ಸುದ್ದಿಮೂಲ ವಾರ್ತೆ ಬೆಂಗಳೂರು, ಅ.12:
ದೇಶದ ಏಕತೆಗೆ ವಿರುದ್ಧವಾಗಿರುವ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಚಟುವಟಿಕೆ ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಕೋರಿ ಗ್ರಾಾಮೀಣಾಭಿವೃದ್ಧಿಿ ಸಚಿವ ಪ್ರಿಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಾಯಿಸಿದ್ದಾರೆ. ಈ ಪತ್ರ ಸಬಂಧ ಬಿಜೆಪಿ ನಾಯಕರೆಲ್ಲರೂ ಸಚಿವ ಪ್ರಿಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.
ಪ್ರಿಿಯಾಂಕ್ ಖರ್ಗೆ ಅವರು ಅ.4ರಂದು ಮುಖ್ಯಮಂತ್ರಿಿಗಳಿಗೆ ಈ ಪತ್ರ ಬರೆದಿದ್ದರು. ಸಚಿವರ ಪತ್ರದ ಮೇಲೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು, ಈ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿದ್ದರು.
ಪತ್ರದಲ್ಲಿ ಕೋರಿದ್ದೇನು?
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಮೈದಾನಗಳಲ್ಲಿ ಶಾಖೆಗಳನ್ನು ನಡೆಸುತ್ತಿಿದೆ. ಅಲ್ಲಿ ಘೋಷಣೆಗಳನ್ನು ಕೂಗಲಾಗುತ್ತದೆ. ಮಕ್ಕಳು ಮತ್ತು ಯುವಕರ ಮನಸ್ಸಿಿನಲ್ಲಿ ನಕಾರಾತ್ಮಕ ವಿಚಾರ ತುಂಬಲಾಗುತ್ತದೆ. ಹೀಗೆ ಸರ್ಕಾರಿ ಸಂಸ್ಥೆೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ಆರ್ಎಸ್ಎಸ್ನ ಎಲ್ಲ ಚಟುವಟಿಕೆ ನಿಷೇಧಿಸಬೇಕು. ಆರ್.ಎಸ್.ಎಸ್ ಕ್ರಮಗಳು ಭಾರತದ ಏಕತೆ ಮತ್ತು ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿವೆ ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಕೋರಿದ್ದರು.
ಆರ್ಎಸ್ಎಸ್ನ ನಂಬಿಕೆ ವ್ಯವಸ್ಥೆೆಯು ‘ಭಾರತದ ಏಕತೆ ಮತ್ತು ಜಾತ್ಯತೀತ ಚೌಕಟ್ಟಿಿನ ಆದರ್ಶಗಳಿಗೆ ವಿರುದ್ಧವಾಗಿದೆ. ಜನರಲ್ಲಿ ದ್ವೇಷವನ್ನು ಬಿತ್ತುವ ವಿಭಜಕ ಶಕ್ತಿಿಗಳು ತಲೆ ಎತ್ತಿಿದಾಗ, ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲ ತತ್ವಗಳ ಮೇಲೆ ಸ್ಥಾಾಪಿತವಾದ ನಮ್ಮ ಸಂವಿಧಾನವು ಅಂತಹ ಅಂಶಗಳನ್ನು ನಿಗ್ರಹಿಸಲು ಮತ್ತು ರಾಷ್ಟ್ರದ ಜಾತ್ಯತೀತ ಮೌಲ್ಯಗಳನ್ನು ಎತ್ತಿಿಹಿಡಿಯಲು ನಮಗೆ ಅಧಿಕಾರವನ್ನು ನೀಡುತ್ತದೆ ಎಂದು ಸಚಿವರು ಬರೆದಿದ್ದಾರೆ.
