ಸುದ್ದಿಮೂಲ ವಾರ್ತೆ ನವದೆಹಲಿ, ಅ.12:
ಬಿಹಾರ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾಾತ್ಮಕ ಒಕ್ಕೂಟದ ಮೈತ್ರಿಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ನಡುವೆ ಸೀಟು ಹಂಚಿಕೆ ನಿಗದಿಯಾಗಿದೆ.
ಬಿಜೆಪಿ ಮತ್ತು ಜೆಡಿಯು (ಸಂಯುಕ್ತ ಜನತಾದಳ) 101 ಸ್ಥಾಾನಗಳಲ್ಲಿ ಸ್ಪರ್ಧಿಸುತ್ತಿಿವೆ.
ಈ ಕುರಿತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಿಜೆಪಿ ಹಾಗೂ ಜೆಡಿಯು ಸಮವಾಗಿ 101 ಸ್ಥಾಾನಗಳಲ್ಲಿ ಸ್ಪರ್ಧಿಸುತ್ತಿಿವೆ. ಚಿರಾಗ್ ಪಾಸ್ವಾಾನ್ ಅವರ ಎಲ್ಜೆಪಿಗೆ (ರಾಮವಿಲಾಸ್ ಪಾಸ್ವಾಾನ್) 26 ಸೀಟುಗಳು, ಉಪೇಂದ್ರ ಕುಶ್ವಾಾಹಾ ಅವರ ರಾಷ್ಟ್ರೀಯ ಲೋಕ್ ಮೋರ್ಚಾಗೆ (ಆರ್ಎಲ್ಗಳ) 6 ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾಾನ್ ಅವಾಮ್ ಮೋರ್ಚಾಗೆ 6 ಸೀಟುಗಳನ್ನು ಬಿಟ್ಟುಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಲೋಕ ಜನಶಕ್ತಿಿ ಪಕ್ಷ (ರಾಮ್ ವಿಲಾಸ್) 40 ರಿಂದ 50 ಸ್ಥಾಾನಗಳಲ್ಲಿ ಸ್ಪರ್ಧೆ ಮಾಡುವುದಾಗಿ ಬೇಡಿಕೆ ಇಟ್ಟಿಿತ್ತು. ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿ ಅವರ ಹಿಂದೂಸ್ತಾಾನಿ ಅವಾಮ್ ಮೋರ್ಚಾ ಪಕ್ಷ 15 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿತ್ತು.
ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧಾರ
ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವಾ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಾ ಸೇರಿದಂತೆ ಹಲವು ಪ್ರಮುಖರು ಈ ಸಭೆಯಲ್ಲಿ ಪಾಲ್ಗೊೊಂಡಿದ್ದರು. ಸಭೆಯಲ್ಲಿ ಮೈತ್ರಿಿ ಪಕ್ಷಗಳು ಹಾಕಿರುವ ಷರತ್ತುಗಳ ಬಗ್ಗೆೆ ಚರ್ಚೆ ನಡೆಸಿ ಬಳಿಕ ಎಲ್ಲರಿಗೂ ಒಪ್ಪಿಿಗೆಯಾಗುವಂತೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಮೈತ್ರಿಿ ಸಭೆಯಲ್ಲಿ ಭಾರಿ ಚರ್ಚೆ ಬಳಿಕ ಎಲ್ಲಾ ಮೈತ್ರಿಿ ಪಕ್ಷಗಳು ಈ ನಿರ್ಧಾರವನ್ನು ಸ್ವಾಾಗತಿಸಿದ್ದಾರೆ. ಸೀಟು ಹಂಚಿಕೆಯಲ್ಲಿ ಎನ್ಡಿಎ ಮೈತ್ರಿಿ ಪಕ್ಷಗಳ ಬಿಗಿ ಪಟ್ಟು ಹೆಚ್ಚಾಾಗುತ್ತಿಿದ್ದಂತೆ ಹೊಸ ಸೂತ್ರವನ್ನು ಬಿಜೆಪಿ ಮುಂದಿಟ್ಟಿಿತ್ತು. ಈ ಸೂತ್ರಕ್ಕೆೆ ಪಕ್ಷಗಳು ಸಮ್ಮತಿ ಸೂಚಿಸಿದೆ. ದೆಹಲಿಯಲ್ಲಿ ನಡೆದ ಈ ಸಭೆಯ ಯಶಸ್ವಿಿಯಾಗಿದ್ದು, ಎಲ್ಲಾ ಪಕ್ಷಗಳು ಒಗ್ಗಟ್ಟಾಾಗಿ ಚುನಾವಣೆ ಎದುರಿಸುವ ಮಂತ್ರ ಪಠಿಸಿದೆ.
ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭಾ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸುವುದಾಗಿ ಚುನಾವಣಾ ಆಯೋಗ ಹೇಳಿದೆ. ನ.6 ಮತ್ತು ನ.11ರಂದು ಮತದಾನ ನಡೆದು .ನ.14ರಂದು ಎಣಿಕೆ ನಡೆಯಲಿದೆ.
ಬಾಕ್ಸ್
ಎನ್ಡಿಎಗೆ ಆಡಳಿತ ವಿರೋಧಿ ಅಲೆ ಸಂಕಷ್ಟ
ಬಿಹಾರ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಿಯಾಗಿರುವುದು ಎನ್ಡಿಎ ಮೈತ್ರಿಿಕೂಟದ ಪಕ್ಷಗಳಿಗೆ ಚಿಂತೆ ಮೂಡಿಸಿದೆ. ಕಾಂಗ್ರೆೆಸ್ ಹಾಗೂ ಇಂಡಿಯಾ ಮೈತ್ರಿಿಕೂಟ ನಿತೀಶ್ ಕುಮಾರ್ ಮೇಲೆ ಹಲವು ಭ್ರಷ್ಟಾಾಚಾರದ ಆರೋಪ ಮಾಡಿದೆ. ಪ್ರಮುಖವಾಗಿ ಬಿಹಾರದ ವಿಶೇಷ ಮತದಾರರ ಪಟ್ಟಿಿ ಪರಿಷ್ಕರಣೆ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆೆಸ್ ಹಾಗೂ ಆರ್ಜೆಡಿ ಪಾದಯಾತ್ರೆೆ ನಡೆಸಿದ್ದವು. ಈ ವೇಳೆ ಜನರ ಮನಸ್ಸು ಇಂಡಿಯಾ ಒಕ್ಕೂಟದ ಪರವಾಗಿ ವಾಲುತ್ತಿಿದೆ ಎಂಬುದು ಅರಿವಾಗಿರುವುದು ಎನ್ಡಿಎ ಮೈತ್ರಿಿಕೂಟಕ್ಕೆೆ ಸಮಸ್ಯೆೆ ಎದುರಾಗಿದೆ.
ಪಾದಯಾತ್ರೆೆ ವೇಳೆ ಬಿಹಾರದಲ್ಲಿ ಇರುವ ನಿರುದ್ಯೋೋಗ, ಕಳಪೆ ಅಭಿವೃದ್ಧಿಿ ಕಾಮಗಾರಿಗೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದಿವೆ.
ಬಾಕ್ಸ್
ಇಂಡಿಯಾ ಮೈತ್ರಿಿಕೂಟದಲ್ಲಿ ಸೀಟು ಹಂಚಿಕೆ ಹಗ್ಗಜಗ್ಗಾಾಟ
ಇಂಡಿಯಾ ಮೈತ್ರಿಿಕೂಟದ ಪ್ರಮುಖ ಪಕ್ಷವಾದ ಆರ್ಜೆಡಿ 135-140 ಸ್ಥಾಾನಗಳಿಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಆರ್ಜೆಡಿಯು ಕಾಂಗ್ರೆೆಸ್ಗೆ 50-52 ಸ್ಥಾಾನ ನೀಡುವ ಸಾಧ್ಯತೆ ಇದೆ.
ಆದರೆ ಕಾಂಗ್ರೆೆಸ್ 70 ವಿಧಾನಸಭಾ ಕ್ಷೇತ್ರಗಳನ್ನು ನೀಡುವಂತೆ ಒತ್ತಡ ಹೇರುತ್ತಿಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆೆಸ್ 70 ಸ್ಥಾಾನಗಳಿಗೆ ಸ್ಪರ್ಧಿಸಿದ್ದು, ಕೇವಲ 19 ಸ್ಥಾಾನಗಳನ್ನು ಗೆದ್ದಿತ್ತು. ಇತ್ತ ಇಂಡಿಯಾ ಮೈತ್ರಿಿಕೂಟದ ಇನ್ನೊೊಂದು ಪ್ರಮುಖ ಅಂಗಪಕ್ಷವಾದ ಸಿಪಿಐ (ಎಂಎಲ್) ಲಿಬರೇಶನ್ಗೆ 20-25 ಸ್ಥಾಾನಗಳನ್ನು ನೀಡಲಾಗಿದ್ದು, ಅದು ಕೂಡಾ ಅಸಮಾಧಾನಗೊಂಡಿದೆ.ಕಳೆದ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂಎಲ್) 19 ಸ್ಥಾಾನಗಳಲ್ಲಿ ಸ್ಪರ್ಧಿಸಿದ್ದು, 12ರಲ್ಲಿ ಜಯಗಳಿಸಿದೆ. ಈ ಸಲ ಅದು 40 ಸ್ಥಾಾನಗಳನ್ನು ನೀಡುವಂತೆ ಆಗ್ರಹಿಸಿದೆ ಎಂದು ತಿಳಿದು ಬಂದಿದೆ.