಬಾಬು, ಮಾಜಿ ಸಚಿವ ಜಿ.ಕರುಣಾಕರರೆಡ್ಡಿಿ, ಹೊಸಪೇಟೆ ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕ ವೈಡಿ ಅಣ್ಣಪ್ಪ,ಮುಖಂಡರಾದ ಎಂ.ಪಿ.ನಾಯ್ಕ, ಜಿ.ನಂಜನಗೌಡ್ರು, ಹಾಗೂ ನೂರಾರು ಸಮಾಜ ಬಾಂಧವರು ಭಾಗವಹಿಸಿದ್ದರು.
ಬೃಹತ್ ಹಿಂದೂ ಜಾಗೃತ ಸಮ್ಮೇಳನ ಕಾರ್ಯಕ್ರಮ ಭಾರತ ಜಗತ್ತಿನ ಆಶಾ ಕಿರಣವಾಗಬೇಕು: ಮನೋಹರ್ ಮಠದ

