ಸುದ್ದಿಮೂಲ ವಾರ್ತೆ
ಕುಷ್ಟಗಿ, ಮೇ.16: ಕುಷ್ಟಗಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರು ಗೆಲುವು ಸಾಧಿಸಿ ದ ಹಿನ್ನಲೆಯಲ್ಲಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿ ಅವರ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ಹರಕೆ ತಿರಿಸದ್ದಾರೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡನಗೌಡ ಎಚ್. ಪಾಟೀಲ್ ಅವರು ಗೆದ್ದರೆ 101 ಟೆಂಗಿನಕಾಯಿ ಒಡೆಸುವುದಾಗಿ ಅಭಿಮಾನಿಗಳು ಐನಾಪೂರ ಶ್ರೀಆಂಜನೇಯ ಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ದೊಡ್ಡನಗೌಡ ಪಾಟೀಲ್ ರ ಅಭಿಮಾನಿಗಳು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 101 ಕಾಯಿ ಒಡೆದು ಹರಕೆ ತಿರಿಸಿದರು.
ಈ ವೇಳೆ ಬಿಜೆಪಿ ಯುವ ಮುಖಂಡರಾದ ಕರಿಯಪ್ಪ ದಂಡಿನ, ಮಲೇಶಗೌಡ, ಬಾಳಪ್ಪ ಕೇರಿಹೋಲ, ನಾಗರಾಜ ದಂಡಿನ, ನಾಗರಾಜ ಬಳ್ಳಾರಿ, ಯಲ್ಲಾಲಿಂಗ ಕುರಿ, ಬಸವರಾಜ ಹೊಸಪೇಟೆ, ರಾಮಣ್ಣ ಕೆರಿಹೋಲ. ದೊಡ್ಡಬಸವ,
ರಮೇಶ ಗೋನಾಳ, ನಿಂಗಪ್ಪ ಕುರಿ, ಪಾಂಡಪ್ಪ ಕುರಿ, ಬಸವರಾಜ ಕುರಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.