ಸುದ್ದಿಮೂಲ ವಾರ್ತೆ ಜೇವರ್ಗಿ, ಜ.24:
ಸೊನ್ನ ಮಠದ ಮೂಲ ಸೌಕರ್ಯಗಳ ಅಭಿವೃದ್ಧಿಿಗಾಗಿ ಒಂದು ಕೋಟಿ ರೂ ಅನುದಾನ ನೀಡುವುದಾಗಿ ಕೆಕೆಆರ್ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಭರವಸೆ ನೀಡಿದರು.
ಸೊನ್ನ ಗ್ರಾಾಮದ ಶ್ರೀ ಶಿವಾನಂದ ಶಿವಯೋಗಿ ಗ್ರಾಾಮೀಣ ಜನಕಲ್ಯಾಾಣ ಸಂಸ್ಥೆೆ ಸಿದ್ದಲಿಂಗೇಶ್ವರ ವಿರಕ್ತ ಮಠದಲ್ಲಿ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಾಮಿಗಳವರ 34ನೇ ಪುಣ್ಯಸ್ಮರಣೆ ನೇತ್ರ ತಪಾಸಣಾ ಚಿಕಿತ್ಸೆೆ ಹಾಗೂ ಆರೋಗ್ಯ ಶಿಬಿರ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಾಮಿಗಳು ಹಾಗೂ ಡಾ.ಶಿವಾನಂದ ಮಹಾಸ್ವಾಾಮಿಗಳೊಂದಿಗೆ ಉದ್ಘಾಾಟನೆ ಮಾತನಾಡಿದರು. ನಮ್ಮ ತಂದೆಯವರ ಕಾಲದಿಂದಲೂ ಮಠಕ್ಕೆೆ ನಮ್ಮದೇ ಆದ ಕೊಡಗೆ ನೀಡಿದ್ದೇವೆ. ನಾನು ಕೂಡ ಮಠದ ಅಭಿವೃದ್ಧಿಿಗಾಗಿ ಶ್ರಮಿಸುತ್ತೇನೆ. ಪೂಜ್ಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಸಾನಿಧ್ಯವಹಿಸಿದ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಾಮಿಗಳು ಮಾತನಾಡಿ, ಬೆಂಗಳೂರಿನ ಕಡೆ ತುಮಕೂರಿನ ಸಿದ್ದಗಂಗಾ ಮಠ ಎಷ್ಟು ಪ್ರಸಿದ್ಧವು ಅಷ್ಟೇ ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಸೊನ್ನದ ಮಠ ಚಿನ್ನದ ಮಠ ಎಂದೆ ಹೆಸರುವಾಸಿಯಾಗಿದೆ. ಸುಮಾರು 25 ವಿದ್ಯಾಾರ್ಥಿಗಳಿಂದ ಪ್ರಾಾರಂಭವಾದ ಮಠ 500 ವಿದ್ಯಾಾರ್ಥಿಗಳಿಗೆ ವಸತಿ ಮತ್ತು ಶಿಕ್ಷಣ ನೀಡುವ ಕಾರ್ಯದಲ್ಲಿ ಮುಂದುವರಿದಿದೆ ಎಂದರೆ ಅದು ಸಾಮಾನ್ಯ ಮಾತಲ್ಲ ಎಂದು ಹೇಳಿದರು.
ಸೊನ್ನದ ಮಠದ ಅಭಿವೃದ್ಧಿಿಗಾಗಿ ಮಾಜಿ ಮುಖ್ಯಮಂತ್ರಿಿಗಳಾದ ಧರ್ಮಸಿಂಗ್ ಅವರು ಕೂಡ ಅತ್ಯಂತ ಕಾಳಜಿಯಿಂದ ಮಠದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರ ಹಾದಿಯಲ್ಲಿಯೇ ಡಾ.ಅಜಯ್ ಸಿಂಗ್ ಅವರು ಕೂಡ ಮಠದ ಅಭಿವೃದ್ಧಿಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಜನಪರಕಾರ್ಯಗಳಿಂದಳ ಮಠ ಮಂದಿರಗಳಿಗೆ ಸೇವೆಯನ್ನು ನೀಡುತ್ತಿಿರುವ ಡಾ.ಅಜಯ್ ಸಿಂಗ್ ಅವರು ಮುಂದಿನ ದಿನಗಳಲ್ಲಿ ಮಂತ್ರಿಿಗಳಾಗಿ ಅಧಿಕಾರ ಸ್ವೀಕರಿಸಲಿ ಎಂದು ಆಶಿಸಿದರು.
