ಸುದ್ದಿಮೂಲ ವಾರ್ತೆ
ಮೈಸೂರು, ಮೇ 18: ರಾಜ್ಯದಲ್ಲಿ ಕ್ಯಾಸಿನೊ ಪ್ರಾರಂಭಿಸಿದ್ದೇ ಬಿಜೆಪಿಯವರು. ಅದರಲ್ಲೂ ಮೈಸೂರಿಗೆ ಕ್ಯಾಸಿನೊ ಸಂಸ್ಕೃತಿ ಪರಿಚಯಿಸಿದ್ದು ಮಾಜಿ ಸಚಿವ ಅಶ್ವಥ್ ನಾರಾಯಣ್. ನಾನು ಪಬ್, ಹುಕ್ಕಾಬಾರ್ ಜೂಜು ಅಡ್ಡೆಗಳನ್ನ ಮುಚ್ಚಿಸಿಯೇ ತೀರುತ್ತೇನೆ ಎಂದು ಚಾಮರಾಜ ಕ್ಷೇತ್ರದ ನೂತನ ಶಾಸಕ ಹರೀಶ್ ಗೌಡ ಶಪಥ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಸದ್ಯಕ್ಕೆ ಹುಕ್ಕಾ ಬಾರ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಗರ ಕೆಲವು ಭಾಗಗಳಲ್ಲಿ ಅದು ಇದೆ. ಮೈಸೂರು ನಗರದಲ್ಲಿ ಮೂರರಿಂದ ನಾಲ್ಕು ಭಾಗದಲ್ಲಿ ಕ್ಯಾಸಿನೋ ನಡೆಯುತ್ತಿದೆ. ಬಿಜೆಪಿಯವರು ಕ್ಯಾಸಿನೋ ಪರಂಪರೆಯನ್ನ ಬೆಳೆಸುತ್ತಿದ್ದಾರೆ ಎಂದು ಟೀಕಿಸಿದರು.
ಚಾಮರಾಜ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಭದ್ರಕೋಟೆ. ಇಲ್ಲಿ ಗೆದ್ದರೆ ಕಾಂಗ್ರೆಸ್ ಜೆಡಿಎಸ್ ಮಾತ್ರ ಗೆಲ್ಲಬೇಕಿತ್ತು. ಕಳೆದ ಬಾರಿಯ ಗೊಂದಲದಿಂದ ಬಿಜೆಪಿ ಗೆದ್ದಿತ್ತು. ಚುನಾವಣೆಗಾಗಿ ಯಾರಿಂದಲೂ ಹಣ ಪಡೆದಿಲ್ಲ. ನಾನು ಪಕ್ಷ ನೀಡಿದ ಹಣದಲ್ಲಿ ಚುನಾವಣೆ ಮಾಡಿದ್ದೇನೆ. ಯಾವ ಪಬ್, ಬಾರ್ ಹುಕ್ಕ ಬಾರ್, ಜೂಜು ಅಡ್ಡೆಗಳನ್ನ ನೂರಕ್ಕೆ ನೂರು ಮುಚ್ಚಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ನಗರಾಧ್ಯಕ್ಷ ಆರ್ ಮರ್ತಿ ಹಾಗೂ ಮತ್ತಿತರರು
ಉಪಸ್ಥಿತರಿದ್ದರು.