ಸುದ್ದಿಮೂಲ ವಾರ್ತೆ ಮೈಸೂರು, ಅ.05:
ಸದ್ಯದಲ್ಲೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಇದು ಪಂಚ ಗ್ಯಾಾರಂಟಿಗಳಷ್ಟೇ ಸತ್ಯ ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಫೋೋಟಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಿರಲಿ, ಕಾಂಗ್ರೆೆಸ್ ಶಾಸಕರೇ ನವೆಂಬರ್ನಲ್ಲಿ ಕ್ರಾಾಂತಿ ಆಗುತ್ತದೆ ಎಂದು ಬಹಿರಂಗವಾಗಿಯೇ ಹೇಳುತ್ತಿಿದ್ದಾರೆ. ನಾಯಕತ್ವ ಬದಲಾವಣೆಯ ಬಗ್ಗೆೆ ಮಾತನಾಡಬೇಡಿ ಎಂದು ವೇಣುಗೋಪಾಲ್ ಹೇಳುತ್ತಾಾರೆ. ಅದೇ ವೇಳೆ ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳುತ್ತಾಾರೆ. ಇದರ ಅರ್ಥವೇನು? ಎಂದು ಪ್ರಶ್ನಿಿಸಿದರು.
ಆದರೆ ಹೈಕಮಾಂಡ್ ಎಲ್ಲೂ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳುತ್ತಿಿಲ್ಲ.ಬಿಹಾರ ರಾಜ್ಯದ ಚುನಾವಣೆ ಬಳಿಕ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗುವುದು ಗ್ಯಾಾರಂಟಿ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ ಆಗುವುದು ಪಂಚ ಗ್ಯಾಾರಂಟಿಗಳಷ್ಟೇ ಸತ್ಯ ಎಂದು ಹೇಳಿದರು.
ನವೆಂಬರ್ ಕ್ರಾಾಂತಿ ಬಗ್ಗೆೆ ಎಂದು ಕಾಂಗ್ರೆೆಸ್ ನಲ್ಲಿ ಗುಲ್ಲೆಬ್ಬಿಿದೆ. ನವೆಂರ್ಬ ಕ್ರಾಾಂತಿಗೂ ಜಾತಿಗಣತಿ ಕ್ರಾಾಂತಿಗೂ ಸಂಬಂಧ ಇರುವಂತೆ ಚರ್ಚೆ ನಡೆಯುತ್ತಿಿದೆ. ಇದೆಲ್ಲಾ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗುವ ಲಕ್ಷಣಗಳೇ ಎಂದು ಪ್ರತಿಪಾದಿಸಿದರು.
ಸಮೀಕ್ಷೆ ಗೊಂದಲ
ಜಾತಿಗಣತಿ ಸಮೀಕ್ಷೆಯಲ್ಲಿ ಎಷ್ಟು ಗೊಂದಲ ಇದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಪ್ರತಿಕ್ರಿಿಯೆ ನೋಡಿದರೆ ಗೊತ್ತಾಾಗುತ್ತದೆ. 60 ಪ್ರಶ್ನೆೆಗಳನ್ನು ಜನರ ಮುಂದಿಟ್ಟಿಿದ್ದಾರೆ. ರಾಜ್ಯ ಸರ್ಕಾರ ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೇ ಆತುರದ ನಿರ್ಧಾರ ತೆಗೆದುಕೊಂಡಿದೆ. ವಿಶೇಷ ಚೇತನರನ್ನು ಸೇರಿಸಿಕೊಂಡಿರುವುದಕ್ಕೆೆ ಟೀಕೆಗಳು ವ್ಯಕ್ತವಾಗುತ್ತಿಿವೆ. ಸಿದ್ದರಾಮಯ್ಯನವರಿಗೆ ಇಷ್ಟೊೊಂದು ಆತುರ ಯಾಕೆ ಎಂಬುದೇ ಪ್ರಶ್ನೆೆ ಎಂದು ಟೀಕಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಿಗೂ ಸಾಮಾಜಿಕ ನ್ಯಾಾಯ ಸಿಗಬೇಕು ಎಂಬುದು ಇದು ನಮ್ಮ ಪಕ್ಷದ ನಿಲುವು ಕೂಡ. ದೇಶದಾದ್ಯಂತ ಜಾತಿಗಣತಿ ಮಾಡುತ್ತೇವೆ ಎಂದು ಪ್ರಧಾನಮಂತ್ರಿಿಗಳು ಘೋಷಣೆ ಮಾಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ಈ ರೀತಿ ಗೊಂದಲ ಸೃಷ್ಟಿಿಮಾಡುವ ಅವಶ್ಯಕತೆ ಇರಲಿಲ್ಲ. ಸಿದ್ದರಾಮಯ್ಯ ಬಹಳ ಆತುರದಲ್ಲಿದ್ದಾರೆ. ಇದು ಸರಿಯಲ್ಲ ಎಂದು ಟೀಕಿಸಿದರು.