ಪ್ರೊೊ.ಎಚ್. ಟಿ.ಪೋತೆ ಮಾತನಾಡಿ, ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಸೊನ್ನ ಮಠ ಅಕ್ಷರ ಅನ್ನ ಸಾಮಾಜಿಕ ಸೇವೆಯೇ ಸುಮಾರು 40 ವರ್ಷಗಳಿಂದ ಮಾಡುತ್ತಲೇ ಬಂದಿದ್ದೆ. ಮಠದ ಕಾರ್ಯ ಸಾಧನೆಯ ಕುರಿತು ಈ ಭಾಗದ ಶಿಕ್ಷಣವಂತರು ಮತ್ತು ಲೇಖಕರು ಲೇಖನಗಳು, ಕೃತಿಗಳು ಬರೆದರೆ ಮುಂದಿನ ದಿನಗಳಲ್ಲಿ ಗುಲ್ಬರ್ಗ ವಿಶ್ವವಿದ್ಯಾಾಲಯದ ಕಲಾ ವಿಭಾಗದಲ್ಲಿ ಸೊನ್ನ ಮಠದ ಪೂಜ್ಯರ ಜೀವನ ಚರಿತ್ರೆೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಾಮಿಗಳ ಜೀವನ ಚರಿತ್ರೆೆ ಆಧಾರಿತ ಕೃತಿ ಬಿಡುಗಡೆ ಮಾಡಲಾಯಿತು. ಅರುಣಕುರ್ಮಾ ಎಂ ಪಾಟೀಲ್ ಹಾಗೂ ಪ್ರವೀಣ್ ಪಾಟೀಲ್ ಹರವಾಳ ಮತ್ತು ಬಾಬು ಹೊನ್ನಾಾ ನಾಯಕ ಅವರಿಗೆ ಬಸವ ಶ್ರೀರಕ್ಷ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಜೇರಟಗಿ ವಿರಕ್ತಮಠದ ಶ್ರೀಗಳು, ಪ್ರಭು ಗುರುಬಸವ ಮಹಾಸ್ವಾಾಮಿಗಳು ಅಂಕಲಗ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಬಸವರಾಜ ಪಾಟೀಲ್ ನರಿಬೋಳ, ವಿಜಯಕುಮಾರ್ ಹಿರೇಮಠ್, ರೇವಣಸಿದ್ದಪ್ಪ ಸಂಕಾಲಿ, ಡಾ.ವಿಶ್ವನಾಥ್ ರೆಡ್ಡಿಿ, ಡಾ.ವಿಜಯಲಕ್ಹ್ಮೀ ರೆಡ್ಡಿಿ, ಮನೋಜ್ ಕುಮಾರ್, ಡಾ.ಕೆಜಿ ಬಿರಾದಾರ್, ಡಾ.ಉಮೇಶ್ ಶರ್ಮ, ಮಲ್ಲಿಕಾರ್ಜುನ್ ಬಿರಾದಾರ, ಶಿವಾನಂದ್ ಸಾಹು, ಶಿವಲಿಂಗ ಹಳ್ಳಿಿ ಸೇರಿದಂತೆ ಮಠ ಭಕ್ತರು ಇದ್ದರು.
ಶ್ರೀ ಗುರುಸಿದ್ಧ ಮಹಾಸ್ವಾಮಿಗಳ ಜೀವನ ಚರಿತ್ರೆ ಕೃತಿ ಲೋಕಾರ್ಪಣೆ ಸೊನ್ನ ಮಠದ ಮೂಲಸೌಕರ್ಯ ಅಭಿವೃದ್ಧಿಗೆ 1 ಕೋಟಿ ಅನುದಾನ : ಡಾ.ಅಜಯ ಸಿಂಗ್

