ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ವಾಲ್ಮೀಕಿ ಅಭಿವೃದ್ಧಿಿ ನಿಗಮದ ಖಾತೆಯಿಂದ 89 ಕೋಟಿ ಹಣ ವರ್ಗಾವಣೆಯಾಗಿರುವ ಬಗ್ಗೆೆ ಸರ್ಕಾರ ಒಪ್ಪಿಿಕೊಂಡಿದ್ದು, ಈ ಹಣವನ್ನ ವಸೂಲಿ ಮಾಡಿರುವ ಬಗ್ಗೆೆ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಿಲ್ಲ. ಭ್ರಷ್ಟಾಾಚಾರ ಹಾಗೂ ಹಗರಣದಲ್ಲಿ ಸಿಲುಕಿರುವ ಕಾಂಗ್ರೆೆಸ್ ಸರ್ಕಾರದ ’ಕೈ’ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಚರ್ಚೆ ವೇಳೆ ಮಾತನಾಡಿದ ನವೀನ್, ರಾಜ್ಯಪಾಲರ ಭಾಷಣದಲ್ಲಿ ಹೊಸ ಯೋಜನೆಗಳ ಬಗ್ಗೆೆಯೂ ಉಲ್ಲೇಖಿಸಿಲ್ಲ. ಉದ್ದೇಶಿತ ಯೋಜನೆಗಳಿಗಷ್ಟೇ ಸೀಮಿತವಾಗಿದೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರೇ ಒಪ್ಪಿಿಕೊಂಡಿರುವಂತೆ ವಾಲ್ಮೀಕಿ ನಿಗಮದ 89 ಕೋಟಿ ಹಣ ವಸೂಲಿ ಆಗಿದೆಯಾ ಎಂಬುದು ಭಾಷಣದಲ್ಲಿ ನಮೂದಿಸಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಗ್ಯಾಾರಂಟಿ ಯೋಜನೆಗಳ ಮೂಲಕ ಖಜಾನೆ ಬರಿದಾಗಿದೆ. ಕಳೆದ ೆಬ್ರುವರಿ ಹಾಗೂ ಮಾರ್ಚ್ನ ಎರಡು ತಿಂಗಳ ಗೃಹಲಕ್ಷ್ಮೀ ಹಣ ಏನಾಯಿತು ಎಂಬುದನ್ನ ತಿಳಿಸಿಲ್ಲ. ಆರ್ಥಿಕ ಇಲಾಖೆಗೆ ಪ್ರಸ್ತಾಾವನೆ ಕಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಅನುದಾನ ಬಿಡುಗಡೆಗೆ ಅನುಮತಿಯನ್ನ ಸಿದ್ದರಾಮಯ್ಯ ನೀಡಿಲ್ಲ. ಭ್ರಷ್ಟಾಾಚಾರ ಹಾಗೂ ಹಗರಣಗಳಲ್ಲಿ ತೊಡಗಿಸಿಕೊಂಡಿರುವ ಸರ್ಕಾರದ ಕೈ ಇದೀಗ ಸಾಲ ಮಾಡುವ ಸ್ಥಿಿತಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣದಲ್ಲಿ ಸುಳ್ಳಿಿನ ಸರಮಾಲೆ:
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲೆ ಮಾತನಾಡಿದ ಡಿ.ಎಸ.ಅರುಣ್, ಸಿಎಂ ಹಾಗೂ ಡಿಸಿಎಂ ಸಮ್ಮುಖದಲ್ಲಿ ನಡೆದಿದ್ದ ಆರ್ ಸಿಬಿ ವಿಜಯೋತ್ಸವ ವೇಳೆ ಉಂಟಾಗಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರ ಸಾವು ಪ್ರಕರಣ ಸಂಬಂಧ ಸರ್ಕಾರ ಕ್ಷಮೆ ಕೇಳಿಲ್ಲ. ಕನಿಷ್ಠ ಪಕ್ಷ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಿಲ್ಲ. ರಾಮ್ ಜೀ ಯೋಜನೆಗಳ ಬಗ್ಗೆೆ ಭಾಷಣದ 11 ಪ್ಯಾಾರಾಗಳ ಬಗ್ಗೆೆ ವಿರೋಧಿಸುವ ಮೂಲಕ ಸುಳ್ಳು ಹೇಳಿಸಲಾಗಿದೆ. ಗ್ಯಾಾರಂಟಿಯಿಂದಾಗಿ ರಾಮ್ ಜೀ ಯೋಜನೆಗೆ ಹಣ ಹೊಂದಿಸಲು ಅಸಾಧ್ಯವಾಗಲಿದೆ. ಈ ಕಾರಣಕ್ಕಾಾಗಿ ಕೇಂದ್ರದ ಹೊಸ ಕಾಯ್ದೆೆ ವಿರೋಧಿಸಲಾಗುತ್ತಿಿದೆ ಎಂದು ವ್ಯಾಾಖ್ಯಾಾನಿಸಿದರು.
ಬಿಜೆಪಿ ಸದಸ್ಯೆೆ ಭಾರತಿಶೆಟ್ಟಿಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ ಆತ್ಯಾಾಚಾರ ಹಾಗೂ ದೌರ್ಜನ್ಯ ಪ್ರಕರಣಗಳ ಹೆಚ್ಚಾಾಗುತ್ತಿಿದ್ದರೂ ಶಿಕ್ಷೆ ಪ್ರಮಾಣ ಕಡಿಮೆಯಿದೆ. ಸದನ ಹೊರಗೆ ಹಾಗೂ ಒಳಗೆ ಹೆಣ್ಣುಮಕ್ಕಳ ಅಗೌರವ ತೋರಿಸಲಾಗುತ್ತಿಿದೆ. ಮಹಿಳೆಯರ ಶೀಲದ ಬಗ್ಗೆೆ ಹಗುರವಾಗಿ ಮಾತನಾಡದಂತೆ ಮನವಿ ಮಾಡಿಕೊಂಡರು.
ಸಿ.ಟಿ.ರವಿಗೆ ಡಾಕ್ಟರೇಟ್ ಗೆ ಸದನ ಅಭಿನಂದನೆ
ಭಾರತದಲ್ಲಿ ಸಮ್ಮಿಿಶ್ರ ಸರ್ಕಾರಗಳ ಸಮಸ್ಯೆೆಗಳು ಹಾಗೂ ಸವಾಲುಗಳು ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆೆ ಮೇಲ್ಮನೆ ಸದಸ್ಯ ಸಿ.ಟಿ.ರವಿ ಅವರಿಗೆ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಾಲಯವು ಡಾಕ್ಟರೇಟ್ ಪದವಿ ನೀಡಿದೆ. ಪಿಎಚ್ ಡಿ ಪದವಿ ಪಡೆದ ರವಿ ಅವರಿಗೆ ಸದನ ಅಭಿನಂದಿಸಿತು.
ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಆರೋಪ ಭ್ರಷ್ಟಾಚಾರದ ಸುಳಿಯಲ್ಲಿ ಕೈ ಸರ್ಕಾರ

