ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಕವಿತೆಗೆ ಆತ್ಮ ಇರಬೇಕು, ಕವನಗಳು ಬದುಕಿನ ಸವಾಲುಗಳೆಂಬುದು ಅರಿಯಬೇಕು ಎಂದು ಸಾಹಿತಿ ರುದ್ರಪ್ಪ ಪಗಡದಿನ್ನಿಿ ಹೇಳಿದರು.
ಅವರು ಭಾನುವಾರ ಸಂಜೆ ನಗರದ ಕನ್ನಡ ಭವನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಿನಿಂದ ಡಾ. ಮಹೇಂದ್ರ ಕುರ್ಡಿ ಅವರ ಬಿಸಿಲ ಬನದ ಕುಸುಮ ಎಂಬ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.ಜನ ಮನದಲ್ಲಿ ಇರಬೇಕು ಎಂದರು.
ಹಿರಿಯ ಸಾಹಿತಿ ವೀರಹನುಮಾನ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಸಾಹಿತಿಗಳ ಕವನಗಳು ಜನರ ಮನದಲ್ಲಿ ಉಳಿಬೇಕೆಂದರು.
ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ಒಂದು ಒಳ್ಳೆೆಯ ಬರವಣಿಗೆಯನ್ನು ಹೊಂದಿದ ಒಳ್ಳೆೆಯ ಲೇಖಕ ಎಂದು ಹೇಳಿದರು.
ಕೃತಿಯ ಕರ್ತೃ ಡಾ. ಮಹೇಂದ್ರ ಕುರ್ಡಿ ಮಾತನಾಡಿ, ಕನ್ನಡ ನಾಡಿನಲ್ಲಿ ನಮ್ಮ ಜಿಲ್ಲೆಯ ಭಾಷೆ ಎಲ್ಲಾ ಕಡೆ ಹಬ್ಬಲಿ ಎನ್ನುವ ಸದುದ್ದೇಶದಿಂದ ನನ್ನ ನೆಲದ ಭಾಷೆಯನ್ನು ಬಳಸಿದ್ದೇನೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ಡಾ. ಬಿ.ವಿಜಯ ರಾಜೇಂದ್ರ ಮಾತನಾಡಿ, ಕನ್ನಡವನ್ನು ಮಾತೃಭಾಷೆಯಾಗಿ ಕಲಿಯದಿದ್ದರೆ ಕೇಂದ್ರ ಸಾಹಿತ್ಯ ಪರಿಷತ್ತು ಜಾರಿಗೆ ತಂದಿರುವ ಪ್ರವೇಶ, ಕಾವ್ಯ, ಜಾಣ, ರತ್ನ ಪರೀಕ್ಷೆಗಳನ್ನು ಬರೆದು ಸರಕಾರಿ ಉದ್ಯೋೋಗ ಸೇರಬಹುದು ಎಂದು ಹೇಳಿದರು.
ಸಾಹಿತ್ಯ ಪರಿಷತ್ತಿಿನ ನಡೆ, ಯುವಕರ ಕಡೆ ಎನ್ನುವ ಕಾರ್ಯಕ್ರಮ ರಾಯಚೂರಿನ ಎಲ್ಲ ಕಾಲೇಜುಗಳಲ್ಲಿ ನಡೆಯಲಿದೆ ಎಂದು ಹೇಳಿದರು.
ವಿನಾಯಕ ವಿದ್ಯಾಾ ಸಂಸ್ಥೆೆ ಅಧ್ಯಕ್ಷ ನರಸಪ್ಪ, ಶಂಶುದ್ದೀನ್ ಮಾತನಾಡಿದರು. ಗೌರವ ಕೋಶಾಧ್ಯಕ್ಷ ನಾಗಪ್ಪ ಹೊರಪೇಟೆ, ವೈಶಾಲಿ ಪಾಟೀಲ್, ಟ್ರಾಾಫಿಕ್ ಕಂಟ್ರೋೋಲರ್ ದೇವೇಂದ್ರಮ್ಮ, ಡಾ. ರೇಖಾ ಪಾಟೀಲ , ರಾವುತರಾವ್ ಬರೂರ ಸಾಹಿತ್ಯ ಆಸಕ್ತರು, ಹಿರಿಯ ಕಿರಿಯ ಸಾಹಿತಿಗಳು ಕವಿಗಳು ಭಾಗವಹಿಸಿದ್ದರು.
ಬಿಸಿಲ ಬನದ ಕುಸುಮ ಕವನ ಸಂಕಲನ ಬಿಡುಗಡೆ ಕವಿತೆಗೆ ಆತ್ಮ ಇರಬೇಕು – ರುದ್ರಪ್ಪ ಪಗಡದಿನ್ನಿ