ಪೊಲೀಸರ ಅನುಮತಿ ಪಡೆಯದೇ, ಕೋಲುಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸಲಾಗುತ್ತಿಿದೆ. ಇದು ಮಕ್ಕಳು ಮತ್ತು ಯುವಜನರ ಮೇಲೆ ಹಾನಿಕಾರಕ ಮಾನಸಿಕ ಪರಿಣಾಮ ಬೀರಬಹುದು. ದೇಶದ ಮಕ್ಕಳು, ಯುವಕರು, ಸಾರ್ವಜನಿಕರು ಮತ್ತು ಒಟ್ಟಾಾರೆಯಾಗಿ ಸಮಾಜದ ಯೋಗಕ್ಷೇಮದ ಹಿತದೃಷ್ಟಿಿಯಿಂದ, ’ಶಾಖೆ’, ’ಸಂಘಿಕ್’ ಅಥವಾ ‘ಬೈಠಕ್’ ಹೆಸರಿನಲ್ಲಿ ಆರ್ಎಸ್ಎಸ್ನ ನಡೆಸುವ ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕೆಂದು ನಾನು ಪ್ರಾಾಮಾಣಿಕವಾಗಿ ವಿನಂತಿಸುತ್ತೇನೆ ಎಂದಿದ್ದಾರೆ.
ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು, ಸಾರ್ವಜನಿಕ ಆಟದ ಮೈದಾನಗಳು, ಉದ್ಯಾಾನವನಗಳು, ಮುಜರಾಯಿ ಇಲಾಖೆ ಅಡಿಯಲ್ಲಿರುವ ದೇವಾಲಯಗಳು, ಪುರಾತತ್ವ ಇಲಾಖೆ ಅಡಿಯಲ್ಲಿರುವ ಸ್ಥಳಗಳು ಮತ್ತು ಯಾವುದೇ ಇತರ ಸರ್ಕಾರಿ ಆವರಣಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಅವರು ಹೇಳಿದರು.
ಸಂವಿಧಾನವು ನಾಗರಿಕರು ಮತ್ತು ರಾಜ್ಯ ಇಬ್ಬರಿಗೂ ವಿಭಜನೆಯನ್ನು ಹರಡುವ ಶಕ್ತಿಿಗಳ ವಿರುದ್ಧ ಕಾರ್ಯನಿರ್ವಹಿಸಲು ಅಧಿಕಾರ ನೀಡುತ್ತದೆ. ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಅವರು ಒತ್ತಿಿ ಹೇಳಿದ್ದಾರೆ.
ಕಾಂಗ್ರೆೆಸ್ ಪಕ್ಷವನ್ನೇ ಮೊದಲು ನಿಷೇಧಿಸಬೇಕು: ಅಶೋಕ್
ರಾಜ್ಯ ಕಾಂಗ್ರೆೆಸ್ ಸರ್ಕಾರಕ್ಕೆೆ ಆರ್ಎಸ್ಎಸ್ ನಿಷೇಧ ಮಾಡುವ ಅಧಿಕಾರವೇ ಇಲ್ಲ. ಆದರೂ ಸುಮ್ಮನೆ ಮಾತನಾಡುವ ಚಟ ತೋರಿಸುತ್ತಿಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆೆಸ್ ನಾಯಕರಿಗೆ ಬುದ್ಧಿಿ ಭ್ರಮಣೆಯಾಗಿದೆ. ಈ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯದ ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಹೀಗೆ ಎಲ್ಲರೂ ರಾಷ್ಟ್ರೀಯ ಸ್ವಯಂಸೇವಕ ಸಂಘದವರೇ ಆಗಿದ್ದಾರೆ. ಭಯೋತ್ಪಾಾದಕರಿಗೆ ಕುಮ್ಮಕ್ಕು ನೀಡುವ ಕಾಂಗ್ರೆೆಸ್ ಪಕ್ಷವನ್ನು ಮೊದಲು ನಿಷೇಧ ಮಾಡಬೇಕಿದೆ. ಕಾಂಗ್ರೆೆಸ್ ಪಕ್ಷ ಸೀಮಿತವಾಗಿದೆ. ಆದರೆ ಆರ್ಎಸ್ಎಸ್ ಇಡೀ ದೇಶದಲ್ಲಿದೆ. ಆರ್ಎಸ್ಎಸ್ ಮುಟ್ಟಲು ಯಾರಿಗೂ ಸಾಧ್ಯವಿಲ್ಲ. ಈ ಸಂಘ ರಾಷ್ಟ್ರೀಯತೆ ಕಲಿಸುವ ಒಂದು ಕೇಂದ್ರ. ಅಲ್ಲಿಗೆ ಯಾರು ಬೇಕಾದರೂ ಹೋಗಿ ಭಾಗವಹಿಸಬಹುದು. ಕಾಂಗ್ರೆೆಸ್ಗೆ ಆರ್ಎಸ್ಎಸ್ ನಿಷೇಧ ಮಾಡುವಷ್ಟು ತಾಕತ್ತು ಇಲ್ಲ ಎಂದು ಹೇಳಿದ್ದಾರೆ.
