ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.02: ರಾಜ್ಯ ಸರಕಾರ ಬರ ಘೋಷಿಸಲು ವಿಫಲ, ಲೋಡ್ ಶೆಡ್ಡಿಂಗ್ ಮಾಡುವುದು ವಿರೋಧಿಸಿ ಬಿಜೆಪಿ ರೈತ ಮೋರ್ಚ ಸೇರಿ ವಿವಿಧ ಮೋರ್ಚಗಳಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲೆಯ ರೈತ ಮೋರ್ಚ ಅಧ್ಯಕ್ಷ ಲಂಕೇಶ ಗುಳದಳ್ಳಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಒಂದೇ ಬೆಳೆಗೆ ನೀರಾವರಿಯಾಗುವುದು ಕಷ್ಟ. ಈಗ ಕಾರ್ಖಾನೆಗೆ ಬಿಡುತ್ತಿರುವ ನೀರು ನಿಲ್ಲಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರ ಎಲ್ಲಾ ಹಂತದಲ್ಲಿಯೂ ಸರಕಾರ ವಿಫಲವಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಗಣ್ಣ ಕರಡಿ ಸ್ಥಳೀಯ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ಬರ ಛಾಯೆ ಇದೆ. ಈಗಾಗಲೇ ಸಮಿಕ್ಷೆ ಮಾಡಿದ್ದಾರೆ. ಕೊಪ್ಪಳ ಸೇರಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ರಾಯರಡ್ಡಿಯವರು ಸಿಎಂ ಗೆ ಪತ್ರ ಬರೆದಿದ್ದು ಸ್ವಾಗತಾರ್ಹ ಆದರೆ ಜಿಲ್ಲೆ ಮಂತ್ರಿಗಳು ಅರಿತುಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿದರು.
ತುಂಗಭದ್ರಾ ಜಲಾಶಯದಿಂದ ರಾಜ್ಯದ ಕೋಟಾದಡಿ ಅರ್ಧ ಟಿಎಂಸಿ ನೀರು ಬಿಡಬೇಕು. ತಂಗಡಗಿ ಲೋಕಸಭಾ ಸದಸ್ಯರು ಏನು ಮಾಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಬರ ಘೋಷಣೆಗೆ ನಿಯಮ ಸಡಿಲಿಸಲು ದೇಶದಾದ್ಯಂತ ಕ್ರಮ ಕೈಗೊಳ್ಳಬೇಕು. ಆದರೆ ಬರ ನಿರ್ವಹಣೆಯಲ್ಲಿ ರಾಜ್ಯ ಸರಕಾರಕ್ಕೆ ಕಾಳಜಿ ಇಲ್ಲ. ರಾಜ್ಯ ಸರಕಾರವು ಕೇವಲ ಗ್ಯಾರಂಟಿ ಯೋಜನೆಗೆ ಒತ್ತು ನೀಡಿದ್ದಾರೆ. ಕಿಸಾನ ಸಮ್ಮಾನ ಯೋಜನೆಯ ಹಣ ವಾಪಸ್ಸು ಪಡೆದಿದ್ದಾರೆ. ರೈತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ಹಿಂಪಡೆದಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಖರೀದಿ ಮಾಡಲು ಸರಕಾರದ ಬಳಿಯಲ್ಲಿ ಹಣವಿಲ್ಲ. ಸಾಕಷ್ಟು ಟಿಸಿಗಳು ಹಾಳಾಗಿವೆ. ಆದರೆ ಇಲ್ಲಿ ವಿದ್ಯುತ್ ಉತ್ಪಾದನೆಗೆ ಕಡಿಮೆ ಇದೆ. ಈಗ ವಿದ್ಯುತ್ ಖರೀದಿಸಬೇಕು ಆದರೆ ಸರಕಾರ ಈ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ ಎಂದರು.
ಇಂಡಿಯಾ ಪಕ್ಷ ಮಾಡಿರುವುದು ರಾವಣನಿಗೆ ಹತ್ತು ತಲೆ ಇದ್ದಂಗ. ಇದು ಸಕ್ಸಸ್ ಆಗೋದಿಲ್ಲ.ಕಿಚಡಿ ಪಕ್ಷ ಕರೆದಿದ್ದಾರೆ ಎಂದು ಹೇಳಿದರು.
ವಿಶೇಷ ಅಧಿವೇಶನದಲ್ಲಿ ಏಕ ರೂಪ ಕಾಯ್ದೆ. ಒಂದು ದೇಶ ಒಂದು ಚುನಾವಣೆಯು ಜಾರಿ ಚರ್ಚೆಯಾಗುವ ಸಾಧ್ಯತೆ ಇದೆ. ಇನ್ನೂ ಅಜೆಂಡ ನನಗೆ ಗೊತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಮಹೇಶ ಹಾದಿಮನಿ. ಅಂದಪ್ಪ ಯಲ್ಲಮ್ಮನವರ ಇದ್ದರು.