ಸುದ್ದಿಮೂಲವಾರ್ತೆ
ಕೊಪ್ಪಳ,ಅ.4:ಖಾಯಾಂಯಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಅ10 ರಂದು ಬಿಸಿಯೂಟ ನೌಕರರಿಂದ ಬೆಂಗಳೂರ ಚಲೋ ಕಾರ್ಯಕ್ರಮ ನಡೆಯಲಿದೆ.
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ರಾಜ್ಯ ಮಂಡಳಿಯು, ಬಿಸಿಯೂಟ ತಯಾರಕರನ್ನು ಖಾಯಂ ಗೊಳಿಸುವಂತೆ ಒತ್ತಾಯಿಸಿ, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನೀರ್ಧಾಷ್ಟವಧಿ ಧರಣಿ ಹೋರಾಟ ನಡೆಸಲು ನಿರ್ಧರಿಸಿದ್ದು, ಈ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೊಪ್ಪಳದ ಬಿಸಿಯೂಟ ತಯಾರಕರು ಅ 9 ರಂದು ಬೆಂಗಳೂರಿಗೆ ಹೊರಟು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದಿನ ಸರಕಾರವು ಹೊಸದಾಗಿ ಜಾರಿ ಮಾಡಿರುವ ಶಾಲಾ ಮುಖ್ಯೋಪಾಧ್ಯಾಯರ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರ ಹೆಸರಲ್ಲಿ ಜಂಟಿ ಖಾತೆಯನ್ನು ತೆರೆಯಬೇಕೆಂಬ ಅವೈಜ್ಞಾನಿಕ ಆದೇಶವನ್ನು ರದ್ದುಗೊಳಿಸಿ, ಈ ಮುಂಚೆ ಜಾರಿಯಿದ್ದ ಶಾಲಾ ಮುಖ್ಯೋಪಾಧ್ಯಾಯರ ಮತ್ತು ಮುಖ್ಯ ಅಡುಗೆಯವರ ಹೆಸರಿನಲ್ಲಿ ತೆರೆಯಲಾಗಿರುವ ಜಂಟಿ ಬ್ಯಾಂಕ್ ಖಾತೆಯನ್ನೆ ಮುಂದುವರಿಸಬೇಕು. ಬಿಸಿಯೂಟ ನೌಕರರನ್ನು ಅರೆಕಾಲಿಕ ಖಾಯಂ ನೌಕರರೆಂದು ಪರಿಗಣಿಸಬೇಕು. ಕೆಲಸವನ್ನು ನಿರ್ವಹಿಸುವ ವೇಳೆ ಅನಾಹುತಕ್ಕೆ ಈಡಾಗಿ ಮೃತಪಟ್ಟಿರುವ ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಶ್ರೀಮತಿ ನಿರ್ಮಲಾ ದೊಡ್ಡಮನಿ, ಕೊಪ್ಪಳ ತಾಲೂಕಿನ ಬೊಚನಳ್ಳಿ ಗ್ರಾಮದ ದೇವಮ್ಮ, ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಮತಿ ಅನ್ನಪೂರ್ಣಮ್ಮ ಈ ನೊಂದ ಕುಟುಂಬದವರಿಗೆ ಸೂಕ್ತ ಪರಿಹಾರವನ್ನು ಮತ್ತು ಆ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿಯನ್ನು ಕೊಡಬೇಕು ಹಾಗೂ ಕೆಲಸವನ್ನು ನಿರ್ವಹಿಸುವ ವೇಳೆ ತೊಂದರೆಗೀಡಾಗಿ ಸ್ವಂತ ಹಣದಲ್ಲಿ ಚಿಕಿತ್ಸೆ ಪಡೆದ ಬಿಸಿಯೂಟ ಮಹಿಳೆಯರಿಗೆ ಚಿಕಿತ್ಸೆಯ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು.
ಚುನಾವಣಾ ಸಂದರ್ಭದಲ್ಲಿ ಗೌರವಧನ ಹೆಚ್ಚಿಸುವ ಉದ್ದೇಶದಿಂದ ಪ್ರಿಯಾಂಕ ಗಾಂಧಿಯವರು ಘೋಷಿಸಿದ್ದ 6 ನೇ ಗ್ಯಾರಂಟಿಯನ್ನು ಜಾರಿ ಮಾಡಬೇಕು. ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ.
ಈ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಬಿಸಿಯೂಟ ತಯಾರಕರು ಭಗವಹಿಸಬೇಕೆಂದಿ ಮುಖಂಡರಾದ ಬಸವರಾಜ ಶೀಲವಂತರ , ಗಾಳೆಪ್ಪ ಮುಂಗೋಲಿ, ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ವಿಮಲಾ ಮತ್ತೂರ, ನಿರ್ಮಲ, ಶರಣಮ್ಮ ಮನವಿ ಮಾಡಿಕೊಂಡಿದ್ದಾರೆ.