ಕೋಟ್ಸ್…
ಜವಾಬ್ದಾಾರಿಯುತ ಸ್ಥಾಾನದಲ್ಲಿರುವ ಪ್ರಿಿಯಾಂಕ್ ಖರ್ಗೆಯವರು ಆರೆಸ್ಸೆೆಸ್ ಚಟುವಟಿಕೆ ನಿಷೇಧದ ಕುರಿತು ಇಷ್ಟೊೊಂದು ಬೇಜವಾಬ್ದಾಾರಿಯಿಂದ ಮುಖ್ಯಮಂತ್ರಿಿಗಳಿಗೆ ಪತ್ರ ಬರೆದಿದ್ದಾರೆ ಎಂದರೆ, ಇದು ಅವರ ಮೂರ್ಖತನದ ಪ್ರದರ್ಶನ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಾಧ್ಯಕ್ಷ
ಸಂಘದ ವಿರೋಧ ಅದು ರಾಷ್ಟ್ರದ ವಿರೋಧವೇ ಆಗುತ್ತದೆ. ಯಾಕೆಂದರೆ ಸಂಘ ರಾಷ್ಟ್ರೀಯ ಹಿತದಲ್ಲಿ ಕೆಲಸ ಮಾಡುತ್ತಿಿರುವ ಒಂದು ಸಂಘಟನೆ. ರಾಷ್ಟ್ರದ್ರೋಹಿಗಳು ಮತ್ತು ಸಂಘವನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಅದನ್ನು ವಿರೋಧಿಸುತ್ತಾಾರೆ.
– ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ
ಆರ್ಎಸ್ಎಸ್ ಚಟುವಟಿಕೆಗೆ ಕಡಿವಾಣ ಹಾಕುವಂತೆ ಸಿಎಂಗೆ ಪತ್ರ ಬರೆದಿದ್ದು ಕೋರಿದ್ದೇನೆ. ಒಂದು ವೇಳೆ ಈ ಅಧಿಕಾರ ನನಗೇ ಇದ್ದರೆ ಬ್ಯಾಾನ್ ಮಾಡಿಬಿಡುತ್ತಿಿದ್ದೆ. ಧರ್ಮ ರಕ್ಷಣೆ, ಗೋ ರಕ್ಷಣೆ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ಆಗುತ್ತಿಿದೆ. ದೊಡ್ಡ ನಾಯಕರು ತಮ್ಮ ಮಕ್ಕಳಿಗೆ ತ್ರಿಿಶೂಲ ದೀಕ್ಷೆ, ಬ್ರಹ್ಮಚಾರ ದೀಕ್ಷೆ ನೀಡದೆ ಕೇವಲ ಬಡವರ ಮಕ್ಕಳನ್ನು ಮಾತ್ರ ಈ ಕೆಲಸಕ್ಕೆೆ ಬಳಸಿಕೊಳ್ಳುತ್ತಿಿದ್ದಾರೆ.
-ಪ್ರಿಿಯಾಂಕ್ ಖರ್ಗೆ, ಗ್ರಾಾಮೀಣಾಭಿವೃದ್ಧಿಿ ಸಚಿವ