ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.16:ವಿದ್ಯುತ್ ದರ ಏರಿಕೆ. ಗೃಹಪಯೋಗಿ ವಿದ್ಯುತ್ ಮೂರು ಪಟ್ಟು ಹೆಚ್ಚಳ. ಮತಾಂತರ ಕಾಯ್ದೆ ಹಿಂಪಡೆಯುವ ರಾಜ್ಯ ಸರಕಾರದ ವಿರುದ್ದ ಇಂದು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ದ ಘೋಷಣೆ ಹಾಕಿದರು. ವಿದ್ಯುತ್ ದರ ಇಳಿಕೆ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ ಗ್ಯಾರಂಟಿ ಯೋಜನೆಗಳು ಜಾರಿಯಾಗುವಲ್ಲಿ ಸ್ಪಷ್ಠತೆ ಇಲ್ಲ. ಈಗ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರು ಕೊರಳಿಗೆ ನಾಗರಹಾವು ಕಟ್ಟಿಕೊಂಡಿದ್ದಾರೆ. ಯಾವಾಗ ನಿಮ್ಮನ್ನು ಕಚ್ಚುತ್ತದೆ ಎಂಬುವುದು ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ 9.5 ಲಕ್ಷ ಸಣ್ಣ ಕೈಗಾರಿಕೆಗಳಿವೆ. ಸಣ್ಣ ಕೈಗಾರಿಕೆಗಳಿಂದಲೇ ನಮ್ಮ ಜಿಡಿಪಿ ಭದ್ರವಾಗಿದೆ. ಆದರೆ ಸಿದ್ದರಾಮಯ್ಯ ಸರಕಾರ ವಿದ್ಯುತ್ ಹೆಚ್ಚಳ ಮಾಡಿದ್ದರಿಂದ ಸಣ್ಣ ಕೈಗಾರಿಕೆಗಳು ಬಂದ್ ಆಗಲಿವೆ. ಗೃಹಪಯೋಗಿ ವಿದ್ಯುತ್ ದರವನ್ನು ಮೂರು ಪಟ್ಟು ಹೆಚ್ಚಿಸಿದ್ದು ಗ್ರಾಹಕರು ಕಷ್ಟ ಪಡುವಂತಾಗಿದೆ ಎಂದರು.
ಗೃಹ ಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನರು ಯಾರು ಎಂಬುವುದನ್ನು ಗುರುತಿಸುವಲ್ಲಿ ಮುಂದಿನ ದಿನಗಳಲ್ಲಿ ಅತ್ತೆ ಸೋಸೆಯ ಮಧ್ಯೆ ಜಗಳವಾಗುತ್ತದೆ. ಮನೆ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ರಾಷ್ಟ್ರೀಯ ನಾಯಕರ ಪಠ್ಯವನ್ನು ಬದಲಾಯಿಸುತ್ತೇನೆ. ಸುಪ್ರಿಂ ಕೋರ್ಟು ಬಲವಂತದ ಮತಾಂತರ ಮಾಡಬಾರದು ಎಂದು ಹೇಳಿದೆ. ಆದರೆ ಕಾಂಗ್ರೆಸ್ ಸರಕಾರ ಮತಾಂತರ ಕಾಯ್ದೆ ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಈ ಸರಕಾರದಲ್ಲಿ ಹೊಸ ಯೋಜನೆಗಳಿಲ್ಲ. ಜನ ಭ್ರಮನಿರಸನವಾಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗೊಂದಲವಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಕವಲೂರು. ಪ್ರದೀಪ ಹಿಟ್ನಾಳ. ಸುನೀಲ ಹೆಸರೂರು, ವಾಣಿಶ್ರೀ ಮಠದ, ಮಹಾಲಕ್ಷ್ಮಿ ಕಂದಾರಿ, ಗಣೇಶ ಹೊರತಟ್ನಾಳ, ಮಂಜುನಾಥ ಹಂದ್ರಾಳ. ಡಿ ಮಲ್ಲಣ್ಣ. ಮಂಜುಳಾ ಕರಡಿ ಸೇರಿ ಹಲವರು