ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.19
ದ್ವೇಷ ಭಾಷಣ ಪ್ರತಿಬಂದಕ ವಿಧೇಯಕದ ಬಗ್ಗೆೆ ವಿಧಾನ ಪರಿಷತ್ತಿಿನಲ್ಲಿ ಸುದೀರ್ಘ ಚರ್ಚೆ ಮತ್ತು ಪ್ರತಿಪಕ್ಷಗಳ ವಿರೋಧದ ಮಧ್ಯೆೆಯೂ ಅಂಗೀಕಾರಗೊಂಡಿತು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025ನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಗುರುವಾರ ವಿಧಾನ ಪರಿಷತ್ತಿಿನಲ್ಲಿ ಮಂಡಿಸಿದರು.
ಈ ವೇಳೆ ಮಾತನಾಡಿದ ಅವರು, ಧಾರ್ಮಿಕ, ರಾಜಕೀಯದ ವಿಷಯಗಳನ್ನು ಮಾತನಾಡುವ ಸಂದರ್ಭದಲ್ಲಿ ಅನೇಕರು ಸಂಘರ್ಷ ಉಂಟುಮಾಡುವಂತಹ ಮಾತುಗಳನ್ನು ಆಡಿ ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಪ್ರಯತ್ನ ಮಾಡುತ್ತಾಾರೆ. ಇತ್ತೀಚೆಗೆ ಸುಪ್ರೀೀಂ ಕೋರ್ಟ್ ಮುಖ್ಯ ನ್ಯಾಾಯಾಧೀಶರನ್ನೇ ಬಿಡುತ್ತಿಿಲ್ಲ ಎಂದು ಹೇಳಿದರು.
ನಾನು ಈಗ ಮೂರನೇ ಬಾರಿಗೆ ಗೃಹ ಸಚಿವ ಆಗಿರುವುದು. ಕಳೆದ ಹತ್ತು ವರ್ಷಗಳಲ್ಲಿ ದ್ವೆೆಷ ಭಾಷಣದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇತ್ತೀಚಿನ ಮೂರು ವರ್ಷಗಳನ್ನು ಗಮನಿಸುವುದಾದರೆ, 2023ರಲ್ಲಿ 66 ಪ್ರಕರಣಗಳು, 2024ರಲ್ಲಿ 82 ಪ್ರಕರಣಗಳು ಮತ್ತು 2025ರಲ್ಲಿ ಈವರೆಗೆ 59 ಪ್ರಕರಣಗಳು ನಡೆದಿವೆ. ಕೋಮುಗಲಭೆಗೆ ಕಾರಣವಾಗುವಂತಹ ಪ್ರಚೋಧನಕಾರಿ ಮಾತರನಾಡುವ ಮೂಲಕ ಯುವಕರನ್ನೂ ಸಾವಿನ ದವಡೆಗೆ ದೂಡುವ ಪ್ರಯತ್ನಗಳು ನಡೆಯುತ್ತಿಿವೆ. ಇಂತಹದ್ದಕ್ಕೆೆ ಕಡಿವಾಣ ಹಾಕಲು ಈ ವಿಧೇಯಕದ ಅಗತ್ಯವಿದೆ ಎಂದರು.
ಈ ವಿಧೇಯಕವು ವ್ಯಕ್ತಿಿ ವ್ಯಕ್ತಿಿಗಳ ಸಮೂಹ, ಸಂಸ್ಥೆೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂತಹ ಅಪರಾಧಗಳಿಗೆ ದಂಡನೆ ವಿಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರ ಒದಗಿಸಲು ಇದು ಅನಿವಾರ್ಯ. ಇಂತಹ ಅಪರಾಧವನ್ನುಎಸಗಿದರೆ ಒಂದು ವರ್ಷಕ್ಕೆೆ ಕಡಿಮೆ ಇಲ್ಲದ ಹಾಗೂ ಏಳು ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾಗೃಹವಾಸದೊಂದಿಗೆ 50 ಸಾವಿರ ರೂ. ದಂಡ ವಿಧಿಸಲಾಗುವುದು. ಪುನರಾವರ್ತಿತ ಅಪರಾಧಿಗಳಿಗೆ ಎರಡು ವರ್ಷಕ್ಕೆೆ ಕಡಿಮೆ ಇಲ್ಲದ ಹಾಗೂ ಏಳು ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾಗೃಹವಾಸದೊಂದಿಗೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಪ್ರತಿಪಕ್ಷಗಳಿಂದ ತೀವ್ರ ಖಂಡನೆ:
