ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಏ.14: ಎಲ್ಲ ಜನತೆಗೆ ನ್ಯಾಯವನ್ನು ನೀಡುವ ಉದ್ದೇಶದಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಲು ಜಗತ್ತಿಗೆ ಒಂದು ನಿದರ್ಶನವಾದರು ಎಂದರೆ ತಪ್ಪಾಗಲಾರದು ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವೆಲ್ಪೇರ್ ಫೌಂಡೇಶನ್ ವಿ.ಮಂಜುನಾಥ್ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಫೌಂಡೇಶನ್ ನ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ಸಹ
ಸಂವಿಧಾನ ತಿಳಿದುಕೊಳ್ಳಬೇಕು. ಆಗ ಮನುಷ್ಯನ ಬದುಕಿಗೆ ಒಂದು ಅರ್ಥ ಸಿಗುತ್ತದೆ ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವವನ್ನು ತಂದುಕೊಟ್ಟಂತೆ ಎಂದು ಹೇಳಿದರು.
ಪ್ರತಿಯೊಬ್ಬರು ಸಹ ಸಂವಿಧಾನವನ್ನು ಗೌರವಿಸಬೇಕು. ಕಾರಣ ಸಂವಿಧಾನವು ರಾಜ್ಯದೆಲ್ಲಡೆ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಆದ್ದರಿಂದ ಅದಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಯಾರೊಬ್ಬರೂ ಮಾಡಬಾರದು ಎಂದರು.
ಈ ಸಮಯದಲ್ಲಿ ಮುಖಂಡರಾದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಆರ್.ಕೆ. ನಂಜೇಗೌಡ,
ಎಚ್.ವಿ ಶ್ರೀನಿವಾಸ್, ಆರ್.ಎಂ.ಸಿ.ಟಿ.ಮಂಜುನಾಥ್, ಕೇಶವ, ಹರೀಶ್, ವಿಶ್ವನಾಥ್, ಶ್ರೀನಿವಾಸ್, ಸೀನಪ್ಪ, ಕುರುಬರಹಳ್ಳಿ ದೇವರಾಜ್, ಚಪ್ಪರದಕ್ಕಲ್ಲು ರಾಜಣ್ಣ, ತೂಬಗೆರೆ ರಾಜಣ್ಣ, ದೇವನಹಳ್ಳಿ ಮಂಜುನಾಥ್ ಸೇರಿದಂತೆ ವೆಲ್ಫೇರ್ ಸಂಸ್ಥೆಯ ಸದಸ್ಯರು,ಕ್ಷೇತ್ರದ ರೈತ ಮುಖಂಡರು ಹಾಗೂ ನಮ್ಮ ಕಾರ್ಯಕರ್ತರು ಉಪಸ್ಥಿತರಿದ್ದರು.