ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಅ.27;ಸಾಮಾನ್ಯ ಜನರಿಗೊಂದು ಕಾನೂನು ಶ್ರೀಮಂತರಿಗೊಂದು ಒಂದು ಕಾನೂನು ಪಾಲಿಸುವ ಮೂಲಕ ಅರಣ್ಯಧಿಕಾರಿಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಸಂತೋಷ ಅಭಿಮಾನಿ ಎ.ರಘು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ಸಂತೋಷಗೆ ಜಮೀನು ದೊರೆತ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಸ್ಎಫ್ಎಲ್ ವರದಿ ಬರುವ ಮುಂಚೆ ಸಂತೋಷ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಖಂಡನೀಯ. ಅಧಿಕಾರಿಗಳು ರಾಜಕಾರಣಿ ಮಕ್ಕಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ನೋಟೀಸ್ ಕಾಲಾವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಹಳ್ಳಿಕಾರ್ ಸಂತೋಷ ರೈತರ ಕಸುಬು ಉಳಿಸುವ ದೃಷ್ಟಿಯಿಂದ ಆನೇಕ ಸಮಾಜಪರ ಕಾರ್ಯಕ್ರಮಗಳನ್ನು ರೂಪಿಸಿ ಮಾದರಿ ರೈತ ಎನಿಸಿಕೊಂಡಿದ್ದಾರೆ. ಅವರು ಮಾಡುತ್ತಿರುವ ಉತ್ತಮ ಕೆಲಸಗಳು ಸಹಿಸದ ಕೆಲವು ಪಟ್ಟಪದ್ರ ಹಿತಾಸಕ್ತಿ ಗುಂಪು ಹಿಂದುಳಿದ ವರ್ಗದ ಪ್ರತಿಭೆಯನ್ನು ತುಳಿಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.
ರಾಜಕೀಯ ಹಿನ್ನೆಲೆ, ಚಂದನವನದ ನಟರು, ರಾಜ್ಯದ ಆನೇಕ ಮಠಗಳ
ಸ್ವಾಮೀಜಿಗಳು ಹುಲಿ ಉಗುರು ಪೆಂಡೆಂಟ್ ಧರಿಸಿರುವುದು ಕಂಡು ಬಂದಿದ್ದರೂ ಇದುವರೆಗೆ ಬಂಧಿಸಿಲ್ಲ. ರೈತ ಕುಟುಂಬದ ಹಿನ್ನೆಲೆಯಲ್ಲಿ ಬಂದಿರುವ ಸಂತೋಷ ಅವರನ್ನು ಬಂಧಿಸಿದ್ದಾರೆ ಎಂದು ಅರಣ್ಯ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ್ ಅವರಿಗೆ ಜಮೀನು ದೊರೆತಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ಇಡಿ ಕರ್ನಾಟಕ ಜನತೆ ಅವರ ಪರವಾಗಿ ನಿಂತಿದೆ. ಎಲ್ಲಾ ವರ್ಗದ ಜನರು ಅವರ ಬಿಡುಗಡೆಗೆ ಪಾರ್ಥನೆ ಸಲ್ಲಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸಂತೋಷ ಬಿಗ್ ಬಾಸ್ ಹೋದ ಮೇಲೆಯೇ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.
ಇಷ್ಟು ವರ್ಷದಿಂದ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲವೇ. ಅರಿವು ಮೂಡಿಸುವ ಕಾರ್ಯಕ್ರಮ ಮಾಡದೆ ಏಕಾಏಕಿ ಕ್ರಮಕ್ಕೆ ಮುಂದಾಗಿದ್ದಾರೆ. ಗೋ ರಕ್ಷಕ ಹಾಗೂ ರೈತ ಸಂತೋಷನನ್ನು ಒಬ್ಬ ಡಕಾಯಿತ ರೀತಿಯಲ್ಲಿ ಕ್ರೂರವಾಗಿ ನಡೆಸಿಕೊಂಡಿದದ್ದಾರೆ. ಅಧಿಕಾರಿಗಳು ಒಬ್ಬ ರೈತನನ್ನು ಠಾಣೆಯಲ್ಲಿ ನಡೆಸಿಕೊಳ್ಳುವ ರೀತಿ ಇದೆನಾ ಎಂದು ಆರೋಪಿಸಿದರು.
ಜಮೀನು ದೊರೆತ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಂಬಂಧಿಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಸಂತೋಷ ಅಭಿಮಾನಿಗಳಾದ ಮುರುಳಿ, ರಾಜೇಶ್, ಪ್ರಭು, ಮುರುಳಿ, ಇದ್ದರು.