ಸುದ್ದಿಮೂಲವಾರ್ತೆ
ಕಾರಟಗಿ,ಏ.೭- ಕನಕಗಿರಿ ವಿಧಾನ ಸಭಾ ಕ್ಷೇತ್ರದ ಸಿದ್ದಾಪುರ ಹೋಬಳಿಯ ವ್ಯಾಪ್ತಿಯ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡರಾದ ಜಿ.ಪಂ.ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ಕೆ.ಎನ್. ಪಾಟೀಲ್, ಚಂದ್ರುಗೌಡ ಪೊಲೀಸ್ ಪಾಟೀಲ್ ಅವರು ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಸಿದ್ಧರಾಮಯ್ಯ ಅವರು ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಸೇರ್ಪಡೆ ಮಾಡಿಕೊಂಡು ಬಳಿಕ ಮಾತನಾಡಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ .ಕಾರಣ ಕನಕಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಪಕ್ಷದ ಅಭ್ಯರ್ಥಿಯಾಲಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರನ್ನು ಗೆಲ್ಲಿಸಿ ತರಬೇಕೆಂದರು.
ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಘೋಷಿತ ಅಭ್ಯರ್ಥಿ ಶಿವರಾಜ ಎಸ್. ತಂಗಡಗಿ, ಕೊಪ್ಪಳ ಜಿ.ಪಂ ಮಾಜಿ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ ಹೊಸಮನಿ, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಮುಖಂಡರುಗಳಾದ ಕೆ. ಸಿದ್ದನಗೌಡ, ಶಿವರೆಡ್ಡಿ ನಾಯಕ ವಕೀಲ, ರೆಡ್ಡಿ ಶ್ರೀನಿವಾಸ, ಗೋಪಿಕೃಷ್ಣ, ವೇಂಕಟೇಶ್ವರರಾವ್, ಗದ್ದೆಪ್ಪ ನಾಯಕ, ರುದ್ರಗೌಡ ನಂದಿಹಳ್ಳಿ, ಜನಗಂಡೆಪ್ಪ ಪೂಜಾರ ಸೇರಿದಂತೆ ಪಕ್ಷದ ಪ್ರಮೂಖರು ಮತ್ತು ಕಾರ್ಯಕರ್ತರಿದ್ದರು.