ಸುದ್ದಿಮೂಲ ವಾರ್ತೆ ರಾಯಚೂರು, ನ.27:
ಅಧಿಕಾರಕ್ಕಾಾಗಿ, ಸ್ವಾಾರ್ಥ ರಾಜಕಾರಣಕ್ಕಾಾಗಿ ಕಾಂಗ್ರೆೆಸ್ ಸರ್ಕಾರ ಕಚ್ಚಾಾಟದಲ್ಲಿ ತೊಡಗಿಸಿಕೊಂಡು ಜನ ಸಾಮಾನ್ಯರ, ರೈತರ ಸಮಸ್ಯೆೆಗಳ ನಿರ್ಲಕ್ಷಿಿಸಿದ ಭ್ರಷ್ಟ ಸರ್ಕಾರದ ವಿರುದ್ಧ ನ.28ರಿಂದ ಜಿಲ್ಲೆೆಯ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಮಾಜಿ ಸಂಸದ ಬಿ.ವಿ.ನಾಯಕ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ,
ಎರಡು ಜಿಲ್ಲೆಯ ಜೀವನಾಡಿ ತುಂಗಭದ್ರ ಎಡದಂಡೆ ಕಾಲುವೆಯ ಅಚ್ಚು ಕಟ್ಟು ಪ್ರದೇಶಕ್ಕೆೆ ಎರಡನೆ ಬೆಳೆಗೆ ನೀರು ಕೊಡದೆ ವಂಚಿಸಿದ್ದು, ನೀರು ಹರಿಸದಿದ್ದರೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತರು ಭತ್ತ, ಹತ್ತಿಿ, ತೊಗರಿ, ಮೆಕ್ಕೆೆ ಜೋಳಗಳಿಗೆ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ. ಬೆಂಬಲ ಬೆಲೆಯಲ್ಲಿ ನೀಡಿ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಮಾಡಬೇಕಾದ ಸರ್ಕಾರ ಅಧಿಕಾರ ಕಚ್ಚಾಾಟದಲ್ಲಿ ತೊಡಗಿದೆ. ತುಂಗಭದ್ರಾಾ ಜಲಾಶಯದ ಕ್ರಸ್ಟಗೇಟ್ ಅಳವಡಿಸಲು ದೊರೆತ ಸಮಯದಲ್ಲಿ ಗೇಟ್ ಅಳವಡಿಸದೆ ವಿಳಂಬ ಮಾಡುತ್ತಿಿದೆ. ಎರಡನೇ ಬೆಳೆಗೆ ನೀರು ಹರಿಸಲು ಅವಕಾಶವಿದ್ದರೂ ಜಲಾಶಯ ಗೇಟು ಅಳವಡಿಸುವ ವಿಚಾರದ ಹೆಸರಿನಲ್ಲಿ ರೈತರಿಗೆ ವಂಚಿಸಲಾಗುತ್ತಿಿದೆ. ಗ್ಯಾಾರೆಂಟಿ ಹೆಸರಿನಲ್ಲಿ ಸರ್ಕಾರ ರೈತ, ಕಾರ್ಮಿಕ, ಮಹಿಳಾ, ದಲಿತ ವಿರೋಧಿ ನೀತಿ ಅನುಸರಿಸುತ್ತಿಿದ್ದು ಇದನ್ನು ಖಂಡಿಸಿ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲ ಅಧಿವೇಶನದಲ್ಲಿ ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಚಾರ, ಎಸ್ಇಪಿ, ಟಿಎಸ್ಪಿ ಅನುದಾನ ದುರ್ಬಳಕೆ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಾಚಾರ ತಾಂಡವವಾಡುತ್ತಿಿದ್ದು ಈ ಹಿನ್ನೆೆಲೆಯಲ್ಲಿ ಬಿಜೆಪಿಯಿಂದ ಕೈಗೊಳ್ಳುತ್ತಿಿರುವ ರೈತ ಪರ ಹೋರಾಟಕ್ಕೆೆ ಜನ ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರ ಜವಾಬ್ದಾಾರಿಯುತವಾಗಿ ನಡೆಯದೆ ರೈತರ ಸಮಸ್ಯೆೆಗಳಿಗೆ ಸ್ಪಂದಿಸುವಲ್ಲಿ ವಿಲವಾಗಿದೆ. ಎನ್ಡಿಆರ್ಎಪ್ ಮತ್ತು ಎಸ್ಡಿಆರ್ಎ್ ನಿಯಮಗಳಂತೆ ಪರಿಹಾರ ನೀಡುತ್ತಿಿಲ್ಲ. ಕೇಂದ್ರ ಸರ್ಕಾರ ರಾಜ್ಯ ಮನವಿ ಆಧಾರಿಸಿ ಪರಿಹಾರ ಒದಗಿಸಲಿದೆ ಎಂದರು. ಕೂಡಲೇ ಹತ್ತಿಿ, ಭತ್ತ, ತೊಗರಿ, ಮೆಕ್ಕಜೋಳ,ಈರುಳ್ಳಿಿ ಖರೀದಿ ಕೇಂದ್ರಗಳ ಆರಂಭಿಸಿ ನೆರವಿಗೆ ಧಾವಿಸಬೇಕು ಎಂದರು. ಸುದ್ದಿಗೋಷ್ಟಿಿಯಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಾಗವಾಟ್, ಮಾಧ್ಯಮ ವಕ್ತಾಾರ ಕೆ.ಎಂ.ಪಾಟೀಲ್, ಜೆ.ಶರಣಪ್ಪಗೌಡ ಸಿರವಾರ, ರಾಘವೇಂದ್ರ ಉಟ್ಕೂರು, ಸಿದ್ದನಗೌಡ ನೆಲಹಾಳ, ಸಂತೋಷ ರಾಜಗುರು ಇದ್ದರು.
ರೈತರ ಸಮಸ್ಯೆೆ, ಭ್ರಷ್ಟಾಾಚಾರ ವಿರೋಧಿಸಿ ನ.28ರಿಂದ ತಾಲೂಕುಗಳಲ್ಲಿ ಪ್ರತಿಭಟನೆಗೆ ಬಿಜೆಪಿ ನಿರ್ಧಾರ