ಕೆ.ಎಸ್. ನವೀನ್ ಮಾತನಾಡಿ, ಪ್ರತಿ ನಾಗರಿಕನಿಗೂ ವಾಕ್ ಸ್ವಾಾತಂತ್ರ್ಯ ಸಂವಿಧಾನ ಬದ್ದವಾಗಿ ನೀಡಲಾಗಿದೆ. ದೇಶಕ್ಕೆೆ ಅಪಮಾನ ಮಾಡುವಂತಹ, ಭದ್ರತೆಗೆ ಧಕ್ಕೆೆ ತರದಂತಹ ಮಾತುಗಳಿಗೆ ಈಗಗಲೇ ಇರುವ ಕಾನೂನುಗಳಲ್ಲಿಯೇ ನಿರ್ಬಂಧ ಇದೆ. ಆದರೆ, ಈಗ ಮತ್ತೊೊಂದು ವಿಧೇಯಕದ ಮೂಲಕ ಯಾರು ಏನು ಮಾತನಾಡಬೇಕು ಎಂದು ಸರ್ಕಾರವೇ ನಿರ್ಧರಿಸಲು ಹೊರಟಂತಿದೆ. ಇದು ವಿರೋಧ ಪಕ್ಷದವರನ್ನು ಕಟ್ಟಿಿಹಾಕುವ ಕೆಲಸ ಮಾತ್ರ ಇದರ ಉದ್ದೇಶ. ಹೀಗಾಗಿ ಸದನ ಸಮಿತಿಗೆ ಒಪ್ಪಿಿಸಿ ಸದ್ಯಕ್ಕೆೆ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸಿ.ಟಿ. ರವಿ ಮಾತನಾಡಿ, ಇದು ರಾಜ್ಯದಲ್ಲಿ ತುರ್ತು ಪರಿಸ್ಥಿಿತಿ ತರಲು ಹೊರಟಿರುವುದರ ಸಂಕೇತ. ಧಾರ್ಮಿಕ ಮತ್ತು ರಾಜಕೀಯ ಮುಖಂಡರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಈ ಕಾನೂನು ತರಲಾಗುತ್ತಿಿದೆ. ದ್ವೇಷ ಭಾಷಣ ನಿರ್ಧರಿಸುವ ಅಧಿಕಾರ ಪೊಲೀಸರಿಗೆ ನೀಡಲಾಗಿದೆ. ಕೆಲವರನ್ನು ಗುರಿಯಾಗಿಸಿಕೊಂಡು ಅವರನ್ನು ತುಳಿಯುವ ಕೆಲಸ ಇದರಿಂದ ನಡೆಯಬಹುದು. ಇದು ದ್ವೇಷ ಭಾಷಣದ ವಿರುದ್ಧದ ಮಸೂದೆಯಲ್ಲ. ಬದಲಿಗೆ ಸರ್ಕಾರವನ್ನು ಯಾರು ವಿರೋಧಿಸುತ್ತಾಾರೋ ಅವರಿಗಾಗಿ ತರುತ್ತಿಿರುವ ಮಸೂದೆ ಎಂದು ಖಂಡಿಸಿದರು.
ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕೋಮುವಾದ ಮಟ್ಟಹಾಕಬೇಕಾದರೆ ದ್ವೇಷ ಭಾಷಣ ಮಟ್ಟ ಹಾಕಬೇಕು. ಈ ದೇಶ ಒಂದು ಜಾತಿ, ಒಂದು ಭಾಷೆ, ಒಂದು ಧರ್ಮದವರಿಗೆ ಮೀಸಲು ಅಲ್ಲ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿಿದ್ದು, ಅದಕ್ಕೆೆ ಕಡಿವಾಣ ಹಾಕಲು ಈ ವಿಧೇಯಕ ಅಗತ್ಯ ಎಂದರು.
ವಿಧೇಯಕ ಉದ್ದೇಶಿಸಿ ಡಿ.ಟಿ. ಶ್ರೀನಿವಾಸ್ , ಟಿ.ಎ. ಶರವಣ, ಪ್ರತಾಪ ಸಿಂಹ ನಾಯಕ್, ಭಾರತಿ ಶೆಟ್ಟಿಿ, ಪಿ.ಎಚ್. ಪೂಜಾರ, ವೈಎಂ ಸತೀಶ್, ನಾಗರಾಜ್ ಯಾದವ್, ಎಸ್.ವಿ. ಸಂಕನೂರು, ಶಿವಕುರ್ಮಾ ಕೆ., ಹಾಗೂ ಎನ್. ರವಿಕುಮಾರ್ ಸೇರಿ ಹಲವರು ಮಾತನಾಡಿದರು. ವಿರೋಧ ಪಕ್ಷಗಳು ಇದನ್ನು ಈಗಲೇ ಜಾರಿ ಮಾಡದೆ ಸದನ ಸಮಿತಿಗೆ ಒಪ್ಪಿಿಸುವಂತೆ ಆಗ್ರಹಿಸಿದರ ಮಧ್ಯೆೆಯೂ ವಿಧೇಯಕಕ್ಕೆೆ ಅಂಗೀಕಾರ ನೀಡಲಾಯಿತು.ಚಿ

